ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಸಂಸದ ಮುನಿಸ್ವಾಮಿ ಕಿಡಿ

ಈ ಹಿಂದೆ ಗುತ್ತಿಗೆದಾರರ ಆರೋಪದ ಹಿನ್ನಲೆಯಲ್ಲಿ ಅಂದಿನ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈಗ ಅದೇ ಆರೋಪದ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಪ್ರತಿಪಾದಿಸಿದ ಎಸ್.ಮುನಿಸ್ವಾಮಿ 

Kolar MP S Muniswamy Slams Karnataka Congress Government grg

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ(ಆ.16): ಒಂದೇ ಹುದ್ದೆಗೆ ಮೂರು ಮಂದಿಗೆ ಮುಖ್ಯ ಮಂತ್ರಿ ವರ್ಗಾವಣೆಯ ಶಿಫಾರಸ್ಸಿನ ಪತ್ರ ನೀಡಿರುವುದು, ಗುತ್ತಿಗೆದಾರರ ಬಿಲ್‌ಗಳನ್ನು ಬಿಡುಗಡೆ ಮಾಡಲು ಕಮೀಷನ್‌ಗೆ ಒತ್ತಾಯಿಸಿದ ಉಪಮುಖ್ಯ ಮಂತ್ರಿಗಳು, ಕೋಲಾರದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ ಶಿಷ್ಯನೋರ್ವ ವರ್ಗಾವಣೆ ಮಾಡಿಸುವುದಾಗಿ ವಂಚಿಸಿರುವ ವಿರುದ್ದ ಎಫ್.ಐ.ಆರ್ ದಾಖಲಾಗಿರುವ ಆರೋಪದ ಹಿನ್ನಲೆಯಲ್ಲಿ ಈ ಮೂರು ಮಂದಿ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಸಂಸದ ಎಸ್.ಮುನಿಸ್ವಾಮಿ ಆಗ್ರಹಪಡಿಸಿದರು.

ಇಂದು(ಮಂಗಳವಾರ) ಕೋಲಾರ ನಗರದ ಪ್ರವಾಸಿ ಮಂದಿರದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಗುತ್ತಿಗೆದಾರರ ಆರೋಪದ ಹಿನ್ನಲೆಯಲ್ಲಿ ಅಂದಿನ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈಗ ಅದೇ ಆರೋಪದ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಪ್ರತಿಪಾದಿಸಿದರು.
ಒಂದೇ ಸ್ಥಾನಕ್ಕೆ ಮೂರು ಮಂದಿಗೆ ವರ್ಗಾವಣೆಗೆ ಮುಖ್ಯ ಮಂತ್ರಿಗಳಿಂದ ಶಿಫಾರಸ್ಸಿನ ಪತ್ರಗಳನ್ನು ಕೊಡಿಸುವ ಮೂಲಕ ಮುಖ್ಯ ಮಂತ್ರಿಗಳ ಆಪ್ತರು ವರ್ಗಾವಣೆಯ ದಂಧೆ ಮಾಡುತ್ತಿರುವುದು ಸ್ವಷ್ಟವಾಗಿದೆ, ಹಾಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸಲು ಅರ್ಹರಾಗಿಲ್ಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಕೋಲಾರ ಜಿಲ್ಲೆಯ ಎಲ್ಲ ರೈಲು ನಿಲ್ದಾಣ ಮೇಲ್ದರ್ಜೆಗೆ: ಸಂಸದ ಮುನಿಸ್ವಾಮಿ

ಕೇಂದ್ರದಲ್ಲಿ ಯು.ಪಿ.ಎ ಹೆಸರನ್ನು ಇಂಡಿಯಾ ಎಂದು ಬದಲಾಯಿಸಿಕೊಂಡಿರುವ 40 ಮಂದಿಯ ವಿರುದ್ಧ ಪ್ರತಿಯೊಬ್ಬರೂ ಹಲವಾರು ಪ್ರಕರಣಗಳ ಆರೋಪ ಹೊತ್ತು ಕೊಂಡಿರುವವರೇ ಆಗಿದ್ದಾರೆ. ಹಾಗಾಗಿ ಇವರ ಗುಂಪನ್ನು ಆಲಿಬಾಬಾ 40 ಮಂದಿ ಚೋರರಿಗೆ ಹೊಲಿಸಿ ಬಹುದಾಗಿದೆ ಎಂದು ವ್ಯಂಗವಾಡಿದ ಅವರು 40 ಮಂದಿತ ಜೊತೆಗೆ ಇನ್ನು 40 ಮಂದಿ ಸೇರ್ಪಡೆ ಮಾಡಿ ಕೊಂಡು 80 ಮಂದಿ ಸಂಘಟನೆಯಾದರೂ ಸಹ ಮುಂದಿನ 2024ರ ಚುನಾವಣೆಯಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರೇ ಮುಂದುವರೆಯುವುದು ಖಚಿತ ಎಂದು ಭವಿಷ್ಯ ನುಡಿದರು.

