ಬೆಂಗಳೂರು, (ಜೂನ್.22): ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್‌ಸಿ ಬಾಲಕೃಷ್ಣ ಅವರ ಪುತ್ರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯೆ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಗ್ರೆಸ್ ನಾಯಕ ಎಚ್‌ಸಿ ಬಾಲಕೃಷ್ಣ ಮಗಳಾದ ಡಾಕ್ಟರ್ ರಚನ ಅವರಿಗೆ ಕೊರೋನಾ ತಗುಲಿದೆ. ಈ ಬಗ್ಗೆ ಸ್ವತಃ  ಎಚ್‌ಸಿ ಬಾಲಕೃಷ್ಣ ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಅಡುಗೆ ಭಟ್ಟ, ತಂದೆ ಬೆನ್ನಲ್ಲೇ ಇದೀಗ ಸಚಿವ ಸುಧಾಕರ್ ಮನೆ ಸಹಾಯಕರಿಗೂ ಕೊರೋನಾ ಪಾಸಿಟಿವ್

ಮಾಗಡಿ ಬಾಲಕೃಷ್ಣ ಆದ ನಾನು  ನನ್ನ ಮಗಳಾದ  ಡಾಕ್ಟರ್ ರಚನ ,ಅವಳು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಕೊರೋನಾ (Covid-19) ಪರೀಕ್ಷೆ ಮಾಡಿಸಿದಾಗ, ಪರೀಕ್ಷಾ ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಂದೆಗೂ ಕೊರೋನಾ ಸೋಂಕು ದೃಢಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.