MLC Election: ವಿಧಾನ ಪರಿಷತ್ ಚುನಾವಣೆ, ಎಲ್ಲೆಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

* ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯ
* 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಚುನಾವಣೆ 
* ಇಲ್ಲಿದೆ ಕ್ಷೇತ್ರವಾರು ಶೇಕಡಾ ಮತದಾನದ ವಿವರ

Karnataka mlc election 2021 voting percentage details rbj

ಬೆಂಗಳೂರು, (ಡಿ.10): ಕರ್ನಾಟಕದಲ್ಲಿ ಇಂದು (ಶುಕ್ರವಾರ) 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ (Karnataka MLC Election) ಮುಕ್ತಾಯಗೊಂಡಿದ್ದು, ಯಾವುದೇ ಅಹಿತರ ಘಟನೆ ನಡೆಯದೇ ಶಾಂತಿಯುತವಾಗಿ ಮತದಾನ ಅಂತ್ಯವಾಗಿದೆ.

ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಇತರೆ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಶೇಕಡಾ 99ರಷ್ಟು  ಪ್ರಮಾಣದಲ್ಲಿ ಮತದಾನ (Voting) ಆಗಿರವುದು ವಿಶೇಷ.

MLC Election: ನಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಬಹಿರಂಗಪಡಿಸಿದ ಜೆಡಿಎಸ್ ಶಾಸಕ

ಕೆಲವೆಡೆ ಮತದಾನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾದ ಘಟನೆಗಳು ನಡೆದಿದ್ದರೂ ಶಾಂತಿಯುತ ಮತದಾನವಾಗಿದ್ದು, ಇದೀಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ.. ಇನ್ನು ಕ್ಷೇತ್ರವಾರು ಶೇಕಡಾ ಮತದಾನದ ವಿವರ ಈ ಕೆಳಗಿನಂತಿದೆ ನೋಡಿ. 

* ಬೀದರ್-99.83
* ಧಾರವಾಡ- 99.68
* ದಕ್ಷಿಣ ಕನ್ನಡ- 99.71
* ಬೆಂಗಳೂರು ನಗರ- 99.86
*ಬೆಂಗಳೂರು ಗ್ರಾಮಾಂತರ-99.90
*ಕಲಬುರಗಿ- 99.73
*ರಾಯಚೂರು- 99.86
* ಚಿಕ್ಕಮಗಳೂರು-99.78
* ವಿಜಯಪುರ-99.55
* ಬಳ್ಳಾರಿ-99.81
*ಹಾಸನ- 99.78
* ಕೋಲಾರ- 99.96
*ಬೆಳಗಾವಿ- 99.98
* ಚಿತ್ರದುರ್ಗ-99.88
* ಕೊಡಗು- 99.70
*ತುಮಕೂರು- 99.78
* ಉತ್ತರ ಕನ್ನಡ- 99.76
* ಶಿವಮೊಗ್ಗ- 99.86
* ಮೈಸೂರು-99.73
* ಮಂಡ್ಯ- 99.85

20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆ
ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಬೆಳಗಾವಿ, ಬಳ್ಳಾರಿ, ಮೈಸೂರಿನ ತಲಾ 2 ಕ್ಷೇತ್ರ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ, ಬೀದರ್, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 20 ಕ್ಷೇತ್ರಗಳಲ್ಲಿ 25 ಸ್ಥಾನಗಳಿಗೆ ಇಂದು(ಡಿ.10) ಚುನಾವಣೆ ನಡೆದಿದೆ.

MLC Election: ಮತದಾನ ವೇಳೆ ಬಿಎಸ್‌ವೈ ಯಡವಟ್ಟು, ಎದುರಾಳಿ ಅಭ್ಯರ್ಥಿಗೆ ವೋಟ್ ಹಾಕಿದ್ರಾ?

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ 20 ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಜೆಡಿಎಸ್ 6 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಚುನಾವಣೆ ಫಲಿತಾಂಶ ಡಿಸೆಂಬರ್ 14 ರಂದು ಹೊರಬೀಳಲಿದೆ.

ಮತದಾನದ ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಸಾವು
ಹಳಿಯಾಳ: ತಾಲ್ಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿ ‌ಸದಸ್ಯರೊಬ್ಬರು ಶುಕ್ರವಾರ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ.

ಲಕ್ಷ್ಮಣ ಶಿವರಾಯ ಮಾನೆ (63) ಮೃತರು. ಗ್ರಾಮ ಪಂಚಾಯಿತಿಯ ಮತಗಟ್ಟೆಯಲ್ಲಿ ಬೆಳಿಗ್ಗೆ ತಮ್ಮ ಹಕ್ಕು ಚಲಾಯಿಸಿದ್ದ ಅವರು ಮನೆಗೆ ಮರಳಿ 9.30ರ ಸುಮಾರಿಗೆ ಉಪಾಹಾರ ಸೇವಿಸಿದ್ದರು. ಆಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.

ಮನೆಯವರು ಕೂಡಲೇ ಹಳಿಯಾಳದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗ ‌ಮಧ್ಯದಲ್ಲಿ ತೀವ್ರ ಹ್ರದಯಾಘಾತವಾಗಿ ಮೃತಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios