ಜೆಡಿಎಸ್‌ ನಾಯಕರನ್ನೂ ಕಾಂಗ್ರೆಸ್‌ಗೆ ಕರೆದೊಯ್ಯಲು ಮಧುಬಂಗಾರಪ್ಪ ಪ್ಲಾನ್!

ಈಗಾಗಲೇ ಮಧುಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ನಾಯಕ ಕೃಷ್ಣಪ್ಪ ಅವರನ್ನ ಭೇಟಿ ಮಾಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

Madhu bangarappa Meets JDS leader Krishnappa and invites Congress rbj

ತುಮಕೂರು, (ಮಾ.26): ಜೆಡಿಎಸ್ ಮುಖಂಡ ಕೃಷ್ಣಪ್ಪ ಮನೆಗೆ ಮಾಜಿ ಶಾಸಕ ಮಧು ಬಂಗಾರಪ್ಪ ಭೇಟಿ ನೀಡಿ ಸುಮಾರು1 ಗಂಟೆ ಮಾತುಕತೆ ನಡೆಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದೆ.

ಈಗಾಗಲೇ ಮಧುಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ನಾಯಕ ಕೃಷ್ಣಪ್ಪ ಅವರನ್ನ ಭೇಟಿ ಮಾಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

ಜನ್ಮದಿನದಂದು ಒಂದು ದೃಢ ನಿರ್ಧಾರಕ್ಕೆ ಬಂದ ಮಧು ಬಂಗಾರಪ್ಪ

ಇನ್ನು ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಕಾಂಗ್ರೆಸ್​ ಪಕ್ಷಕ್ಕೆ ಬನ್ನಿ ಜೊತೆಗಿರೋಣ ಎಂದು ಕರೆದಿದ್ದೇನೆ. ತೀರ್ಮಾನ ಅವರಿಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.

ನಾನು ಕೃಷ್ಣಪ್ಪ ಜೊತೆಯಲ್ಲಿದ್ದವ್ರು. ಇವತ್ತು ಅವರ ಮನೆಗೆ ಬಂದಿದ್ದೇನೆ. ಈ ತಿಂಗಳ 11 ರಿಂದಲೇ ಕಾಂಗ್ರೆಸ್ಸಿಗನಾಗಿ ಕೆಲಸ ಶುರು ಮಾಡಿದ್ದೇನೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದಾಗ ಕೃಷ್ಣಪ್ಪರಿಂದ ನಮಗೆ ತುಂಬಾ ಸಹಕಾರ ಸಿಕ್ಕಿದೆ. ಕೃಷ್ಣಪ್ಪ ಕೂಡ ಬಂದ್ರೆ ಒಳ್ಳೇದಾಗುತ್ತೆ ಎಂಬುದು ನಮ್ಮ ಭಾವನೆ ಎಂದರು.

ತುಮಕೂರು ಭಾಗದಲ್ಲೂ ಕೂಡ ಸಾಕಷ್ಟು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ವಿಶ್ವಾಸ ಇದೆ. ನಾನು ಕಾಂಗ್ರೆಸ್‌ಗೆ ಹೋಗೋಕೂ ಮುಂಚೆ ಇವರಿಗೆಲ್ಲಾ ಹೇಳಿದ್ದೆ. ಇವತ್ತು ನಾನು ಬಂದಿರೋದ್ರಿಂದ ಪಕ್ಷಕ್ಕೆ ಬನ್ನಿ ಜೊತೆಗಿರೋಣ ಎಂದು ಕರೆದಿದ್ದೇನೆ. ತೀರ್ಮಾನ ಅವರಿಗೆ ಬಿಟ್ಟದ್ದು. ಅವರಿಗೂ ಸಾಕಷ್ಟು ಗ್ರಾಪಂ‌ ಸದಸ್ಯರು ಈ ಭಾಗದಲ್ಲಿದ್ದಾರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios