Asianet Suvarna News Asianet Suvarna News

Bagalkote: ಎಸ್​ಸಿ ಎಸ್​ಟಿ ಅನುದಾನ 'ಗ್ಯಾರಂಟಿ'ಗೆ ಬಳಸಿದ್ದಕ್ಕೆ ಮಾದಿಗ ಮಹಾಸಭಾ ವಿರೋಧ!

ಸರ್ಕಾರ ಒಂದೆಡೆ ತಾನು ಘೋಷಿಸಿಕೊಂಡ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಹೊಂದಿಸಲು ಹರಸಾಹಸ ಪಟ್ಟು ಇತ್ತ ಎಸ್​​ಸಿ ಎಸ್​ಟಿ ಅನುದಾನವನ್ನ ಬಳಸಿಕೊಂಡಿದ್ದು, ಇದೀಗ ರಾಜ್ಯ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗಿದೆ. 

Madiga Mahasabha opposes the use of SC ST grant for guarantee schemes gvd
Author
First Published Sep 25, 2023, 10:43 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಸೆ.25): ಸರ್ಕಾರ ಒಂದೆಡೆ ತಾನು ಘೋಷಿಸಿಕೊಂಡ ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಹೊಂದಿಸಲು ಹರಸಾಹಸ ಪಟ್ಟು ಇತ್ತ ಎಸ್​​ಸಿ ಎಸ್​ಟಿ ಅನುದಾನವನ್ನ ಬಳಸಿಕೊಂಡಿದ್ದು, ಇದೀಗ ರಾಜ್ಯ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗಿದೆ. ಈ ನಡುವೆ ಲೋಕಸಭಾ ಚುನಾವಣೆಗೂ ಮುನ್ನ ನಿರಂತರ 3 ತಿಂಗಳು ರಾಜ್ಯಾದ್ಯಂತ ಕಾಂಗ್ರೆಸ್​ ಸರ್ಕಾರದ ವಿರುದ್ದ  ಮಾದಿಗ ಮಹಾಸಭಾ ಅಭಿಯಾನಕ್ಕೆ ಮುಂದಾಗಿದೆ, ಈ ಕುರಿತ ವರದಿ ಇಲ್ಲಿದೆ. 

ಹೌದು, ಒಂದೆಡೆ ಗ್ಯಾರಂಟಿಗಳ ಅನುಷ್ಠಾನಕ್ಕೆ ಎಸ್​ಸಿ ಎಸ್​ಟಿ ಅನುದಾನ ಬಳಸಿಕೊಂಡಿರೋ ರಾಜ್ಯ ಸರ್ಕಾರ, ಮತ್ತೊಂದೆಡೆ ಎಸ್​ಸಿ ಎಸ್​ಟಿ ಅನುದಾನ ಬಳಕೆ ವಿರುದ್ದ ಬೀದಿಗಿಳಿಯಲು ಸಜ್ಜಾದ ಮಾದಿಗ ಮಹಾಸಭಾ, ಇವುಗಳ ಮಧ್ಯೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೈ ಸರ್ಕಾರಕ್ಕೆ ಎದುರಾಯ್ತು ನಿಲ್ಲದ ಸಂಕಷ್ಟ. ಅಂದಹಾಗೆ ಇಂತಹವೊಂದು ಅಭಿಯಾನಕ್ಕೆ ಕರೆ ಕೊಟ್ಟಿದ್ದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣಗಳಲ್ಲೊಂದಾಗಿರೋ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದವರಿಗಾಗಿ ಇರಿಸಿದ್ದ 11 ಸಾವಿರ ಕೋಟಿಗೂ ಅಧಿಕ ಹಣವನ್ನ ಇದೀಗ ಬಳಸಿಕೊಂಡಿರೋದು ರಾಜ್ಯ ಮಾದಿಗ ಮಹಾಸಭಾದ ಕಂಗೆಣ್ಣಿಗೆ ಗುರಿಯಾಗಿದೆ. 

