ರಾಜ್ಯದಲ್ಲಿ ಬಡವರ ಪರ ಇರೋರು ಅಂದ್ರೆ ಅದು ಸಿದ್ದರಾಮಯ್ಯ ಮಾತ್ರ: ಸಚಿವ ತಿಮ್ಮಾಪುರ
ಐದು ವರ್ಷದಲ್ಲಿ ಅಧಿಕಾರದಲ್ಲಿದ್ರೂ ಎರಡು ಕಿಮೀ ರೈಲ್ವೆ ಹಳಿ ನಿರ್ಮಾಣ ಮಾಡಲಾಗದ ಎಂಪಿ ಇದ್ರೆ ಅದು ಗದ್ದಿಗೌಡರು ಎಂದು ಸಂಸದರ ವಿರುದ್ಧ ಸಚಿವ ಆರ್‌ಬಿ ತಿಮ್ಮಾಪುರ ವಾಗ್ದಾಳಿ ನಡೆಸಿದರು
ಬಾಗಲಕೋಟೆ (ಏ.28): ಐದು ವರ್ಷದಲ್ಲಿ ಅಧಿಕಾರದಲ್ಲಿದ್ರೂ ಎರಡು ಕಿಮೀ ರೈಲ್ವೆ ಹಳಿ ನಿರ್ಮಾಣ ಮಾಡಲಾಗದ ಎಂಪಿ ಇದ್ರೆ ಅದು ಗದ್ದಿಗೌಡರು ಎಂದು ಸಂಸದರ ವಿರುದ್ಧ ಸಚಿವ ಆರ್‌ಬಿ ತಿಮ್ಮಾಪುರ ವಾಗ್ದಾಳಿ ನಡೆಸಿದರು
ಇಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗದ್ದಿಗೌಡರು ಇನ್ನೂ ನಿದ್ದೆ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಬಡವರ ಇರೋರು ಅಂದ್ರೆ ಅದು ಸಿದ್ದರಾಮಯ್ಯ. ಅಧಿಕಾರಕ್ಕೆ ಬರುತ್ತಿದ್ದಂತೆ ಕೊಟ್ಟಮಾತಿನಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದರು. ಗ್ಯಾರಂಟಿ ಯೋಜನೆಗಳ ಮೂಲಕ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಜನರ ಮನ ಗೆದ್ದಿದ್ದಾರೆ. ಅಂದು ಇಂದಿರಾಗಾಂಧಿ, ದೇವರಾಜ್ ಅರಸು ಇದ್ರು, ಇಂದು ಬಡವರ ಪರ ಇರೋರು, ಎಲ್ಲರಿಗೂ ಸ್ವಾಭಿಮಾನದಿಂದ ಬದುಕಲು ಅನುಕೂಲ ಮಾಡಿಕೊಟ್ಟವರು ಅಂದ್ರೆ ಸಿದ್ದರಾಮಯ್ಯ ಸರ್ಕಾರ ಎಂದು ಹಾಡಿಹೊಗಳಿದರು.
ಬೆಳಗಾವಿ ಪ್ರಧಾನಿ ಆಗಮನ; ಭಕ್ಷ್ಯ ಭೋಜನ ಇದ್ದರೂ ಎಳನೀರು ಮಾತ್ರ ಸೇವಿಸಿದ ಮೋದಿ!
ನರೇಂದ್ರ ಮೋದಿ ಮಹಾನ್ ಸುಳ್ಳುಗಾರ. ಎಂದೂ ನಿಜ ಮಾತನಾಡದ ಮೋದಿ ಈ ದೇಶದ ಪ್ರಧಾನಿ ಆಗಿದ್ದಾರೆ. ಮೋದಿಯಿಂದ ದೇಶ ರಕ್ಷಣೆ ಮಾಡೋಕೆ ಆಗಲ್ಲ. ಒಬ್ಬ ದುರ್ಬಲ ವ್ಯಕ್ತಿ ದೇಶ ರಕ್ಷಿಸಲು ಆಗಲ್ಲ, ಇದಕ್ಕೆ ಉದಾಹರಣೆ ಮೋದಿ ಎಂದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಆಯ್ಕೆ ಮಾಡಿದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.