ಬೆಂಗಳೂರಿನ ಬಿ.ಬಿ.ಎಂ.ಪಿ.ಯಲ್ಲಿ ಕಾಮಗಾರಿಗಳನ್ನು ಮಾಡಿರುವಂತ ಗುತ್ತಿಗೆದಾರರು ಬಿಲ್ ಮಾಡಿಕೊಡಲು ಕಮೀಷನ್ ನೀಡ ಬೇಕೆಂದು ಉಪಮುಖ್ಯಮಂತ್ರಿ ನೇರವಾಗಿ ಒತ್ತಾಯಿಸಿದ್ದಾರೆ ಎಂದು ಗುತ್ತಿಗೆದಾರರು ಈ ವಿಷಯ ಮಾಧ್ಯಮದ ಮುಂದೆ ತಂದು ಪ್ರಚಾರ ಪಡೆಸಿ ಪ್ರತಿಭಟಿಸಿದ ಹಿನ್ನಲೆಯಲ್ಲಿ ಬಿ.ಬಿ.ಎಂ.ಪಿ ಕಡತಗಳಿಗೆ ಬೆಂಕಿ ಹೊತ್ತಿಸುವ ಮೂಲಕ ದಾಖಲೆಗಳೇ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸತ್ಯವು ಎಂದಿದ್ದರೂ ಬೂದಿ ಮುಚ್ಚಿದ ಕೆಂಡ ಇದ್ದಂತೆ, ಹಗರಣಗಳಲ್ಲಿ ಭಾಗಿಯಾದವರೆಲ್ಲರೂ ರಾಜೀನಾಮೆ ಕೊಡಬೇಕು, ಆಡಳಿತ ನಡೆಸಲು ಅರ್ಹತೆಯೇ ಇಲ್ಲವಾದರೂ ಸಹ ತೊಘಲಕ್ ದರ್ಬಾರ್ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಸಹ ಪೈಪೋಟಿಯಲ್ಲಿ ಆಡಳಿತ ನಡೆಸುತ್ತಿರುವುದು ತೆರೆದ ಕನ್ನಡಿಯಂತೆ ಇದ್ದು. ಆಡಳಿತರೂಡಪಕ್ಷದ ಶಾಸಕರುಗಳೇ ಎ.ಐ.ಸಿ.ಸಿಗೆ ದೂರುಸಲ್ಲಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಭೆ ಕರೆದು ಎಲ್ಲಾ ಶಾಸಕರನ್ನು ಒಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳನ್ನು ಕಡೆಗಣಿಸಿ ಕೇವಲ ತಮ್ಮ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ, ಆದರೆ ಈ ಯೋಜನೆಗಳು ಅರ್ಹರಿಗೆ ತಲುಪುವಲ್ಲಿ ವಿಫಲವಾಗುವ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಎಲ್ಲೆಡೆ ಭ್ರಷ್ಟಚಾರಗಳಿಂದ ತುಂಬಿ ತುಳುಕುತ್ತಿದೆ. ಕಚೇರಿಗಳಲ್ಲಿ ಕಾಸು ನೀಡದೆ ಯಾವುದೇ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷವು ಜನತೆಗೆ ನೀಡಿದ ಮಾತು ಉಳಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ದಿ ಯೋಜನೆಗಳು ಹಾಗೂ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿ ಯೋಜನೆಗಳ ಅಂಕಿ ಅಂಶಗಳನ್ನು ವಿವರಿಸಿದ ಸಂಸದ ಮುನಿಸ್ವಾಮಿ, ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಬೈರತಿ ಸುರೇಶ್ ಜಿಲ್ಲೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಸಿಲ್ಲ, ಕೇವಲ ಪತ್ರಿಕಾ ಹೇಳಿಕೆಗಳಲ್ಲಿ ಜಿಲ್ಲೆಯ ಪ್ರಗತಿಯನ್ನು ತೋರಿಸಿ ಹೋಗುತ್ತಿದ್ದಾರೆ. ಅವರು ಆದೇಶಿಸುವುದನ್ನು ಜಿಲ್ಲೆಯಲ್ಲಿ ಅಧಿಕಾರಿಗಳು ಯಾವುದೇ ಪ್ರಗತಿ ಮಾಡಿಲ್ಲ ಎಂದು ಉತ್ತರಿಸಿದರು.

ಕೋಲಾರ: ಲಾಟರಿ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕದಿಂದಲೂ ನಗರದ ಕ್ಲಾಕ್ ಟವರ್‌ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾರ್ವಜನಿಕರಿಗೆ ಸಾಧ್ಯವಾಗಿರಲಿಲ್ಲ, ಬಿಜೆಪಿ ಸರ್ಕಾರ ಬಂದ ನಂತರ ಕಳೆದ 4 ವರ್ಷದಿಂದ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತಿದೆ. ಇಂದು ಸಹ ನಮ್ಮಗಳ ಸಮ್ಮುಖದಲ್ಲಿ ಡಿ.ಸಿ, ಎಸ್.ಪಿ. ಅವರು ರಾಷ್ಟ್ರಧ್ವಜ ಹಾರಿಸಿದರು ಎಂದರು.

ಜಿಲ್ಲಾ ಸಚಿವರು ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚು ಅನುದಾನ ತರಲು ನಾವು ಸಹ ಕೈ ಜೋಡಿಸುತ್ತಿದ್ದೇವೆ. ಕೇಂದ್ರದಿಂದಲೂ ಹಲವಾರು ಯೋಜನೆಗಳಿಗೆ ಅನುದಾನ ತಂದು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಒ.ಬಿ.ಸಿ. ಅಧ್ಯಕ್ಷ ಬೆಗ್ಲಿ ಸಿರಾಜ್, ಜಿಲ್ಲಾ ಯುವ ಮೋರ್ಚಾ ಬಾಲಾಜಿ ಇದ್ದರು.

Latest Videos
Follow Us:
Download App:
  • android
  • ios