ಮುಸ್ಲಿಮರು ಮತ ಹಾಕಿಲ್ಲವೆಂದು ಎಚ್‌ಡಿಕೆ ಎದೆಮುಟ್ಟಿ ಹೇಳ್ತಾರಾ?: ಸಚಿವ ಜಮೀರ್

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ತಿಂಗಳ ಕಾಲ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ದ ಅಭಿಯಾನಯೊಂದನ್ನು ಆರಂಭಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ಜಿಲ್ಲೆಗಳಲ್ಲೂ ಕೂಡ ಜಾಗೃತಿ ಕಾರ್ಯ ಮುಂದುವರೆದಿದ್ದು, ಲೋಕಸಭಾ ಚುನಾವಣೆ ಹತ್ತಿರವಾಗುವ ಈ ಸಮಯದಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ದ ಅಭಿಯಾನ ನಡೆಸಲು ಮುಂದಾಗಿದ್ದು, ಅಭಿಯಾನದ ಸಮಾರೋಪವನ್ನ ಮಾದಿಗ ಮಹಾಸಭಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿದೆ.  ಈ ನಡುವೆ ಜಾಗೃತಿ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ದ ಮತ ಚಲಾಯಿಸುವಂತೆ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲ್ಸ ನಡೆಯಲಿದೆ ಅಂತಾರೆ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ. 
                       
ಮಾತನಾಡದ ಕೈ ನಾಯಕರ ವಿರುದ್ಧ ಅಸಮಾಧಾನ: ರಾಜ್ಯದಲ್ಲಿ 36 ಲಕ್ಷ ಜನ ಸಮುದಾಯದವರಿದ್ದು, ಇವರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಈ ಹಿಂದೆಯೂ ಸಹ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲೂ ಸಮುದಾಯದ ನಿರ್ಣಯಗಳು ಸರ್ಕಾರದ ಏಳುಬೀಳುಗಳಿಗೆ ಕಾರಣವಾಗಿರೋ ಉದಾಹರಣೆಗಳಿವೆ. ಈ ನಡುವೆ ರಾಜ್ಯದಲ್ಲಿ ಪರಿಶಿಷ್ಟರ ಏಳಿಗೆ ಆಗಬೇಕಿದ್ದು, ಅದಕ್ಕಾಗಿ ಅನುದಾನದ ಅಗತ್ಯತೆ ಇದೆ. ಹೀಗಿರುವಾಗ ಎಸ್​ಸಿ ಎಸ್​ಟಿ ಸಮುದಾಯದ ಹಣವನ್ನ ಬಳಸಿಕೊಂಡಿರೋದು ಅಭಿವೃದ್ದಿಗೆ ಹಿನ್ನಡೆಯಾದಂತಾಗುತ್ತೆ. 

ಬಿಎಸ್‌ವೈ ಭೇಟಿಯಾಗಿ ಆಶೀರ್ವಾದ ಪಡೆದ ನಿಖಿಲ್‌ ಕುಮಾರಸ್ವಾಮಿ: ಮಹತ್ವದ ಮಾತುಕತೆ

ಮೇಲಾಗಿ ಕಾಂಗ್ರೆಸ್​ ಪಕ್ಷದಲ್ಲಿರೋ ಸಚಿವರಾದ ಎಚ್​.ಸಿ.ಮಹಾದೇವಪ್ಪ, ಕೆ.ಎಚ್​.ಮುನಿಯಪ್ಪ, ಪ್ರಿಯಾಂಕ ಖರ್ಗೆ, ಆರ್.ಬಿ. ತಿಮ್ಮಾಪೂರ, ಸತೀಶ ಜಾರಕಿಹೊಳಿ ಅವರಂತ ಬುದ್ದಿಜೀವಗಳಿದ್ದು, ಇದರ ಬಗ್ಗೆ ವಿರೋಧ ಮಾಡದೇ ಇರೋದನ್ನ ನೋಡಿದ್ರೆ ಇವ್ರು ಸಹ ಎಸ್​ಸಿ ಎಸ್​ಟಿ ಸಮುದಾಯಕ್ಕೆ ವಂಚಿಸಲಿಕ್ಕೆ ಸಹಕಾರ ಕೊಟ್ಟಂತಾಗುತ್ತೇ ಅನ್ನೋದು ಮಾದಿಗ ಮಹಾಸಭಾದ ಅಭಿಮತ. ಕೂಡಲೇ ಸರ್ಕಾರ ಎಸ್​ಸಿ ಎಸ್​ಟಿ ಅನುದಾನವನ್ನ ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ಎಫೆಕ್ಟ್​ ಆಗೋದು ಫಿಕ್ಸ್​ ಅಂತಾರೆ ಮುಖಂಡರಾದ ಶಿವಾನಂದ ಟವಳಿ.  ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಮಾದಿಗ ಮಹಾಸಭಾ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಅಭಿಯಾನಕ್ಕೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೇ ಅಂತ ಕಾಯ್ದು ನೋಡಬೇಕಿದೆ.

Follow Us:
Download App:
  • android
  • ios