MLC Election: ಮೇಲ್ಮನೆ ಬೇಕೋ ಬೇಡವೋ ರಾಜಕೀಯ ಪಕ್ಷಗಳು ಚಿಂತಿಸಲಿ, ಜೋಶಿ

*  ಪರಿಷತ್‌ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ
*  ಕರ್ನಾಟಕದಲ್ಲಿ ಈ ತೆರನಾದ ವ್ಯವಸ್ಥೆ ನಿರ್ಮಾಣವಾಗಿರುವುದು ಕಳವಳಕಾರಿ 
*  ಜನಪ್ರತಿನಿಧಿಗಳು, ಸರ್ಕಾರಕ್ಕೂ ಪರಿಸರದ ಕಳಕಳಿ ಇದೆ
 

Let the Political Parties Decide Vidhan Parishat Election Want or Not Says Pralhad Joshi grg

ಹುಬ್ಬಳ್ಳಿ(ಡಿ.11): ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಹೆಚ್ಚಿನ ಮೊತ್ತದ ಹಣ ಹಂಚಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೊಂದು ಗಂಭೀರ ವಿಚಾರ. ಹೀಗೆ ಮುಂದುವರಿದರೆ ಪರಿಷತ್‌ ಬೇಕೋ ಬೇಡವೋ ಎಂಬ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಚಿಂತನೆ ನಡೆಸಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪರಿಷತ್‌ ಚುನಾವಣೆ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜತೆ ಶುಕ್ರವಾರ ಮಾತನಾಡಿದರು. ಪ್ರಸಕ್ತ ಪರಿಷತ್‌ ಚುನಾವಣೆಯಲ್ಲಿ ಮತದಾರರಿಗೆ(Voters) ದೊಡ್ಡ ಮೊತ್ತದ ಹಣ ಹಂಚಿಕೆ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸಾರ್ವತ್ರಿಕ ಚುನಾವಣೆಗಿಂತ(General Election) ಹೆಚ್ಚಿನ ಮೊತ್ತದ ಖರ್ಚು ಮಾಡಲಾಗುತ್ತಿದೆ ಎನ್ನುವ ಮಾತುಗಳಿವೆ. ಇದು ಒಂದು ರೀತಿ ಭ್ರಷ್ಟಾಚಾರ(Corruption) ಇದ್ದಂತೆ. ಹಣ ತೆಗೆದುಕೊಂಡು ಮತ ಹಾಕಿದ ಮೇಲೆ ಕೆಲಸ ಮಾಡಿಕೊಡುವಂತೆ ಅಭ್ಯರ್ಥಿಗೆ(Candidate) ಕೇಳಲು ಸಾಧ್ಯವಿಲ್ಲ. ಸುಸಂಸ್ಕೃತ ಕರ್ನಾಟಕ(Karnataka) ರಾಜ್ಯದಲ್ಲೂ ಈ ತೆರನಾದ ವ್ಯವಸ್ಥೆ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿ ಎಂದರು.

ಮೋದಿ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿರಲಿ: ಸಿದ್ದುಗೆ ಪ್ರಹ್ಲಾದ ಜೋಶಿ ಎಚ್ಚರಿಕೆ

ದೇಶದ 6 ರಾಜ್ಯಗಳಲ್ಲಿ ಮಾತ್ರ ಪರಿಷತ್‌ ವ್ಯವಸ್ಥೆ ಇದೆ. ದುಡ್ಡು ಕೊಟ್ಟು ಚುನಾಯಿತರಾಗುತ್ತಿರುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು(Political Parties) ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ ಎಂದ ಅವರು, ನಾನು ಪರಿಷತ್‌ ಬೇಡ ಎಂದು ಹೇಳುತ್ತಿಲ್ಲ. ಆದರೆ ಬೇಕೋ ಬೇಡವೋ ಎಂಬ ಚಿಂತನೆಗೆ ಇದು ಸಕಾಲ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಗಂಭೀರ ಆಲೋಚನೆ ಮಾಡಬೇಕು ಎಂದು ಸಲಹೆ ಮಾಡಿದರು.

