ಆ ಪುಣ್ಯಾತ್ಮನಿಗೆ ನಾಚಿಕೆ ಮಾನ ಮರ್ಯಾದೇ ಏನೂ ಇಲ್ಲ: ಅಮಿತ್ ಶಾ ವಿರುದ್ಧ ಸಿಎಂ ಕಿಡಿ

ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ ಸ್ವಾಮಿ, ಎನ್ ಡಿ ಆರ್ ಎಫ್‌ ದುಡ್ಡು‌ ಕೊಡಲು ಹೇಳಿ ಎಂದು ಮೋದಿ ಬಳಿ ಗೋಗರೆದೆನು. ಅಮಿತ್ ಶಾ ಬಳಿ ಸಹ ಹಣ ಬಿಡುಗಡೆ ಮಾಡಲು ಹೇಳಿದೆನು. ಡಿಸೆಂಬರ್ 23ಕ್ಕೆ ಸಭೆ ಕರೆದಿದ್ದೇನೆ, ತೀರ್ಮಾನಿಸಿ ಹಣ ಬಿಡುಗಡೆ ಮಾಡುತ್ತೇನೆ ಅಂದರು. ಆದರೆ ಪುಣ್ಯಾತ್ಮ ಈವತ್ತಿಗೂ ಸಭೆ ಮಾಡಿಲ್ಲ, ಹಣವೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Lok sabha election 2024 Karnataka CM Siddaramaiah outraged against Amit shah at chintradurga rav

ಚಿತ್ರದುರ್ಗ (ಏ.4): ಸಂವಿಧಾನ, ಪ್ರಜಾಪ್ರಭುತ್ವದ ಉಳಿವು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ದಲಿತರು, ಹಿಂದೂಳಿದವರು, ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಂದು ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಮಂತ್ರಿ ಆಗಿದ್ದಾಗ ಒಂದು ಮಾತು ಹೇಳಿದ್ರು, ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾ. ಸಂವಿಧಾನ ಬದಲಾವಣೆ ಬಗ್ಗೆ ಬಹಿರಂಗವಾಗಿ ಮಾತನಾಡಿದ ಅನಂತಕುಮಾರ ಹೆಗ್ಡೆ ಮೇಲೆ ಮೋದಿ, ಅಮಿತ್ ಶಾ ಏಕೆ ಕ್ರಮ ಕೈಗೊಳ್ಳಲಿಲ್ಲ? ಅದರರ್ಥ ಇವರೇ ಹೆಗ್ಡೆ ಬಾಯಿಂದ ಹೇಳಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಸಹ ಸಂವಿಧಾನ ಬದಲಾವಣೆ ಮಾಡ್ತೀವಿ ಎಂದಿದ್ದಾನೆ. ನಾನು ಅವನಿಗೆ 'ಅಮಾವಾಸ್ಯೆ'‌ ಎನ್ನುತ್ತೇನೆ ಎಂದು ಸಿಎಂ ವ್ಯಂಗ್ಯ ಮಾಡಿದರು.

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸಮಾವೇಶ: ಭಾಷಣದ ಮಧ್ಯೆ ಎದ್ದು ಹೊರಟವರಿಗೆ ಗದರಿದ ಸಿಎಂ

ಬಿಜೆಪಿಯವರು ಯಾವ ಕೆಲಸ ಮಾಡಿದ್ದಾರೆ ಹೇಳಿ, ಎಲ್ಲ ಯೋಜನೆಗಳನ್ನು ಮಾಡಿದ್ದು ನಾವು. ಗೋವಿಂದ ಕಾರಜೋಳ ಲೂಟಿ ಹೊಡೆದಿರುವ ಗಿರಾಕಿ. ಮುಧೋಳದಿಂದ ಗೋವಿಂದ ಕಾರಜೋಳ ಬಂದಿದ್ದಾನೆ. ಜಿಗಜಿಣಗಿ ವಿರುದ್ಧ ಚುನಾವಣೆಗೆ ನಿಲ್ಲಬಹುದಿತ್ತಲ್ಲ. ಜಿಗಜಿಣಗಿ, ಕಾರಜೋಳ‌ ನೆಂಟರು ಅದ್ಕೆ‌ಇಲ್ಲಿಗೆ ಬಂದಿದ್ದಾರೆ. ಇನ್ನು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕೆಟ್ಟ ಹೆಸರು ಪಡೆದಿದ್ದಾರೆ. ದೆಹಲಿಯಲ್ಲಿ ಎಸಿ ರೂಮಿನಲ್ಲಿ‌ ಕುಳಿತಿರೋದು ಬಿಟ್ಟರೆ ಏನೂ ಮಾಡಿಲ್ಲ. ಕಾರಜೋಳಗೆ ಹೇಳಿ ಕಳಿಸಿ 'ಬಿಎನ್ ಚಂದ್ರಪ್ಪ ಒಳ್ಳೆಯ ಮನುಷ್ಯ ಗೆಲ್ಲಿಸುತ್ತೇವೆ. ಮಿಸ್ಟರ್ ಕಾರಜೋಳ ಗೋಬ್ಯಾಕ್' ಅಂತಾ ಹೇಳಿಕ ಕಾರ್ಯಕರ್ತರಿಗೆ ಕರೆ ನೀಡಿದರು.

ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಚೆಕ್ ಹಂಚಿದ್ದೆವು. ಆಗ ಗ್ಯಾರಂಟಿ‌ ಜಾರಿ‌ ಮಾಡಲು ಆಗದು ಎಂದು ಬಿಜೆಪಿಯವರು ಹೇಳಿದ್ದರು. ಆದರೆ ನಾವು ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಬಸವಣ್ಣನವರನ್ನು ಸಾಂಸ್ಕೃತಿ ನಾಯಕ ಎಂದು ಮಾಡಿದೆವು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್,  ಬೊಮ್ಮಾಯಿ, ಶೆಟ್ಟರ್ ಯಾರೂ‌ ಮಾಡಿರಲಿಲ್ಲಕ. ಇನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಯೋಜನೆಗೆ 5.300ಕೋಟಿ ಘೋಷಿಸಿದ್ದರು. ಆಗ ಅಂದಿನ ಸಿಎಂ ಬೊಮ್ಮಾಯಿ ಕೇಂದ್ರ ಸರ್ಕಾರವನ್ನು ಹೊಗಳಿದ್ದರು. ಇವತ್ತಿನವರೆಗೆ ಒಂದು ರೂಪಾಯಿ ಸಹ ಕೊಡಲಿಲ್ಲ. ಈ ಅನ್ಯಾಯ ಪ್ರತಿಭಟಿಸಬೇಕೋ ಬೇಡವೋ? ಕೋಪ ಬರುತ್ತಾ ಇಲ್ಲವಾ ಎಂದು ಸಿಎಂ ಪ್ರಶ್ನಿಸಿದರು, ಮುಂದುವರಿದು, ಪ್ರತಿಭಟಿಸಬೇಕೆಂಬುದು ನಿಮ್ಮ ಉತ್ತರವಾದರೆ ಮೊದಲು ಕಾರಜೋಳರನ್ನ ಸೋಲಿಸಿ ಕಳಿಸಿ ಎಂದು ಕರೆ ನೀಡಿದರು.

ಈ ವರ್ಷ 5.300ಕೋಟಿ ಬರುತ್ತದೆಂದು ಶಬರಿಯಂತೆ ಕಾದಿದ್ದೆನು. ನಾವು ಒಂದೂವರೆ ಸಾವಿರ ಕೋಟಿ‌ ಖರ್ಚು‌ ಮಾಡಿದ್ದೇವೆ. ಇನ್ನೂ ನಾಲ್ಕೂ ವರ್ಷದಲ್ಲಿ ಭದ್ರಾ ಯೋಜನೆ ಪೂರ್ಣ ಗೊಳಿಸುತ್ತೇವೆ. ಚುನಾವಣೆಗಾಗಿ ಕೊಡುವ ಭರವಸೆ ಅಲ್ಲ,‌ ಇದು ನಮ್ಮ ಬದ್ಧತೆ. ಚಿತ್ರದುರ್ಗ ಮೆಡಿಕಲ್‌ ಕಾಲೇಜಿಗೆ‌ ಹಣ ಕೊಟ್ಟಿದ್ದು ನಾನು. ಬಿಜೆಪಿ ಸರ್ಕಾರ‌ ಏಕೆ‌ ಕೊಡಲಿಲ್ಲ, ಗಿರಾಕಿಗಳು ಹಣ ತಿಂದಿದ್ದರು ಎಂದು ವ್ಯಂಗ್ಯ ಮಾಡಿದರು.

