ಮತಗಟ್ಟೆ ಗೋಡೆ ಮೇಲೆ 'ನಮ್ಮ ಮತ ನಮ್ಮ ಶಕ್ತಿ' ಬರಹ; ತೆಗೆಸಿದ ಬಿಜೆಪಿ ಶಾಸಕ ದಿನಕರ ಶೆಟ್ಟಿ!

ಮತಗಟ್ಟೆ ಕೇಂದ್ರದಲ್ಲಿ 'ನಮ್ಮ ಮತ ನಮ್ಮ ಹಕ್ಕು' ಬದಲು 'ನಮ್ಮ ಹಕ್ಕು ನಮ್ಮ ಶಕ್ತಿ' ಬರೆದಿದ್ದಕ್ಕೆ ಚುನಾವಣಾಧಿಕಾರಿಗೆ ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಅಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

Lok sabha election 2024 in karnataka kumata MLA Dinakar keshav shetty outraged against election official rav

ಕಾರವಾರ, ಉತ್ತರಕನ್ನಡ (ಮೇ.7): ಮತಗಟ್ಟೆ ಕೇಂದ್ರದಲ್ಲಿ 'ನಮ್ಮ ಮತ ನಮ್ಮ ಹಕ್ಕು' ಬದಲು 'ನಮ್ಮ ಹಕ್ಕು ನಮ್ಮ ಶಕ್ತಿ' ಬರೆದಿದ್ದಕ್ಕೆ ಚುನಾವಣಾಧಿಕಾರಿಗೆ ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಅಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಹಿನ್ನೆಲೆ ಇಂದು ಕುಮಟಾ ಪಟ್ಟಣ ಗಿಬ್ ಅಂಗ್ಲಮಾಧ್ಯಮ ಶಾಲೆ ಮತಗಟ್ಟೆಗೆ  ಮತ ಚಲಾಯಿಸಲು ಬಂದಿದ್ದ ಶಾಸಕ. ಈ ವೇಳೆ ಗೋಡೆಯ ಮೇಲೆ "ನಮ್ಮ ಮತ ನಮ್ಮ ಶಕ್ತಿ' ಬರೆಹ ಕಂಡು ಸಿಡಿಮಿಡಿಗೊಂಡಿದ್ದಾರೆ. ತಕ್ಷಣ ಚುನಾವಣಾ ಸಿಬ್ಬಂದಿಯನ್ನ ಕರೆಯಿಸಿ ಬರಹ ಮರೆಮಾಚಿಸಿರುವ ಶಾಸಕ. ಬಳಿಕ ಚುನಾವಣಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಶಾಸಕರು, ಮತಗಟ್ಟೆಯ ಗೋಡೆಯ ಮೇಲೆ ಈ ರೀತಿ ಬರೆಯುವಂತೆ ಹೇಳಿದವರು ಯಾರು? "ಶಕ್ತಿ' ಎಂಬ ಪದ ಯಾಕೆ ಬಳಕೆ ಮಾಡಿದ್ದೀರಿ? ಶಕ್ತಿ ಎನ್ನುವುದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿಲ್ಲವೇ? ಮತಗಟ್ಟೆಯಲ್ಲಿ ಈ ರೀತಿ ಬಹಳ ದೊಡ್ಡದಾಗಿ ಬರೆದಿರುವುದು ನನಗೆ ಅಸಮಾಧಾನ ತಂದಿದೆ ಎಂದು ಗರಂ ಆದರು. 'ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಬರೆದಿದ್ದಾಗಿ ಚುನಾವಣಾಧಿಕಾರಿ ಸಮಜಾಯಿಷಿ ನೀಡಿದರು. ಅಷ್ಟಕ್ಕೂ ಸುಮ್ಮನಾಗದ ಶಾಸಕರು, ಈ ಕೂಡಲೇ ಗೋಡೆ ಬರಹವನ್ನು ತೆರವುಗೊಳಿಸುವಂತೆ ಸೂಚಿಸಿದರು.

ಗೀತಕ್ಕ ಗೆಲುವು ಗ್ಯಾರಂಟಿ: ಸಚಿವ ಮಧು ಬಂಗಾರಪ್ಪ ವಿಶ್ವಾಸ

Latest Videos
Follow Us:
Download App:
  • android
  • ios