ಕುಮಾರಸ್ವಾಮಿ ಗೆದ್ದರೆ ಕೇವಲ ಸಂಸದರಲ್ಲ. ರಾಜ್ಯದ ಪ್ರತಿನಿಧಿಯಾಗಿ ಕೆಲಸ: ಸಿಎಸ್ ಪುಟ್ಟರಾಜು ಅಭಿಮತ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇವಲ ಸಂಸದರಾಗಿದೇ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. 
 

Lok Sabha Election 2024 Ex Minister CS Puttaraju Talks Over HD Kumaraswamy gvd

ಕೆ.ಆರ್ .ಪೇಟೆ (ಮಾ.31): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇವಲ ಸಂಸದರಾಗಿದೇ ರಾಜ್ಯದ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪಟ್ಟಣದಲ್ಲಿ ನಡೆದ ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಸ್ನೇಹ ಸಮ್ಮಿಲನ ಸಭೆಯಲ್ಲಿ ಮಾತನಾಡಿ, ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ. ಇಲ್ಲಿ ಬಿಜೆಪಿ ನಮ್ಮ ಜೊತೆ ಕೈಜೋಡಿಸಿರುವುದು ನಮಗೆ ಆನೆಬಲ ತಂದಿದೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಜನರು ಮೈತ್ರಿ ಅಭ್ಯರ್ಥಿ ಕುಮಾರಣ್ಣನಿಗೆ ಮತ ನೀಡಬೇಕು. ನಾರಾಯಣಗೌಡ 2ನೇ ಅವಧಿಗೆ ಕ್ಷೇತ್ರದ ಶಾಸಕರಾಗಲು ದೇವೇಗೌಡರ ಕಾಲು ಹಿಡಿದು ನಾನೇ ಟಿಕೆಟ್ ಕೊಡಿಸಿದ್ದೆ ಎಂದು ತಿಳಿಸಿದರು. ಕುಮಾರಣ್ಣನ ಆರೋಗ್ಯದ ಬಗ್ಗೆ ಲಘು ಮಾತನಾಡಿರುವ ಶಾಸಕ ರಮೇಶ ಬಂಡಿಸಿದ್ದೇಗೌಡರಿಗೆ ಅನುಮಾನವಿದ್ದರೆ ಆಸ್ಪತ್ರೆಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ಇವನ್ನು ಲೀಡರ್ ಮಾಡೋಕೆ ಹೋಗಿಯೇ ಕುಮಾರಪ್ಪನ ಆರೋಗ್ಯ ಈ ಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಶ್ವೇತ ಪತ್ರ ಹೊರಡಿಸಲಿ: ಸಚಿವ ಎಚ್‌.ಕೆ.ಪಾಟೀಲ್‌

ಅಂಬರೀಶ್ ಅವರನ್ನು ಸೋಲಿಸಿ ತಾನೂ ಗೆಲ್ಲೋಕೆ ಕುಮಾರಣ್ಣನನ್ನು ಹಳ್ಳಿಗಳಲ್ಲಿ ಬೆಳಗಿನ ಜಾಗ 4 ಗಂಟೆ ತನಕ ಸುತ್ತಿಸುತ್ತಿದ್ರು. ಅವತ್ತಿನಿಂದಲೇ ಕುಮಾರಸ್ವಾಮಿ ಆರೋಗ್ಯ ಕ್ಷೀಣಿಸಿತು. ಕುಮಾರಣ್ಣನಿಗೆ ಅವರ ತಂದೆ ದೇವೇಗೌಡ್ರು ಮತ್ತು ಅವರ ತಾಯಿ ಚನ್ನಮ್ಮನವರ ಆಶೀರ್ವಾದವಿದೆ. ನಾವೆಲ್ಲ ಸೇರಿ ಅವರ ಎದೆಗೆ ಹೊಡೆದರೂ ಕುಮಾರಣ್ಣನ ಹೃದಯ ಬಗ್ಗುವುದಿಲ್ಲ. ಅಷ್ಟು ಗಟ್ಟಿಯಾಗಿದೆ ಎಂದರು.

ಕೂಡಲೇ ತಮ್ಮ ಹೇಳಿಕೆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ತಮ್ಮ ತಾಯಿಗೆ ದೀರ್ಘ ದಂಡ ನಮಸ್ಕಾರ ಹಾಕಿ ಕ್ಷಮೆ ಕೋರುವಂತೆ ರಮೇಶ್ ಬಂಡಿಸಿದ್ದೇಗೌಡರನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಹಣ ಕೊಟ್ಟಂತೆ ಮಾಡಿ ಅದನ್ನು ಗಂಡಸರಿಂದ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಪ್ರಾಣಿ-ಪಕ್ಷಿಗಳಿಗೂ ಶುರುವಾಯ್ತು ನೀರಿಗೆ ಪರದಾಡುವ ಸ್ಥಿತಿ!

ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಕುಮಾರಸ್ವಾಮಿ ಅವರು ಯಶಸ್ಸಿಯಾಗಿ ಚಿಕಿತ್ಸೆ ಮುಗಿಸಿ ಬರಬಾರದು ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ನವರು ಇದ್ದಾರೆ. ರಮೇಶ ಬಂಡಿಸಿದ್ದೇಗೌಡ ರಾಜಕೀಯ ತೆವಲಿಗಾಗಿ ಹೀಗೆ ಮಾತಾಡುತ್ತಿದ್ದಾರೆ. ಈ ರೀತಿ ಮಾತಾಡುವುದು ಸರಿಯಲ್ಲ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.

Latest Videos
Follow Us:
Download App:
  • android
  • ios