ಬಿಜೆಪಿಯವರಿಗೆ ಸುಳ್ಳು ಹೇಳುವುದರಲ್ಲಿ‌‌ ನಿಸ್ಸೀಮರು. ಆರೆಸ್ಸೆಸ್ ಟ್ರೈನಿಂಗ್ ಅಂದರೆ ಸುಳ್ಳು ಹೇಳುವ ತರಬೇತಿ. ಬರಗಾಲದ ಬಗ್ಗೆ, ಪರಿಹಾರದ ಬಗ್ಗೆ ಅಮಿತ್ ಶಾ ಸುಳ್ಳು ಹೇಳಿದ್ದಾರೆ. 3ತಿಂಗಳು ವಿಳಂಬವಾಗಿ ಮನವಿ ಕೊಟ್ಟರು ಎಂದು ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಆರು ತಿಂಗಳಲ್ಲಿ ಕೇಂದ್ರಕ್ಕೆ ಮೂರು ಮನವಿ ಪತ್ರ ಕೊಟ್ಟಿದ್ದೇವೆ. ಡಿಸೆಂಬರ್ 19 ಮೋದಿ, 20ರಂದು ಅಮಿತ್ ಶಾ ಭೇಟಿ‌ ಮಾಡಿದ್ದೆನು. ನಾಚಿಕೆ‌,‌ ಮಾನ ಮರ್ಯಾದೆ‌ ಏನೂ‌ ಇಲ್ಲ ಬಡವರ ರಕ್ತ‌‌ ಕುಡಿತಿದ್ದಾರೆ. ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ ಸ್ವಾಮಿ, ಎನ್ ಡಿ ಆರ್ ಎಫ್‌ ದುಡ್ಡು‌ ಕೊಡಲು ಹೇಳಿ ಎಂದು ಮೋದಿ ಬಳಿ ಗೋಗರೆದೆನು. ಅಮಿತ್ ಶಾ ಬಳಿ ಸಹ ಎನ್ ಡಿ ಆರ್ ಎಫ್‌ ದುಡ್ಡು‌ ಬಿಡುಗಡೆ ಮಾಡಲು ಹೇಳಿದೆನು. ಡಿಸೆಂಬರ್ 23ಕ್ಕೆ ಸಭೆ ಕರೆದಿದ್ದೇನೆ, ತೀರ್ಮಾನಿಸಿ ಹಣ ಬಿಡುಗಡೆ ಮಾಡುತ್ತೇನೆ ಅಂದರು. ಆದರೆ ಪುಣ್ಯಾತ್ಮ ಈವತ್ತಿಗೂ ಸಭೆ ಮಾಡಿಲ್ಲ, ಹಣವೂ ನೀಡಿಲ್ಲ ಎಂದು ಕಿಡಿಕಾರಿದರು.

ಬರಪರಿಹಾರ: ಗೃಹ ಸಚಿವ ಅಮಿತ್ ಶಾಗೆ ಕೃಷ್ಣಬೈರೇಗೌಡ ಸವಾಲು!

18.171 ಕೋಟಿ ಬೆಳೆ ಹಾನಿ ಪರಿಹಾರ ಕೇಂದ್ರಕ್ಕೆ ಕೇಳಿದ್ದೇವೆ. ನಾವು 33 ಲಕ್ಷ 25ಸಾವಿರ ರೈತರಿಗೆ‌ ಬರ ಪರಿಹಾರ ನೀಡಿದ್ದೇವೆ. ರಾಜ್ಯದಲ್ಲಿ 4ಲಕ್ಷ 30ಸಾವಿರ ಕೋಟಿ ತೆರಿಗೆ ಸಂಗ್ರಹ ಆಗುತ್ತದೆ. ಕೇಂದ್ರ ಕೇವಲ 50 ಸಾವಿರಸ 257 ಕೋಟಿ ನೀಡುತ್ತದೆ. ಇದು ಅನ್ಯಾಯ ಅನ್ನಿಸಿದರೆ ದಯಮಾಡಿ‌ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿ ಮನವಿ ಮಾಡಿದರು.

ಗಡ್ಡ, ಟೋಪಿ, ಬುರ್ಖಾ ಹಾಕಿರೋರು ಬರಬೇಡಿ ಅಂತ ಯತ್ನಾಳ ಹೇಳ್ತಾರೆ. ಆದರೆ ಮೋದಿ ಸಬ್ ಕಾ ಸಾಥ್ ಅಂತ ಹೇಳ್ತಾರೆ. ಇದು ಸಬ್‌ ಕಾ ಸಾಥ್ ಅಲ್ಲ, ಅದರ ಬದಲು ಸಬ್ ಕಾ‌ ಸರ್ವನಾಶ್ ಎಂದು ಕಿಡಿಕಾರಿದರು. ಮುಸ್ಲಿಂ, ಕುರುಬ ಮತ್ತು ಸರ್ವ ಸಮುದಾಯಕ್ಕೆ ಟಿಕೆಟ್ ಏಕೆ‌ ಕೊಟ್ಟಿಲ್ಲ ಕೊಟ್ಟಿಲ್ಲ. ಬಿಜೆಪಿ ವಿರೋಧಿಸಿದವರಿಗೆ ಇಡಿ,‌ ಇನ್ ಕಂ ಟ್ಯಾಕ್ಸ್ ಬಿಟ್ಟು ಹೆದರಿಸುತ್ತಾರೆ. ಬಿಜೆಪಿ ಜತೆಗೆ ಹೋದರು ಎಲ್ಲವೂ ಸರಿ ಆಗುತ್ತದೆ. ಕೆಎಸ್ ಈಶ್ವರಪ್ಪ ಅವರ ಜತೆ ಬಿಟ್ಟರೆ ಅವರ ಮೇಲೂ ಛೂ ಬಿಡುತ್ತಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios