Asianet Suvarna News Asianet Suvarna News

Karnataka Congress: ಪಂಚರಾಜ್ಯ ಸೋಲಿನಲ್ಲೂ ಹಲವು ಸಕಾರಾತ್ಮಕ ಅಂಶ ಸಿಕ್ಕಿದೆ: ಡಿಕೆಶಿ

*  ಪಂಚರಾಜ್ಯ ತಪ್ಪು ತಿದ್ದಿಕೊಂಡು ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ 
*  ರಾಜ್ಯದ ಜನರು ಬದಲಾವಣೆ ನಿರೀಕ್ಷಿಸಿರುವುದು ಸತ್ಯ
*  ನಮ್ಮ ಕಾರ್ಯಕರ್ತರು ಬಹಳ ಪರಿಶ್ರಮದಿಂದ ಸದಸ್ಯತ್ವ ನೋಂದಣಿ ಮಾಡುತ್ತಿದ್ದಾರೆ

KPCC President DK Shivakumar React on Five States Election Result grg
Author
First Published Mar 17, 2022, 5:52 AM IST | Last Updated Mar 17, 2022, 5:52 AM IST

ಬೆಂಗಳೂರು(ಮಾ.17):  ಪಂಚರಾಜ್ಯ ಚುನಾವಣೆ ಫಲಿತಾಂಶ(Election Result) ನಕಾರಾತ್ಮಕವಾಗಿ ಬಂದಿದ್ದರೂ ಪಕ್ಷಕ್ಕೆ ಸಕಾರಾತ್ಮಕವಾಗುವ ಹಲವು ಅಂಶಗಳು ಲಭಿಸಿವೆ. ಈ ಚುನಾವಣೆಯಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುತ್ತೇವೆ. ರಾಜ್ಯದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಕೆಪಿಸಿಸಿ(KPCC) ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು, ಬಿ.ಎಸ್‌. ಯಡಿಯೂರಪ್ಪನವರು(BS Yediyurappa), ಜೆಡಿಎಸ್‌ನವರು(JDS) ಏನೇ ಹೇಳಿಕೊಳ್ಳಲಿ. ರಾಜ್ಯದ ಜನರು ಬದಲಾವಣೆ ನಿರೀಕ್ಷಿಸಿರುವುದು ಸತ್ಯ. ಹೀಗಾಗಿ 2023ಕ್ಕೆ ಕಾಂಗ್ರೆಸ್‌(Congress) ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದರು.

Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್‌..!

ಈಗಾಗಲೇ ರಾಜ್ಯದಲ್ಲಿ(Karnataka) 15 ಲಕ್ಷ ಜನ ಪಕ್ಷದ ಸದಸ್ಯರಾಗಿದ್ದು ಎಲ್ಲರೂ ನಿಷ್ಠಾವಂತ ಸದಸ್ಯರಾಗಿದ್ದಾರೆ. 40-50 ಲಕ್ಷ ಸದಸ್ಯರನ್ನು ನೋಂದಣಿ ಮಾಡಬೇಕು ಎಂಬುದು ನಮ್ಮ ಗುರಿ. ಕೆಲವು ಬೂತ್‌ ಮಟ್ಟದಲ್ಲೇ ಸಾವಿರಕ್ಕೂ ಹೆಚ್ಚು ಸದಸ್ಯತ್ವ ಆಗಿದೆ. ಗಂಗಾವತಿಯಲ್ಲಿ ಈಗಾಗಲೇ 40 ಸಾವಿರ ದಾಟಿದೆ. ನಮ್ಮ ಕಾರ್ಯಕರ್ತರು ಬಹಳ ಪರಿಶ್ರಮದಿಂದ ಸದಸ್ಯತ್ವ ನೋಂದಣಿ ಮಾಡುತ್ತಿದ್ದಾರೆ ಎಂದರು.

ಪಂಚರಾಜ್ಯ ಚುನಾವಣೆ ಬಗ್ಗೆ ಮಾತನಾಡಿದ ಅವರು, ಗೋವಾದಲ್ಲಿ ಮೊದಲು ಕೇವಲ ಇಬ್ಬರು ಶಾಸಕರು ಇದ್ದರು. ಈಗ 12 ಸ್ಥಾನ ಗೆದ್ದಿದ್ದೇವೆ. ಬಿಜೆಪಿಗೆ ಶೇ.37 ರಷ್ಟು ಮತ ಮಾತ್ರ ಬಂದಿದ್ದು, ಆಪ್‌ ಹಾಗೂ ಟಿಎಂಸಿಯಿಂದಾಗಿ ಮತ ವಿಭಜನೆಯಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್‌ ಪರ ವಾತಾವಾರಣ ಇತ್ತು. ಇನ್ನು ಉತ್ತರ ಪ್ರದೇಶದಲ್ಲಿ ಸೋತಿದ್ದರೂ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಎಲ್ಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.
ನಾವು ವಿಫಲವಾಗಿರುವುದು ಪಂಜಾಬ್‌ನಲ್ಲಿ. ನಮ್ಮ ಕೆಲವು ಆಂತರಿಕ ವಿಚಾರದಿಂದ ಹಿನ್ನಡೆ ಆಗಿದೆ. ಆದರೆ ನನಗೆ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಾವು ಇಲ್ಲ, ಜತೆಗೆ ಬಿಜೆಪಿಯೂ ಇಲ್ಲ ಎಂದು ಸಮರ್ಥಿಸಿಕೊಂಡರು.

ನಾಯಕರನ್ನೇ ಚಾಲೆಂಜ್‌ ಮಾಡಿದರೆ ಪಕ್ಷಕ್ಕಿಲ್ಲ ಉಳಿಗಾಲ: ವೀರಪ್ಪ ಮೊಯ್ಲಿ

ಹುಬ್ಬಳ್ಳಿ: ‘ನಮ್ಮ ನಾಯಕರನ್ನೇ ನಾವು ಚಾಲೆಂಜ್‌’ ಮಾಡಿದರೆ ನಮ್ಮ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ(Veerappa Moily) ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ(Election) ಸೋತ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರ(AICC President) ಬದಲಾವಣೆ ಕುರಿತಂತೆ ಎದ್ದಿರುವ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರನ್ನು ಚಾಲೆಂಜ್‌ ಮಾಡಲು ಹೋಗಬಾರದು ಎಂದರು.

ಪಕ್ಷದ ರಾಷ್ಟ್ರೀಯ ನಾಯಕರ ಬದಲಾಯಿಸಬೇಕೆಂದು ಕಪಿಲ್‌ ಸಿಬಲ್‌ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಅದು ಅವರ ವೈಯಕ್ತಿಕ ವಿಚಾರ ಎಂದ ಅವರು, ಜಿ-23ಗೆ ನಾನೂ ಸಹಿ ಹಾಕಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕೆಂದು ಸಹಿ ಹಾಕಿದ್ದೆ. ಹಾಗಂತ ಪಕ್ಷದ ಬುಡಕ್ಕೆ ಕೈ ಹಾಕುವುದು ಸರಿಯಲ್ಲ. ನಾಯಕತ್ವವನ್ನೇ(Leadership) ಪ್ರಶ್ನಿಸುವುದು ಸರಿಯಲ್ಲ ಎಂದು ನುಡಿದರು.

Election Result 2022 ಪ್ರಿಯಾಂಕಾಗೆ ಪ್ರಥಮ ಚುಂಬನಂ ದಂತ ಭಗ್ನಂ

ನಾನು ಜಿ-23 ನಿರ್ಧಾರಕ್ಕೆ ವಿರೋಧಿಸಿದ್ದೇನೆ. ನಾನೀಗ ಜಿ-23 ಜತೆಗಿಲ್ಲ. ಸೋನಿಯಾ ಗಾಂಧಿ(Sonia Gandhi) ಕೈ ಬಲಪಡಿಸುವುದು ನಮ್ಮ ಮುಂದಿರುವ ಗುರಿ ಎಂದ ಅವರು, ಪಂಚರಾಜ್ಯಗಳ ಸೋಲಿನ ಪರಾಮರ್ಶೆ ನಡೆದಿದೆ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾಯಕರ ಬದಲಾವಣೆ ಅಸಾಧ್ಯ ಎಂದರು.

ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಹಿಂದೆ ಚುನಾವಣೆಯನ್ನು ಗೆದ್ದಿಲ್ಲವೇ ಎಂದು ಪ್ರಶ್ನಿಸಿದ ಅವರು, ಗೆದ್ದರೂ ಪ್ರಧಾನಿ ಆಗುವ ಗೋಜಿಗೆ ಅವರು ಹೋಗಲಿಲ್ಲ. ಅದು ಅವರ ತ್ಯಾಗವನ್ನು ಸಾಬೀತುಪಡಿಸುತ್ತದೆ ಎಂದರು. ಕಾಂಗ್ರೆಸ್‌ ರಾಷ್ಟ್ರೀಯ ನಾಯಕತ್ವ ಕೊರತೆಯಿಂದ ಬಿಜೆಪಿ(BJP) ಪ್ರಬಲವಾಗಿದೆ ಎಂಬ ಮಾತನ್ನು ನಾನು ಒಪ್ಪಲ್ಲ ಎಂದು ನುಡಿದರು.

Latest Videos
Follow Us:
Download App:
  • android
  • ios