Asianet Suvarna News Asianet Suvarna News

ಪಿಎಸ್ಐ, ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ No.1 : ಕಿಮ್ಮನೆ ಗಂಭೀರ ಆರೋಪ

ಪಿಎಸ್ಐ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ ನಂಬರ್1 ಎಂದು ಕಿಮ್ಮಾನೆ  ಗಂಭೀರ ಆರೋಪ ಮಾಡಿದ್ದಾರೆ.. ಅಡಿಕೆಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಪರ್ಯಾಯ ಬೆಳೆ ಬೆಳೆಯಲು ಅಧಿವೇಶನದಲ್ಲಿ ತಿಳಿಸಿದ್ದಾರೆ. ಈದೇಶದಲ್ಲಿ ಮೊದಲನೇ ಉಗ್ರ ಯಾರು ಎಂದರೆ ನಾಥುರಾಮ್ ಗೋಡ್ಸೆ. ಆತ ಕೊಂದಿರುವುದು ಸತ್ಯವನ್ನ‌, ಅಹಸೆಯನ್ನ, ಇವೆಲ್ಲದಕ್ಕೂ ಹೋರಾಟ ಮಾಡಲಾಗುವುದು. 

Kimmane Ratnakars press conference in Shimoga today rav
Author
First Published Jan 12, 2023, 2:53 PM IST

ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿ

ಶಿವಮೊಗ್ಗ (ಜ.12): ನಿನ್ನೆ ತೀರ್ಥಹಳ್ಳಿಯಲ್ಲಿ ನಡೆದ ಇಡಿ ದಾಳಿಯನ್ನೂ ಬಿಜೆಪಿ ರಾಜಕೀಯ ಪ್ರೇರಿತವಾಗಿ ಬಿಂಬಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದರು.  ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಥಹಳ್ಳಿ(Teerthahalli)ಯಲ್ಲಿ ನಡೆದ ಘಟನೆ ಕೆಲವು ಮಾಧ್ಯಮಗಳಲ್ಲಿ ಸ್ವಯಂ ಘೋಷಿತ ಹೇಳಿಕೆ ಆಗಿದೆ. ತೀರ್ಥಹಳ್ಳಿಗೆ ನಿನ್ನೆ ಇಡಿ ಬಂದಿದ್ದರು. ಕಚೇರಿಗೆ ಬಂದು ಕರೆಮಾಡಿದ್ದರು. 2015 ರಲ್ಲಿ 10 ಲಕ್ಷ ರೂ. ಹಣವನ್ನ ಕಟ್ಟಡದ ಅಡ್ವಾನ್ಸ್ ನೀಡಲಾಗಿದೆ. ಇದನ್ನ  ರಾಜಕೀಯವಾಗಿ ಇಡಿ ದಾಳಿ ಎಂದು ಬಣ್ಣಿಸಲಸಗುತ್ತಿದೆ ಎಂದರು. 

ಕುಕ್ಕರ್(coocker) ಹಿಡಿದುದ್ದನ್ನ ಕೆಲ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು.  ಬಿಜೆಪಿ ಸ್ಥಳೀಯವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದೆ. ನನ್ಮ ಕಟ್ಟಡದ ಬಾಡಿಗೆ ವಿಚಾರದಲ್ಲಿ ಅಣ್ಣನ ಹೆಸರಿನಲ್ಲಿ ಅಗ್ರಿಮೆಂಟ್ ಆಗಿದೆ. ಚುನಾವಣೆ ಇರುವುದರಿಂದ ಬಿಜೆಪಿ(BJP) ಭಯ‌ಹುಟ್ಟಿಸಲು ನೋಡ್ತಾ ಇದೆ. ಆದರೆ ಇದು ಭಯ ಬಿಜೆಪಿಗೆ ಇರುತ್ತದೆ ನನಗೆ ಅಲ್ಲ. ನಂದಿತ ಪ್ರಕರಣದಲ್ಲಿ ಆಗಿರುವ ನಾಟಕವನ್ನ ಬಿಜೆಪಿ ಈಗ ಕುಕ್ಕರ್ ಹಿಡಿದು ಬಿಂಬಿಸಲು ಹೊರಟಿದೆ ಎಂದರು.

