ಬಚ್ಚೇಗೌಡರಿಗೆ ಗಾಳ ಹಾಕಿದ್ರೆ ಮರಿ ಮೀನು ಶರತ್‌ ಗಾಳಕ್ಕೆ ಸಿಕ್ರು: ಡಿಕೆಶಿ

*   ಬಚ್ಚೇಗೌಡರ ಸೆಳೆಯಲು ಹಲವು ಬಾರಿ ಪ್ರಯತ್ನಿಸಿದ್ದೇವೆ
*  ಅವರಲ್ಲದಿದ್ರೂ ಪುತ್ರ ಬಂದಿದ್ದಕ್ಕೆ ಖುಷಿಯಾಗಿದೆ: ಡಿಕೆಶಿ
*  ಶರತ್‌ ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಉತ್ಸಾಹಿ ಯುವ ನಾಯಕ
 

KPCC President DK Shivakumar Talks Over Sharath Kumar Bache Gowda grg

ದೊಡ್ಡಬಳ್ಳಾಪುರ(ಜೂ.25):  ಸಂಸದ ಬಿ.ಎನ್‌.ಬಚ್ಚೇಗೌಡರ ಜತೆ 20 ವರ್ಷಗಳ ಬಳಿಕ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ. ಅವರನ್ನು ತಮ್ಮತ್ತ ಸೆಳೆಯಲು ಹಲವು ಬಾರಿ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆದರೆ ಅವರಿಗೆ ಹಾಕಿದ ಗಾಳಕ್ಕೆ ಮರಿ ಮೀನು(ಶರತ್‌ ಬಚ್ಚೇಗೌಡ) ಅವರಾದರೂ ಸಿಕ್ಕಿತಲ್ವಾ ಎಂದು ಸಂತೋಷ ಪಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಇಲ್ಲಿನ ಬಮೂಲ್‌ ಘಟಕ ಮುಂಭಾಗದಲ್ಲಿ ಶುಕ್ರವಾರ ಬೃಹತ್‌ ಡೈರಿ ಮೇಳದ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಬಚ್ಚೇಗೌಡರದ್ದು ದೊಡ್ಡ ಜಮೀನ್ದಾರಿ ಕುಟುಂಬ. ನೂರಾರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದವರು ಅವರು. ಅವರನ್ನು ಕಾಂಗ್ರೆಸ್‌ಗೆ ಕರೆತರಲು ಎಸ್‌.ಎಂ.ಕೃಷ್ಣ ಹಾಗೂ ನಾನು ಸಾಕಷ್ಟು ಸಮಯದಿಂದ ಪ್ರಯತ್ನಪಟ್ಟಿದ್ದೆವು. ಆದರೆ ಅವರು ನನ್ನ ಗಾಳಕ್ಕೆ ಬೀಳಲಿಲ್ಲ. ಈಗ ಶರತ್‌ ಬಚ್ಚೇಗೌಡ ಅವರು ಬಂದಿರುವುದು ನಮ್ಮ ಗಾಳಕ್ಕೆಬಿದ್ದಿರುವುದು ಸಂತೋಷ ತಂದಿದೆ ಅಂತ ಹೇಳಿದ್ದಾರೆ. 

ಸಚಿವ ಎಂಟಿಬಿ - ಶರತ್‌ ಬಚ್ಚೇಗೌಡ ವಾರ್‌ : 'ದರ್ಪದಿಂದ ಏನು ಆಗಲ್ಲ'

ಶರತ್‌ ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಉತ್ಸಾಹಿ ಯುವ ನಾಯಕ. ಅವರು ನಮ್ಮ ಜಿಲ್ಲೆಯ ಆಸ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios