Asianet Suvarna News Asianet Suvarna News

ಚುನಾವಣೆಯಲ್ಲಿ ಪಕ್ಷದ್ರೋಹ: ಮೂವರು ಜೆಡಿಎಸ್ ಸದಸ್ಯರ ಉಚ್ಚಾಟನೆ

ಪಕ್ಷ ವಿರೋಧಿ ಚಟುವಟಿಕೆ ಮೇಲೆ ಮೂವರು ಜೆಡಿಎಸ್ ಸದಸ್ಯರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಅಲ್ಲದೇ  ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಜೆಡಿಎಸ್ ತಿಳಿಸಿದೆ.

Kodagu JDS Suspends kushalnagar Town panchayat Three Party Members rbj
Author
Bengaluru, First Published Nov 3, 2020, 6:57 PM IST

ಮಡಿಕೇರಿ, (ನ. 03): ಕುಶಾಲನಗರ ಪಟ್ಟಣ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮೂವರು ಜೆಡಿಎಸ್ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಇಂದು (ಮಂಗಳವಾರ) ನಡೆದ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಹಣದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ಜೆಡಿಎಸ್ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ

ಕುಶಾಲನಗರ ಪಟ್ಟಣ ಪಂಚಾಯತ ಸದಸ್ಯರಾದ ಜಗದೀಶ, ಸುರೇಶ್ ಎಂ.ಬಿ, ಸುರೇಯ ಭಾನು ಅವರನ್ನು ಈ ಕೊಡಲೇ ಪಕ್ಷದಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ ಮತ್ತು ಪಕ್ಷದ್ರೋಹಿ ಸದಸ್ಯರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಕೊಡಗು ಜಿಲ್ಲಾ ಜೆಡಿಎಸ್ ತಿಳಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿ ನಳಿನಿ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆ ಪ.ಪಂ ನಲ್ಲಿ 3 ಸ್ಥಾನ ಗಳಿಸಿದ್ದ ಬಿಜೆಪಿಯ ನಳಿನಿ ಗಣೇಶ್ ಮೊದಲ 1 ವರ್ಷದ ಅವಧಿಗೆ ಮತ್ತು ಪಿ.ಕೆ.ಚಂದ್ರು ಮುಂದಿನ ಒಂದೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಯಿತು.

Follow Us:
Download App:
  • android
  • ios