ನೈತಿಕತೆ ಬಗ್ಗೆ ಹೇಳುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ: ಆರಗ ಜ್ಞಾನೇಂದ್ರ
ಸುಸಂಸ್ಕೃತ, ಭವ್ಯ ಪರಂಪರೆ ಇರುವ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಕೂರಬಾರದು. ಕಳಂಕ ಹೊತ್ತು ಅಧಿಕಾರ ನಡೆಸುವುದು ಸರಿಯಲ್ಲ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ. ವಿಚಾರಣೆ ನಡೆದು ಶುದ್ಧರಾಮಯ್ಯ ಆಗಿ ಹೊರಬಂದು ಮತ್ತೆ ಬೇಕಾದರೆ ಸಿಎಂ ಸ್ಥಾನ ಅಲಂಕರಿಸಲಿ ಎಂದು ಸಲಹೆ ನೀಡಿದ ಮಾಚಿ ಗೃಹ ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ(ಸೆ.26): ಸದಾ ನೈತಿಕತೆ ಪಾಠ ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ನೈತಿಕತೆ ಪ್ರದರ್ಶಿಸಲಿ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿದೆ. ಇನ್ನಾದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಮಾಚಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇಂದು(ಗುರುವಾರ) ಹೊಸನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಪ್ರಕರಣ ರಾಜ್ಯಪಾಲರ ಬಳಿ ಹೋಗಿ ವಿಚಾರಣೆ ಅನುಮತಿ ಕೊಡುವುದಕ್ಕಿಂತ ಮೊದಲೇ ರಾಜೀನಾಮೆ ನೀಡಿದಿದ್ದರೆ ಅವರ ಇಮೇಜ್ ಹೆಚ್ಚುತ್ತಿತ್ತು. ಆದರೆ ಈಗ ಅವರ ಇಮೇಜ್ ನೆಲಕಚ್ಚಿದೆ ಎಂದು ಟೀಕಿಸಿದರು.
ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಕಾಂಗ್ರೆಸ್ ಹಿರಿಯ ನಾಯಕ ಕೋಳಿವಾಡ
ಸುಸಂಸ್ಕೃತ, ಭವ್ಯ ಪರಂಪರೆ ಇರುವ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಕೂರಬಾರದು. ಕಳಂಕ ಹೊತ್ತು ಅಧಿಕಾರ ನಡೆಸುವುದು ಸರಿಯಲ್ಲ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ. ವಿಚಾರಣೆ ನಡೆದು ಶುದ್ಧರಾಮಯ್ಯ ಆಗಿ ಹೊರಬಂದು ಮತ್ತೆ ಬೇಕಾದರೆ ಸಿಎಂ ಸ್ಥಾನ ಅಲಂಕರಿಸಲಿ ಎಂದು ಸಲಹೆ ನೀಡಿದ್ದಾರೆ.
ಅಡಕೆ ದರ ಕುಸಿಯುತ್ತಿದೆ. ಅದಕ್ಕೆ ಹಲವು ಕಾರಣ ಇರಬಹುದು. ಅಲ್ಲದೇ ಚಾಲಿ ಅಡಕೆಗೆ ಕೆಮಿಕಲ್ ಬಳಸಿ ಕೃತಕ ಬಣ್ಣ ಹಾಕಿ ಮೋಸ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.