ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರನ್ನು ಜೆಡಿಎಸ್ ನಾಯಕರು ಮನ ಒಲಿಸಲು ಮುಂದಾಗಿದ್ದಾರೆ. ಮತ್ತೊಂದು ಪಕ್ಷದತ್ತ ಒಲವು ತೋರುತ್ತಿದ್ದು ಈ ನಿಟ್ಟಿನಲ್ಲಿ  ಮನ ಒಲಿಸಲು ಮುಂದಾಗಿದ್ದಾರೆ. 

ಬೆಂಗಳೂರು (ಜ.20): ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಮಧು ಬಂಗಾರಪ್ಪ ಅವರ ಮನ ಒಲಿಸುವ ಯತ್ನವನ್ನು ಪಕ್ಷ ಆರಂಭಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಪಕ್ಷದಿಂದ ದೂರ ಉಳಿದಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ಅವರ ಮನ ಒಲಿಸಿ ಪಕ್ಷದಲ್ಲೇ ಉಳಿಯುವಂತೆ ಮಾಡಲು ಪಕ್ಷದ ಮುಖಂಡರಾದ ಬಸವರಾಜ್ ಹೊರಟ್ಟಿ ಮತ್ತು ಕೋನರೆಡ್ಡಿ ಅವರು ಪ್ರಯತ್ನಿಸಲಿದ್ದಾರೆ ಎಂದು ತಿಳಿದು ಬಂದಿದೆ. 

ಮಧು ಬಂಗಾರಪ್ಪರನ್ನು ಬಿಜೆಪಿಗೆ ಆಹ್ವಾನಿಸಿದ ಕುಮಾರ್ ಬಂಗಾರಪ್ಪ..!

ಸದಾಶಿವ ನಗರದಲ್ಲಿನ ಮಧು ಬಂಗಾರಪ್ಪ ಅವರ ನಿವಾಸಕ್ಕೆ ಬಸವರಾಜ್ ಹೊರಟ್ಟಿ ಕೋನರೆಡ್ಡಿ ತೆರಳಿ ಪಕ್ಷದಲ್ಲಿಯೇ ಉಳಿದುಕೊಳ್ಳುವಂತೆ ಮನವೊಲಿಕೆ ಮಾಡಲಿದ್ದಾರೆ. 

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆಯಂತೆ ನಾಯಕರು ಮಧು ಬಂಗಾರಪ್ಪ ಅವರೊಂದಿಗೆ ಚರ್ಛೆ ನಡೆಸಲು ಮುಂದಾಗಿದ್ದಾರೆ.