Loksabha Elections 2024: ರಾಜ್ಯದಲ್ಲಿ ಕಾಂಗ್ರೆಸ್‌ಗೆ 15 ರಿಂದ 16 ಸೀಟು ಗೆಲುವು: ಸಚಿವ ಕೆ.ಎನ್.ರಾಜಣ್ಣ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 15 ರಿಂದ 16 ಸೀಟು ಗೆಲ್ಲಬಹುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವ್ಯಾಖ್ಯಾನಿಸಿದರು. 

Loksabha Elections 2024 Congress will win 15 to 16 seats in the state Says Minister KN Rajanna gvd

ತುಮಕೂರು (ಮಾ.10): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 15 ರಿಂದ 16 ಸೀಟು ಗೆಲ್ಲಬಹುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವ್ಯಾಖ್ಯಾನಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಕೊಡುವುದರಲ್ಲಿ ವ್ಯತ್ಯಾಸ ಆದರೆ ಹೆಚ್ಚು ಕಡಿಮೆಯಾಗಬಹುದು ಎಂದರು. ಸೋಮವಾರ ಕಾಂಗ್ರೆಸಿನ 2 ನೇ ಲಿಸ್ಟ್ ಬಿಡುಗಡೆಯಾಗಲಿದೆ ಎಂದ ಅವರು ತೆಲಂಗಾಣದಲ್ಲಿ ಸ್ವಲ್ಪ ಲೇಟಾಗ್ತಾ ಇದೆ ಎಂದರು. ಹಾಸನದಲ್ಲಿ ನಾವು ಗೆದ್ದೇ ಗೆಲ್ಲುವುದಾಗಿ ತಿಳಿಸಿದ ರಾಜಣ್ಣ ಹಾಸನದಲ್ಲಿ ಸಿ.ಎಸ್ ಪಟೇಲ್ ಗೆ ಟಿಕೆಟ್ ಸಿಕ್ಕಿದೆ, ಪುಟ್ಟಸ್ವಾಮಿಗೌಡರಿಗೆ ಒಳ್ಳೆ ಹೆಸರಿದೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದಹನುಮೇಗೌಡರಿಗೆ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಆಕಾಂಕ್ಷಿತರಿಗೆ ಅಸಮಾಧಾನ ಇದ್ದೇ ಇರುತ್ತದೆ. ಅದೆಲ್ಲಾ ಸರಿಯಾಗುತ್ತದೆ ಎಂದರು. ಸೀಟು ಘೋಷಣೆ ಆಗುವವರೆಗೂ ಅದು ಸಹಜ. ಘೋಷಣೆ ಆದ ಬಳಿಕ ಎಲ್ಲವೂ ಸರಿಯಾಗುತ್ತದೆ. ಹೈ ಕಮಾಂಡ್ ತೀರ್ಮಾನ ಬಳಿಕ ಎಲ್ಪವೂ ಒಪ್ಪಿಕೊಳ್ಳಬೇಕು ಎಂದ ಅವರು ಜನ ಮುದ್ದಹನುಮೇಗೌಡ ಒಳ್ಳೆಯವರು ಅಂತಾರೆ ಕೆಟ್ಟವರು ಅನ್ನಲ್ಲಾ, ಹಾಗಾಗಿ ಅವರೇ ಗೆಲ್ಲುತ್ತಾರೆ ಎಂದರು. ಜೊತೆಗೆ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಯನ್ನು ಜನ ಮರೆಯುವುದಿಲ್ಲ ಎಂದರು. 

ದಾವಣಗೆರೆಯಲ್ಲಿ ಹಳೆ ಬಸ್ಸು ನಿಲ್ದಾಣ ಹಾಳುಗೆಡವಿದ ಬಿಜೆಪಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಬಿಜೆಪಿ ಸಂಸದ ಜಿ.ಎಸ್ ಬಸವರಾಜ್ ಯಾರಿಗೆ ಬೆಂಬಲ ನೀಡುತ್ತಾರೋ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದರು. ನಮ್ಮದು ಒಂದನೇ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿಯವರದ್ದು ಅದೂ ಆಗಿಲ್ಲ. ಹಾಸನ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿಷ್ಠಿತ. ಯಾಕೆಂದರೆ ಜಾತ್ಯತೀತ ಅಂದುಕೊಂಡು ಅತೀ ಜಾತಿ ಮಾಡುತ್ತಾರಲ್ಲ...ಅವರನ್ನು ಸೋಲಿಸೋದು ಕಾಂಗ್ರೆಸ್ ಗೆ ಪ್ರತಿಷ್ಠೆ ಎಂದರು. ಪಾಕಿಸ್ತಾನವನ್ನು ಯಾರಾದರೂ ಬೆಂಬಲಿಸಿದರೆದ್ರೆ ಗುಂಡಿಕ್ಕಿ ಕೊಲ್ಲಲಿ ಎಂದ ಅವರು ಯುಪಿ ಮಾದರಿಯಲ್ಲಿ ಕಾನೂನು ತರಲಿ ಎಂದರು. ಯುಪಿಯಲ್ಲಿ ಕಾನೂನೇ ಇಲ್ಲ.ಆದರೂ ಸಮಾಜಘಾತುಕರ ಮನೆಗಳನ್ನು ಕೆಡವುತ್ತಾರೆ ಈಗ ಭಯಬಿದ್ದು ಕಂಟ್ರೋಲ್ ಆಗಿಲ್ವಾ ಎಂದರು. 

ನಮ್ಮ 5 ಗ್ಯಾರಂಟಿಗಳಿಂದ ಪ್ರಧಾನಿ ಮೋದಿಯವರಿಗೇ ಶಾಕ್: ಸಚಿವ ಚಲುವರಾಯಸ್ವಾಮಿ

ಹಂಗೆ ಮಾಡಲಿ. ಅಭಿವೃದ್ಧಿಯಾಗಬೇಕು ಅಂದರೆ ಸಮಾಜದಲ್ಲಿ ಶಾಂತಿ ನೆಲೆಸಬೇಕು ಎಂದ ಅವರು ಶಾಂತಿ ನೆಮ್ಮದಿಗಾಗಿ ಇಂತಹ ಕ್ರಮ ಅಗತ್ಯ ಎಂದು ಯೋಗಿ ಆದಿತ್ಯನಾಥ್ ಕ್ರಮ ಶ್ಲಾಘಿಸಿದರು. ನಮ್ಮಲ್ಲಿ ಪೊಲೀಸ್ ಇಲಾಖೆ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು. ಚುನಾವಣೆಗೋಸ್ಕರ ಸಿಲಿಂಡರ್ ರೇಟ್ ಕಡಿಮೆ ಮಾಡಿದ್ದಾರೆ. ಚುನಾವಣೆ ಮುಗಿದ ಬಳಿಕ ಮತ್ತೇ 200 ರು. ಜಾಸ್ತಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಇದು ಮೋದಿದು ತಂತ್ರ ಅಲ್ಲಾ, ಆರ್‌ಎಸ್‌ಎಸ್‌ ಥಿಂಕ್ ಟ್ಯಾಂಕರದ್ದು. ಅವರು ಹೇಳಿದಾಗೆ ಇವರು ಮಾಡುತ್ತಾರೆ. ಎಂದರು.

Latest Videos
Follow Us:
Download App:
  • android
  • ios