ಕೆರೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿಗೂ ಅಧಿಕ ಬಿಡುಗಡೆ ಮಾಡಿದ್ದು, ಈ ಹಿಂದೆ ಇದ್ದ ಯಡಿಯೂರಪ್ಪ ಸರ್ಕಾರ ಆ ಅವಧಿಯಲ್ಲಿ ಶೇ. 95ರಷ್ಟು ಕಾಮಗಾರಿ ನಡೆದಿತ್ತು ಎಂದು ಶ್ರೀರಾಮುಲು ಆರೋಪಿಸಿದರು.
ಕೂಡ್ಲಿಗಿ (ನ.06): ಕೆರೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿಗೂ ಅಧಿಕ ಬಿಡುಗಡೆ ಮಾಡಿದ್ದು, ಈ ಹಿಂದೆ ಇದ್ದ ಯಡಿಯೂರಪ್ಪ ಸರ್ಕಾರ ಆ ಅವಧಿಯಲ್ಲಿ ಶೇ. 95ರಷ್ಟು ಕಾಮಗಾರಿ ನಡೆದಿತ್ತು. ಉಳಿದ 5 ಪರ್ಸೆಂಟ್ ಕಾಮಗಾರಿ ಮುಗಿಸಲು ಈಗಿನ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ತೆಗೆದುಕೊಂಡಿದೆ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಆರೋಪಿಸಿದರು. ಕೂಡ್ಲಿಗಿ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನವೆಂಬರ್ 9ಕ್ಕೆ ಕೆರೆ ನೀರು ತುಂಬಿಸುವ ಯೋಜನೆ ಉದ್ಘಾಟನೆ ಮಾಡಲು ಬರುತ್ತಿದ್ದು, ಈ ವೇಳೆ ಹಿಂದಿನ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಪ್ರಯತ್ನದ ಫಲವನ್ನು ಹಾಗೂ ಬಿಜೆಪಿ ಸರ್ಕಾರದ ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ನೆನಪಿಸಿಕೊಳ್ಳಲಿ ಎಂದರು. ಎರಡೂವರೆ ವರ್ಷವಾದರೂ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಇಲ್ಲಿಯ ಶಾಸಕರ ಕೈಯಲ್ಲಿ ಆಗಿಲ್ಲ. ಶಾಲೆಗಳಲ್ಲೂ ಹಿಂದಿನ ಸರ್ಕಾರದ ಕಟ್ಟಿದ ಕಟ್ಟಡಗಳೇ ಕಾಣುತ್ತಿವೆ. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಶ್ರೀರಾಮುಲು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ರಾಜ್ಯ ಬಿಜೆಪಿ ವೃತ್ತಿ ಪ್ರಕೋಷ್ಟಕ ಘಟಕದ ಅಧ್ಯಕ್ಷ ಗುಳಿಗಿ ವೀರೇಂದ್ರ, ಬಿಜೆಪಿ ಹಿರಿಯ ಮುಖಂಡರಾದ ಸೂರ್ಯಪಾಪಣ್ಣ, ಸಾಣಿಹಳ್ಳಿ ಹನುಮಂತಪ್ಪ, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ. ನಾಗರಾಜ ಜಿಪಂ ಮಾಜಿ ಅಧ್ಯಕ್ಷೆ ದೀನಾ ಮಂಜುನಾಥ, ಬಳ್ಳಾರಿ ಪಾಲಣ್ಣ, ಬಿಜೆಪಿ ಮುಖಂಡರಾದ ಎಸ್. ದುರುಗೇಶ, ಬಿ. ಚಂದ್ರಮೌಳಿ, ಬಿ. ಭೀಮೇಶ, ಮಂಜುನಾಥ ನಾಯಕ, ರಜನಿಕಾಂತ್, ಬಾಲಣ್ಣ, ಗುನ್ನಳ್ಳಿ ನಾರಾಯಣ, ಎಲ್. ಪವಿತ್ರಾ, ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಶಿಕ್ಷಣ, ಸಂಸ್ಕಾರದಿಂದ ಮಾತ್ರ ಸಮಾಜದ ಉದ್ಧಾರ
ಶಿಕ್ಷಣ ಮತ್ತು ಉತ್ತಮ ಸಂಸ್ಕಾರದಿಂದ ಮಾತ್ರ ಸಮಾಜ ಉದ್ಧಾರ ಆಗಬಲ್ಲದು. ಕಾರಣ ವಾಲ್ಮೀಕಿ ನಾಯಕ ಜನಾಂಗದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು. ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಎಂದೆಂದಿಗೂ ಪೂಜ್ಯನೀಯ. ಅವರು ರಚಿಸಿದ ರಾಮಾಯಣ ಮಹಾಕಾವ್ಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಭಾರತೀಯರ ಬದುಕಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಇವರೆಡೂ ಎಂದೆಂದಿಗೂ ಅಜರಾಮರವಾಗಿ ಉಳಿಯುತ್ತವೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ನಾನು ಸಚಿವನಾಗಿದ್ದಾಗ ಎಸ್‌ಟಿ ಜನಾಂಗಕ್ಕೆ ಶೇ. ೩ರಷ್ಟಿದ್ದ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಿದ್ದೇನೆ. ಇದಕ್ಕೆ ನಮ್ಮ ರಾಜನಹಳ್ಳಿ ವಾಲ್ಮೀಕಿ ಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿಯವರ ಬೆಂಬಲ ಹಾಗೂ ಆಶೀರ್ವಾದ ಇತ್ತು ಎಂದರು.