ಸ್ಯಾಂಟ್ರೋ ರವಿಯ 20 ವರ್ಷದ ಕೇಸ್‌ಗಳ ಇತಿಹಾಸ ತೆಗೆಯುತ್ತೇವೆ: ಸಿಎಂ ಬೊಮ್ಮಾಯಿ

ಕೆಲವರು ಕಿಮ್ಮನೆ ಮನೆ ದಾಳಿ(ED Raid) ಆಗಿದೆ ಅಂತೆ ಎಂದು ಸುದ್ದಿ ಮಾಡಿದ್ದಾರೆ. ಸಮಾಜ ಸರಿ ಪಡಿಸುವ ವರ್ಗ ಕೆಲ ಚಾನೆಲ್ ನಲ್ಲಿ ಶಾರೀಕ್ ಬ್ಲಾಸ್ಟ್ ಮಾಡಿರುವ ದೃಶ್ಯ ನನ್ನ ಭಾವಚಿತ್ರವನ್ನ ದೊಡ್ಡದಾಗಿ ಬಿಂಬಿಸಲಾಗಿದೆ. ಇದು ಯೋಚನೆ ಮಾಡುವ ಪರಿಸ್ಥಿತಿ. ನಾನು ಓಡಿಹೋಗಿಲ್ಲ. ತೀರ್ಥಹಳ್ಳಿ ಜನಕ್ಕೆ ನಾನು ಏನು ಎಂಬುದು ಗೊತ್ತಿದೆ ಎಂದರು. 

10 ವರ್ಷ ಶಾಸಕನಾಗಿದ್ದೇನೆ. ಇದರಿಂದ ಹೆದರುವುದಿಲ್ಲ. ರಾಜಕೀಯಕ್ಕೆ ಬಂದಿದ್ದುಸಮಾಜ ಸೇವೆಗಾಗಿ. ಇದನ್ನ ಸವಾಲಾಗಿ ಸ್ವೀಕರಿಸುವುದಾದರೆ ಸವಾಲಾಗಿ ಸ್ವೀಕರಿಸುವೆ. ಆರಗ ಜ್ಞಾನೇಂದ್ರರವರಿಗೆ ಈ ಬಗ್ಗೆ ಸವಾಲು ಎಸೆಯುವೆ. ಅಮಿತ್ ಶಾ ಮತ್ತು ಜ್ಞಾನೇಂದ್ರ ಇಬ್ವರೂ ನನ್ನ ವಿರುದ್ಧ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು. 

ಆರಗ ಜ್ಞಾನೇಂದ್ರ(Araga jnanendra)ರವರ ಲೇಔಟ್ ಆಗಿದೆ. ಅದಕ್ಕೆ ಕಾಂಕ್ರಿಟ್ ರಸ್ತೆ ಆಗಿದೆ. ಸ್ಯಾಂಟ್ರೋ ರವಿ(Santro ravi) ವಿಚಾರದಲ್ಲಿ ಫೆಬ್ರವರಿ ಒಳಗೆ  ಆರಗ ರಾಜೀನಾಮೆ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಯಾವ ಅಧಿಕಾರಿಯನ್ನ ಎಲ್ಲಿ ಹಾಕಬೇಕು ಎಂದು ಸ್ಯಾಂಟ್ರೋ ರವಿ ಬಳಿ ಪಟ್ಟಿ ಇತ್ತು. ಅದರಂತೆ ವರ್ಗಾವಣೆ ಆಗಿದೆ. ಈ ವಿಚಾರದಲ್ಲಿ ಆರಗ ಅರೆಸ್ಟ್ ಮಾಡಬೇಕೆಂದರು. 

ಪಿಎಸ್ಐ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ ನಂಬರ್1 ಎಂದು ವಿವರಿಸಿದರು. ಅಡಿಕೆಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಪರ್ಯಾಯ ಬೆಳೆ ಬೆಳೆಯಲು ಅಧಿವೇಶನದಲ್ಲಿ ತಿಳಿಸಿದ್ದಾರೆ. ಈದೇಶದಲ್ಲಿ ಮೊದಲನೇ ಉಗ್ರ ಯಾರು ಎಂದರೆ ನಾಥುರಾಮ್ ಗೋಡ್ಸೆ. ಆತ ಕೊಂದಿರುವುದು ಸತ್ಯವನ್ನ‌, ಅಹಸೆಯನ್ನ, ಇವೆಲ್ಲದಕ್ಕೂ ಹೋರಾಟ ಮಾಡಲಾಗುವುದು. 

ಸ್ಯಾಂಟ್ರೋ ರವಿ ಪ್ರಕರಣ: ಏಳು ಮಂದಿಯನ್ನ ಅಮಾನತು ಮಾಡಿ ಎಂದ ಸಂತ್ರಸ್ತೆ

ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್ , ಎನ್ ರಮೇಶ್, ಸಂತೇಕಡೂರ ವಿಜಯ್(ಧಣಿ), ಪಾಲಿಕೆ ಸದಸ್ಯ ರಮೇಶ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Follow Us:
Download App:
  • android
  • ios