ಬಿಜೆಪಿಗೆ ಡಿಕೆ ಶಿವಕುಮಾರ್ ಓಪನ್ ಚಾಲೆಂಜ್...!

ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ನರೆ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದು, ಇಂದು (ಭಾನುವಾರ) ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿದರು.

KPCC President DK Shivakumar Visits Flood hit area at kodagu

ಕೊಡಗು, (ಆ.09): ಅತಿ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಪಾರ ಪ್ರಮಾಣದ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ.  ಹೀಗಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ವರದಿ ಸಿದ್ಧಪಡಿಸಲು ಕಾಂಗ್ರೆಸ್ 5 ತಂಡಗಳನ್ನು ರಚಿಸಿದೆ. ಅಲ್ಲದೇ ಇಂದಿನಿಂದ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ನರೆ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದು, ಇಂದು (ಭಾನುವಾರ) ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿದರು.

"

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನೆರೆ ಪರಿಸ್ಥಿತಿ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಬಿಜೆಪಿ ಅಧಿಕಾರ ನಮಗೆ ಬಿಟ್ಟು ಕೊಡಲಿ. ಇಲ್ಲೇ ಮಲಗಿ ಪರಿಸ್ಥಿತಿ ನಿರ್ವಹಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದರು. 

ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ನೆರೆ ಅಧ್ಯಯನಕ್ಕೆ ಕಾಂಗ್ರೆಸ್‌ನಿಂದ 4-5 ತಂಡ, ಡಿಕೆಶಿ

ಕೊಡಗಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅದಕ್ಕಾಗಿ ಸರ್ಕಾರ ಪ್ರತ್ಯೇಕ ಪ್ಯಾಕೆಜ್ ನೀಡಬೇಕು ಎಂದು ಆಗ್ರಹಿಸಿರುವ ಡಿಕೆಶಿ,  ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚಿಸ್ತೇವೆ. ಅನೇಕ ಕಡೆ ತಡೆಗೋಡೆ,ರಸ್ತೆ ಆಗಬೇಕು. ಸಲಹೆ ಕೊಡೋದನ್ನ ಬಿಟ್ಟು ಅಧಿವೇಶನದಲ್ಲಿ 10 ಸಾವಿರ ಕೋಟಿ ಪ್ಯಾಕೆಜ್ ಕುರಿತು ಚರ್ಚಿಸ್ಬೇಕು. ಬೇರೆ ಕೆಲಸ ನಿಲ್ಲಿಸಿ ಶಾಶ್ವತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಆಚಾರ್ ಮನೆಗೆ ಡಿಕೆಶಿ ಭೇಟಿ
KPCC President DK Shivakumar Visits Flood hit area at kodagu

ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ನಾರಾಯಣ ಆಚಾರ್ ಮನೆಗೆ ಡಿಕೆಶಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನವ ಹೇಳಿದರು.

ನಾರಾಯಣ ಆಚಾರ್ ಮನೆಯಿಂದ ಡಿಕೆಶಿ ಹೊರ ಬರ್ತಿದ್ದಂತೆ ಸುತ್ತುವರಿದ ಮಹಿಳೆಯರು. ನೆರೆಯಿಂದ ನಮಗೆ ಸಾಕಷ್ಟು ತೊಂದರೆಯಾಗ್ತಿದೆ. ಮನೆ ಕಟ್ಟಲು 5 ಲಕ್ಷ ಹಣ ಕೊಡ್ತೇವೆ ಅಂದಿದ್ರು ಇನ್ನೂ ಕೊಟ್ಟಿಲ್ಲ. ಕೆಲವರಿಗೆ ಮಾತ್ರ ಹಣ ಸಿಕ್ಕಿದೆ. ಬಾಡಿಗೆ ಕಟ್ಟಲು ಕೂಡ ಹಣ ನೀಡಿಲ್ಲ ಎಂದು ಡಿಕೆಶಿ ಮುಂದೆ ಮಹಿಳೆಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ನಡೆಯಿತು.

Latest Videos
Follow Us:
Download App:
  • android
  • ios