ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ವಿವಾದ ಕೊನೆಗೂ ಸುಖಾಂತ್ಯ
* ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿವಾದ ಸುಖಾಂತ್ಯ
* ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಬಗೆಹರಿಸಿದ ಡಿಕೆಶಿ
* ಸಂಧಾನದ ಮೂಲಕ ಇಬ್ಬರಿಗೂ ಅಧಿಕಾರ ಹಂಚಿಕೆ
ಬೆಂಗಳೂರು, (ಜೂನ್.29): ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಕೊನೆಗೂ ಬಗೆಹರಿದಿದೆ. ಸಂಧಾನ ಸೂತ್ರದ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿವಾದ ಸುಖಾಂತ್ಯಗೊಳಿಸಿದ್ದಾರೆ.
ರಕ್ಷಾ ರಾಮಯ್ಯ ಹಾಗೂ ಮೊಹ್ಮದ್ ನಲಪಾಡ್ ನಡುವಿನ ಫೈಟ್ ಅನ್ನು ಡಿಕೆ ಶಿವಕುಮಾರ್ ಸಂಧಾನ ಮಾಡಿದ್ದು, ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡಿದ್ದಾರೆ.
ಡಿಸೆಂಬರ್ ವರೆಗೂ ಅಂದ್ರೆ 6 ತಿಂಗಳು ವರೆಗೆ ರಕ್ಷಾ ರಾಮಯ್ಯ ಅಧ್ಯಕ್ಷ. ಬಳಿಕ ಮುಂದಿನ ಜನವರಿ ವರೆಗೆ ತನಕ ಮೊಹಮ್ಮದ್ ನಲಪಾಡ್ ಅಧ್ಯಕ್ಷ ಎನ್ನುವ ಸಂಧಾನ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಯುವ ಘಟಕಕ್ಕೆ 6 ತಿಂಗಳ ಹಿಂದೆ ಚುನಾವಣೆಗಳು ನಡೆದು ಮಹಮ್ಮದ್ ನಲಪಾಡ್ ಆಯ್ಕೆಗೊಂಡಿದ್ದರು. ಯುವ ಅಧಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ನಲಪಾಡ್, 64,203 ಮತ ಮತಗಳನ್ನ ಪಡೆದುಕೊಂಡಿದ್ದರು. ಇನ್ನು ಮತ್ತೊಂದು ಕಡೆ ರಕ್ಷ ರಾಮಯ್ಯ ಅವರು ಎರಡನೆಯ ಸ್ಥಾನದಲ್ಲಿದ್ದು 57,271 ಸಾವಿರ ಮತ ಪಡೆದಿದ್ದರು. ಆದ್ರೆ, ಆಯ್ಕೆ ಬಳಿಕ ಅನೂರ್ಜಿತಗೊಂಡಿದ್ದರು.
ಇದೀಗ ಮುಂದಿನ ಸಿಎಂ ವಿವಾದದ ಮಧ್ಯೆ ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಮೊಹಮ್ಮದ್ ನಲಪಾಡ್ ಮತ್ತು ರಕ್ಷಾ ರಾಮಯ್ಯ ನಡುವಿನ ಫೈಟ್ ಅಂತ್ಯಗೊಂಡಿದೆ.