'ಸಿಎಂ ಸ್ಥಾನ ಖಾಲಿ ಇಲ್ಲ‌ ಎನ್ನುತ್ತ ಬೋರ್ಡ್ ಹಾಕಿಕೊಂಡು ಓಡಾಡಬೇಕಿದೆ'

* ಶನಿವಾರ ಮುಖ್ಯಮಂತ್ರಿಗಳು ಅನ್ ಲಾಕ್ ಘೋಷಣೆ ಮಾಡಿದಾಗ ಧಾರವಾಡ ಬಿಟ್ಟು ಹೋಗಿದೆ
* ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ಸ್ಥಿತಿಗತಿ ಮಾಹಿತಿಯನ್ನು ರಾಜ್ಯ ಮಟ್ಟಕ್ಕೂ ಕಳಿಸಲಾಗಿದೆ
* ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ ಶೆಟ್ಟರ್ ಹೇಳಿಕೆ
* ಪೋನ್ ಕದ್ದಾಲಿಕೆ ಮತ್ತು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ

Leadership change Karnataka Minister Jagadish shettar reaction mah

ಹುಬ್ಬಳ್ಳಿ(ಜೂ.  20)   ಶನಿವಾರ ಮುಖ್ಯಮಂತ್ರಿಗಳು ಅನ್ ಲಾಕ್ ಘೋಷಣೆ ಮಾಡಿದಾಗ ಧಾರವಾಡ ಬಿಟ್ಟು ಹೋಗಿದೆ.  ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲೆಯ ಸ್ಥಿತಿಗತಿ ಮಾಹಿತಿಯನ್ನು ರಾಜ್ಯ ಮಟ್ಟಕ್ಕೂ ಕಳಿಸಲಾಗಿದೆ ಕಳೆದ ಏಳು ಹಾಗೂ ಹತ್ತು ದಿನಗಳ ಸರಾಸರಿ ತೆಗೆದರೂ  ಧಾರವಾಡದಲ್ಲಿ ಪಾಸಿಟಿವಿಟಿ ದರ‌ ಐಎಂಸಿಆರ್ ಪ್ರಕಾರ ಶೇ. 5ರೊಳಗಿದೆ  ಎಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಸ್ಟೇಟ್ ವಾರ್ ರೂಂ ಪ್ರಕಾರ ಧಾರವಾಡದಲ್ಲಿ ಪಾಸಿಟಿವಿಟಿ ದರ 5.7 ಇದೆ ಎಂದು ತೋರಿಸಲಾಗಿದ್ದರಿಂದ ಗೊಂದಲ ಆಗಿದೆ. ಅನ್ ಲಾಕ್ ಪರಿಷ್ಕೃತ ಆದೇಶ ಸಂಜೆಯೊಳಗೆ ಬರುವ ಸಾಧ್ಯತೆ ಇದೆ. ಹುಬ್ಬಳ್ಳಿ ಧಾರವಾಡದ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಅತ್ತ ಇದ್ದಕ್ಕಿದ್ದಂತೆ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್

ಹುಬ್ಬಳ್ಳಿ ಎಕನಾಮಿಕ್ ಹಬ್. ಅನ್ಲಾಕ್‌ ಆಗದಿದ್ದರೆ ಆರ್ಥಿಕ ಸಂಕಷ್ಟ ಹೆಚ್ಚಲಿದೆ. ಸರ್ಕಾರದ ಆದೇಶ ಬಂದ ಬಳಿಕ ಹೊಸ ಮಾರ್ಗಸೂಚಿ ಅನುಸಾರ ಪಾಲನೆ ಮಾಡಲಾಗುವುದು. ಜಿಲ್ಲೆಯಲ್ಲಿ ಸೋಮವಾರದಿಂದ ಲಸಿಕಾ ಮೇಳ ಆರಂಭವಾಗಲಿದೆ. ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಎಂದರು.

ನಮ್ಮಲ್ಲೀಗ 50480 ಲಸಿಕೆ‌ ಲಭ್ಯವಿದೆ. ಜೂ. 21ರಿಂದ ಜಿಲ್ಲೆಯಲ್ಲಿ ಲಸಿಕಾ ಮೇಳ ಆರಂಭಿಸಿ 67 ವಾರ್ಡ್  ಸೇರಿ 201 ಸೆಂಟರ್ ಗಳಲ್ಲಿ ಲಸಿಕಾಕರಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಪೋನ್ ಕದ್ದಾಲಿಕೆ ಆರೋಪ ಹಾಗೂ ರಾಜಕೀಯ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಅರವಿಂದ ಬೆಲ್ಲದ್ ಬಗ್ಗೆ ನಾನು ಏನೂ ಮಾತನಾಡಲ್ಲ. ಅರವಿಂದ ಬೆಲ್ಲದ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆ ಆಗಿದೆ. ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ. ಯಾರ ಯಾರ ಹಣೆಯಲ್ಲಿ ಎನಿದೆಯೊ ಅದು ಆಗುತ್ತೆ. ಅರವಿಂದ ಬೆಲ್ಲದ್ ಓವರ್ ಟೇಕ್ ಮಾಡ್ತಾ ಇದಾರೆ ಅನ್ನೋ ಪ್ರಶ್ನೆಗೆ ಒಬ್ಬೊಬ್ಬರದ್ದು ಒಂದೊಂದು ಸ್ವಭಾವ ಆಗಿದೆ ನಾವು ನೋಡಬೇಕಷ್ಟೇ.  ಸಿಎಂ ಸ್ಥಾನ ಖಾಲಿಯಿಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ‌ ಎನ್ನುತ್ತ ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದರು. 

Latest Videos
Follow Us:
Download App:
  • android
  • ios