ಅಗ್ನಿಪಥದಿಂದ ಭದ್ರತೆಗೆ ಆಪತ್ತು, ಇದು ಸೇನಾ ಖಾಸಗೀಕರಣ ಎಂದ ಎಲ್.ಹನುಮಂತಯ್ಯ!
- ನಮ್ಮ ಸೇನಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲಾಗ್ತಿದೆ
- ಕೇಂದ್ರ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಸಲಹೆ
- ಅಗ್ನಿಪಥದಲ್ಲಿ ನಿಜವಾದ ದೇಶ ರಕ್ಷಣೆಯ ಜವಾಬ್ದಾರಿ ಇರಲ್ಲ
ಬೆಂಗಳೂರು(ಜೂ.18): ಕೇಂದ್ರ ಸರ್ಕಾರದ ಅಗ್ನಿಪಥಾ ಸೇನಾ ನೇಮಕಾತಿ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಇದರ ನಡುವೆ ರಾಜ್ಯಸಭಾ ಸದ್ಯ ಎಲ್ ಹನುಮಂತಯ್ಯ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಗ್ನಿಪಥ ಯೋಜನೆಯಿಂದ ಸೇನೆಯನ್ನೂ ಖಾಸಗೀಕರಣ ಮಾಡಲಾಗುತ್ತಿದೆ ಎಂದಿದ್ದಾರೆ.
ಅಗ್ನಿವೀರರನ್ನ ಎಂಪ್ಲಾಯ್ಮೆಂಟ್ ಜನರೇಷನ್ ಸ್ಕೀಮ್ ಎಂದು ಪರಿಗಣಿಸ ಬಾರದು ಎಂದು ಕೇಂದ್ರ ಸರ್ಕಾರಕ್ಕೆ ಎಲ್.ಹನುಮಂತಯ್ಯ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಂಟ್ರಾಕ್ಟ್ ರೀತಿ ಅಗ್ನಿವೀರರನ್ನ ಪರಿಗಣಿಸಲು ಮುಂದಾಗಿದೆ. ಈ ಹಿಂದೆ ಇದ್ದ ಎಂಜಿ ಎನ್‌ಆರ್ ಇಜಿಎ ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ.
ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!
ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರ ಸಲಹೆ ಪರಿಗಣಿಸಬೇಕಿದೆ. ಲೆ. ಜನರಲ್ ಹರ್ವದ್ ಸಿಂಗ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೇವಲ 4 ವರ್ಷ ದೇಶ ರಕ್ಷಣೆ ಮಾಡಿದರೆ ಅವನಿಗೆ ನಿಜವಾದ ದೇಶ ರಕ್ಷಣೆಯ ಜವಾಬ್ದಾರಿ ಇರುತ್ತಾ?ಯೋಧರನ್ನ ಪೂರ್ಣವಾಗಿ ತಯಾರಿ ಮಾಡುವ ಯೋಜನೆ ಇದಲ್ಲ ಎಂದು ಹನುಮಂತಯ್ಯ ಹೇಳಿದ್ದಾರೆ.
ಬ್ರಿಗೇಡಿಯರ್ ರಾಹುಲ್ ಬೋನ್ಸ್ಲೆ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಭಾರತಕ್ಕೆ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳ ಭಯ ಇರುವಾಗ ಈ ಯೋಜನೆ ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರ ಈ ಕುರಿತು ಚಿಂತನೆ ನಡೆಸಿಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
1) ಯೋಜನೆಯನ್ನು ಪ್ರಾಯೋಗಿಕವಾಗಿ ಮಾಡಿ, ಇದರ ಸಾಧಕ ಬಾಧಕಗಳನ್ನ ಅರಿತು ನಂತರ ಯೋಜನೆ ವಿಸ್ತರಿಸುವ ಕೆಲಸ ಆಗಬೇಕು. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ 24 ಲಕ್ಷ ಉದ್ಯೋಗ ಖಾಲಿ ಇವೆ.
2) ಕಾಂಗ್ರೆಸ್ ಪಕ್ಷದಿಂದ ಯುವಕರ ಹೋರಾಟಕ್ಕೆ ಬೆಂಬಲ ಇದೆ. ಹಲವು ಪಕ್ಷಗಳು ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಹೋರಾಟ ತೀವ್ರಗೊಳ್ಳುತ್ತಿದೆ. ಉಗ್ರ ಸ್ವರೂಪ ತಾಳುವ ಮೊದಲು ಕೇಂದ್ರ ಸರ್ಕಾರ ಯೋಜನೆ ಕುರಿತು ಮರುಪರಿಶೀಲನೆ ಮಾಡಬೇಕು.
ನಾಲ್ಕೇ ವರ್ಷದಲ್ಲಿ ನಿವೃತ್ತಿಯಾದ್ರೆ, ಅವರನ್ನ ಯಾರು ಮದ್ವೆ ಆಗ್ತಾರೆ ಎಂದ ಕನ್ಹಯ್ಯ ಕುಮಾರ್!
3) 4 ವರ್ಷಗಳ ಪಾರ್ಟ್ ಟೈಮ್ ಬಿಟ್ಟು ಫುಲ್ ಟೈಮ್ ಉದ್ಯೋಗ ನೀಡಬೇಕು. ದೇಶ ರಕ್ಷಣೆಯ ಮಿಲಿಟರಿ ಸೇವೆಯನ್ನ ಉದ್ಯೋಗದ ಇಲಾಖೆ ಎಂದು ಪರಿಗಣಿಸಬಾರದು
ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಯುವಕರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಹನುಮಂತಯ್ಯ, ಹೋರಾಟ ಬೆಂಬಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಗೆ ನಿರ್ಧರಿಸಲಾಗಿದೆ. ಕಾಂಗ್ರೆಸ್‌ನ ಎಲ್ಲಾ ಲೋಕಸಭಾ, ರಾಜ್ಯಸಭಾ ಸದಸ್ಯರಿಂದ ನಾಳೆ ಧರಣಿ ನಡೆಯಲಿದೆ ಎಂದು ಹನುಮಂತಯ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವೃತ್ತಿಪರ ಸೈನ್ಯವನ್ನು ಬೆಳೆಸುವ ಬದಲು, ಪಿಂಚಣಿ ಹಣವನ್ನು ಉಳಿಸಲು ಒಪ್ಪಂದದ ಮೇಲೆ ಸೈನಿಕರನ್ನು ನೇಮಕ ಪ್ರಸ್ತಾಪಿಸುವ ಈ ಅಗ್ನಿಪಥ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಬಸವರಾಜ ಭೋವಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನು ಘೋಷಿಸಿದ್ದಾರೆ. ಅದರ ಮೂಲಕ ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳಲಾಗುವುದು. ಆದರೆ, ಈ ಕ್ರಮದಿಂದ ದೇಶದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಸಿಗಲು ಸಾಧ್ಯವೇ ಇಲ್ಲವೆಂಬುದನ್ನು ಈ ಯೋಜನೆಯೆ ಸಾರುತ್ತಿದೆ ಎಂದಿದ್ದಾರೆ.