ಮಹದಾಯಿ:

ಮಹದಾಯಿ(Mahadayi) ಪ್ರಶ್ನೆಗೆ, ಮಹದಾಯಿ ಅಧ್ಯಾದೇಶ ಸ್ಪಷ್ಟೀಕರಣ ನೀಡುವಂತೆ ಕರ್ನಾಟಕ ಹಾಗೂ ಗೋವಾ(Goa) ನ್ಯಾಯಾಧಿಕರಣ ಸುಪ್ರೀಂ(Supreme Court) ಮೊರೆ ಹೋಗಿವೆ. ಕೋರ್ಟ್‌ನಲ್ಲಿ ಈ ಪ್ರಕರಣ ಇರುವಾಗ ಯೋಜನೆ ಆರಂಭಿಸಬೇಕೋ ಬೇಡವೋ ಎಂಬುದರ ತಾಂತ್ರಿಕ ಅಂಶಗಳ ಬಗ್ಗೆ ಹಿರಿಯ ವಕೀಲರು ಜತೆ ಚರ್ಚೆ ನಡೆದಿದೆ. ಯೋಜನೆ ಜಾರಿಗೆ ರಾಜ್ಯ ಸರ್ಕಾರವು(Government of Karnataka) ಈಗಾಗಲೇ ಹಣ ತೆಗೆದಿರಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿ(BJP) ಪಕ್ಷವು ಸ್ಪಷ್ಟ ಬದ್ಧತೆ ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಪರಿಸರವಾದಿಗಳ ಅಡ್ಡಿ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ(Hubballi-Ankola Railway Line) ಪ್ರಶ್ನೆಗೆ, ಪರಿಸರ ಹೆಸರಿನಲ್ಲಿ ಅಭಿವೃದ್ಧಿ ವಿರೋಧ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಯೋತ್ಪಾದಕರು ಸತ್ತಾಗ ಅತ್ತಿದ್ದ ಸೋನಿಯಾ ಗಾಂಧಿ: ಪ್ರಹ್ಲಾದ ಜೋಶಿ

ಜನಪ್ರತಿನಿಧಿಗಳು, ಸರ್ಕಾರಕ್ಕೂ ಪರಿಸರದ ಕಳಕಳಿ ಇದೆ. ಎಲ್ಲದಕ್ಕೂ ಅಡ್ಡಗಾಲು ಹಾಕುವುದೇ ಪರಿಸರವಾದ ಅಲ್ಲ ಎಂದು ವ್ಯಾಖ್ಯಾನಿಸಿದರು. ಆದಷ್ಟು ಪರಿಸರಕ್ಕೆ ಧಕ್ಕೆ ಆಗದಂತೆ ಯೋಜನೆ ರೂಪಿಸಲಾಗುತ್ತದೆ. ಇತ್ತ ಬೇಲೆಕೇರಿ ಮತ್ತು ಕಾರವಾರ ಬಂದರು ಅಭಿವೃದ್ಧಿಗೆ . 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಭಾಗದಲ್ಲಿ ಸುಗಮ ಮತ್ತು ತ್ವರಿತವಾಗಿ ಬಂದರು ಮೂಲಕ ವಸ್ತುಗಳ ಸಾಗಣೆ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೈಗಾರಿಕೆ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಸಾಕಾರಗೊಂಡು, ಬೇಲೇಕೇರಿ ಬಂದರು ಅಭಿವೃದ್ಧಿಗೊಂಡರೆ, ಈ ಭಾಗವು ಅಭಿವೃದ್ಧಿಗೆ ಹೆಬ್ಬಾಗಿಲು ತೆರೆದಂತೆ ಆಗುತ್ತದೆ ಎಂದು ಜೋಶಿ ತಿಳಿಸಿದರು.

ಕಲ್ಲಿದ್ದಲು ಇಲಾಖೆಯಿಂದ(Department of Coal) ಪ್ರತಿವರ್ಷ 26 ಲಕ್ಷ ಸಸಿಗಳನ್ನು ಬೆಳೆಸಿ ನಿರ್ವಹಿಸಲು ಯೋಜನೆ ರೂಪಿಸಿದೆ. ಈ ವರ್ಷ ಮತ್ತೆ 27 ಲಕ್ಷ ಸಸಿಗಳನ್ನು ಬೆಳೆಸಿ ಪರಿಸರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಉತ್ತರಪ್ರದೇಶ. ಉತ್ತರಖಾಂಡ, ಗೋವಾ ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ. ಪಂಜಾಬ್‌ನಲ್ಲಿ ಹೊಸ ಪ್ರಯೋಗದೊಂದಿಗೆ ಮುನ್ನುಗ್ಗುತ್ತಿದ್ದೇವೆ. ಕೆಲವು ರಾಜ್ಯಗಳಲ್ಲಿ ಜರುಗಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಪಾರುಪತ್ಯ ಸಾಧಿಸಲಿದೆ ಎಂದು ಇದೇ ವೇಳೆ ತಿಳಿಸಿದರು.
 

Latest Videos
Follow Us:
Download App:
  • android
  • ios