Breaking News: ರಾಜ್ಯ ಸರ್ಕಾರದ ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಪ್ರಕಟ: ಯಾವ ಸಚಿವರಿಗೆ ಯಾವ ಖಾತೆ ಗೊತ್ತಾ?

ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಒಳಗೊಂಡು 34 ಮಂದಿಗೆ ನಾನಾ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಲಿದೆ. 

karnataka state cabinet ministers official portfolios release gvd

ಬೆಂಗಳೂರು (ಮೇ.29): ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಒಳಗೊಂಡು 34 ಮಂದಿಗೆ ನಾನಾ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಲಿದೆ. 

ಇನ್ನು ಸಾರಿಗೆ ಇಲಾಖೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಮನವೊಲಿಸಿ ಬಳಿಕ ಸಾರಿಗೆ ಇಲಾಖೆಯ ಜೊತೆಗೆ ಮುಜರಾಯಿ ಇಲಾಖೆ ಜವಾಬ್ದಾರಿ ನೀಡಿದ್ದಾರೆ. ಅಬಕಾರಿ ಹಾಗೂ ಮುಜರಾಯಿ ಇಲಾಖೆ ಪಡೆದಿದ್ದ ಆರ್.ಬಿ.ತಿಮ್ಮಾಪುರ ಬಳಿಯಿದ್ದ ಮುಜರಾಯಿ ಇಲಾಖೆಯನ್ನು ರಾಮಲಿಂಗಾರೆಡ್ಡಿಗೆ ಬದಲಾವಣೆ ಮಾಡಿದ್ದು ಈ ಮೂಲಕ ಸಿಎಂ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಿದ್ದಾರೆ.

ಚುನಾವಣೆಯ ವೇಳೆ ಹೇಳಿದ ರೀತಿಯಲ್ಲಿ ಗ್ಯಾರಂಟಿ ಜಾರಿ ಇಲ್ಲ: ಸಚಿವ ರಾಜಣ್ಣ

ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ
ಸಿಎಂ ಸಿದ್ದರಾಮಯ್ಯ: ಹಣಕಾಸು, ಐಟಿ-ಬಿಟಿ, ಗುಪ್ತಚರ
ಡಿಸಿಎಂ ಡಿಕೆ ಶಿವಕುಮಾರ್: ಸಣ್ಣ ಮತ್ತು‌ ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ 
ಜಿ.ಪರಮೇಶ್ವರ್: ಗೃಹ 
ಹೆಚ್ ಕೆ‌ ಪಾಟೀಲ್: ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ
ಕೆ.ಹೆಚ್.ಮುನಿಯಪ್ಪ: ಆಹಾರ
ರಾಮಲಿಂಗರೆಡ್ಡಿ: ಸಾರಿಗೆ ಮತ್ತು ಮುಜರಾಯಿ
ಎಂ.ಬಿ.ಪಾಟೀಲ್: ಬೃಹತ್ ಕೈಗಾರಿಕೆ
ಕೆ.ಜೆ.ಜಾರ್ಜ್‌: ಇಂಧನ
ದಿನೇಶ್ ಗುಂಡೂರಾವ್: ಆರೋಗ್ಯ
ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ
ಸತೀಶ್ ಜಾರಕಿಹೊಳಿ: ಲೋಕೋಪಯೋಗಿ
ಕೃಷ್ಣ ಬೈರೇಗೌಡ: ಕಂದಾಯ
ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ
ಶಿವಾನಂದ ಪಾಟೀಲ್: ಜವಳಿ ಮತ್ತು ಸಕ್ಕರೆ
ಜಮೀರ್: ವಸತಿ
ಶರಣುಬಸಪ್ಪ ದರ್ಶನಾಪುರ್: ಸಣ್ಣ ಕೈಗಾರಿಕೆ
ಈಶ್ವರ್ ಖಂಡ್ರೆ: ಅರಣ್ಯ
ಚಲುವರಾಯಸ್ವಾಮಿ: ಕೃಷಿ
ಎಸ್.ಎಸ್.ಮಲ್ಲಿಕಾರ್ಜುನ: ಗಣಿ 
ರಹೀ ಖಾನ್: ಪೌರಾಡಳಿತ ಮತ್ತು ಹಜ್
ಸಂತೋಷ ಲಾಡ್: ಕಾರ್ಮಿಕ
ಡಾ.ಶರಣುಪ್ರಕಾಶ್ ಪಾಟೀಲ್: ವೈದ್ಯಕೀಯ
ಆರ್.ಬಿ.ತಿಮ್ಮಾಪುರ: ಅಬಕಾರಿ
ಕೆ.ವೆಂಕಟೇಶ್: ಪಶುಸಂಗೋಪನೆ
ಶಿವರಾಜ್ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
ಡಿ.ಸುಧಾಕರ್: ಯೋಜನೆ
ಬಿ‌.ನಾಗೇಂದ್ರ: ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
ಕೆ.ಎನ್.ರಾಜಣ್ಣ: ಸಹಕಾರ
ಬಿ.ಎಸ್.ಸುರೇಶ್: ನಗರಾಭಿವೃದ್ಧಿ
ಲಕ್ಷ್ಮಿ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಂಕಾಳ್ ವೈದ್ಯ: ಮೀನುಗಾರಿಕೆ ಮತ್ತು ಬಂದರು
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಡಾ‌.ಎಂ‌.ಸಿ‌.ಸುಧಾಕರ್: ಉನ್ನತ ಶಿಕ್ಷಣ
ಎನ್,ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ

Latest Videos
Follow Us:
Download App:
  • android
  • ios