ಬೆಂಗಳೂರು, (ಸೆ.26): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) 'ಪ್ರೊಟೋಕಾಲ್ ಸಮಿತಿ' ರಚಿಸಿ ಡಿಕೆ ಶಿವಕುಮಾರ್ ಅವರು  ಆದೇಶ ಹೊರಡಿಸಿದ್ದಾರೆ.

 7 ಜನರ ನಾಯಕರನ್ನು ಈ  'ಶಿಷ್ಟಾಚಾರ ಸಮಿತಿ'ಗೆ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು (ಶನಿವಾರ) ಆದೇಶಿಸಿದ್ದಾರೆ.

ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್ 

ಎಐಸಿಸಿಯಿಂದ ರಾಜ್ಯಕ್ಕೆ ಬರುವ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಬರ ಮಾಡಿಕೊಂಡು, ಅವರ ಕೆಲಸ ಕಾರ್ಯದಲ್ಲಿ ಸಹಕರಿಸಲು  ಈ ಶಿಷ್ಟಾಚಾರ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸಮಿತಿಗೆ ಆಯ್ಕೆಯಾಗಿರುವವರ ಹೆಸರು ಈ ಕೆಳಗಿನಂತಿದೆ.

ಪ್ರೊಟೋಕಾಲ್ ಸಮಿತಿ ಇಂತಿದೆ
1.ವಿಜಯ್ ಮುಳುಗುಂದ್ (ಮಾಜಿ ಕೆಪಿಸಿಸಿ ಕಾರ್ಯದರ್ಶಿ)
2. ಆಗಾ ಸುಲ್ತಾನ್ (ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ)
3. ಎಸ್.ಈ. ಸುಧೀಂದ್ರ (ಮಾಜಿ ಕೆಪಿಸಿಸಿ ಕಾರ್ಯದರ್ಶಿ)
4.ನಯನ ಜಾವರ್ (ಸಂಚಾಲಕರು ಕೆಪಿಸಿಸಿ SC ವಿಭಾಗ)
5.ಜೆ. ನಟರಾಜ್ (ಮಾಜಿ ಕೆಪಿಸಿಸಿ ಕಾರ್ಯದರ್ಶಿ)
6. ಎ.ಎಸ್. ಪ್ರಸಾದ್ 
7.ನವೀನ್ ಮಧು ಹೆಚ್.