ವರಿಷ್ಠರ ನೇರ ಸಂಪರ್ಕಕ್ಕೆ ಜಾರಕಿಹೊಳಿ ಕಸರತ್ತು| ಕೃತಜ್ಞತೆ ಹೇಳುವ ನೆಪದಲ್ಲಿ ದಿಲ್ಲಿ ಪ್ರವಾಸ| ಯೋಗೇಶ್ವರ್‌ ಜೊತೆ ಮುಖಂಡರ ಭೇಟಿ

 ಬೆಂಗಳೂರು[ಫೆ.13]: ಕಳೆದ ವಾರವಷ್ಟೇ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಮೇಶ್‌ ಜಾರಕಿಹೊಳಿ ಅವರು ಪಕ್ಷದ ವರಿಷ್ಠರೊಂದಿಗೆ ನೇರ ಸಂಪರ್ಕ ಸಾಧಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಮನಸ್ಸಿರಲಿಲ್ಲ: ರಮೇಶ್‌ ಜಾರಕಿಹೊಳಿ

ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಜಾರಕಿಹೊಳಿ ಅವರು ತಮ್ಮನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸುವ ನೆಪದಲ್ಲಿ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಭವಿಷ್ಯದಲ್ಲಿ ಸಂದರ್ಭ ಬಂದರೆ ವರಿಷ್ಠರ ಕೃಪೆ ಬೇಕಾಗುತ್ತದೆ. ಕೇವಲ ರಾಜ್ಯ ನಾಯಕರನ್ನು ನೆಚ್ಚಿಕೊಂಡರೆ ಕಷ್ಟವಾಗಬಹುದು ಎಂಬ ದೂರದೃಷ್ಟಿಯಿಂದ ತಾವೇ ನೇರವಾಗಿ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುವ ನಿರ್ಧಾರಕ್ಕೆ ಜಾರಕಿಹೊಳಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಖಾತೆ ಅಂತಿಮ, ಯಾರ ಬಳಿ ಇದ್ದಿದ್ದು ಯಾರಿಗೆ, ಲಾಭ ನಷ್ಟದ ಲೆಕ್ಕಾಚಾರ!

ಸಂಪುಟ ವಿಸ್ತರಣೆ ವೇಳೆ ಅನ್ಯ ಪಕ್ಷಗಳಿಂದ ಬಿಜೆಪಿಗೆ ಬಂದ ಹತ್ತು ಮಂದಿ ನೂತನ ಸಚಿವರಾದರೂ ಈ ಪೈಕಿ ಜಾರಕಿಹೊಳಿ ಅವರೊಬ್ಬರು ಮಾತ್ರ ವರಿಷ್ಠರ ಭೇಟಿ ಮಾಡಲು ಮುಂದಾಗಿರುವುದು ವಿಶೇಷ. ಜಾರಕಿಹೊಳಿ ಅವರಿಗೆ ಪಕ್ಷದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ಸಾಥ್‌ ನೀಡಿದ್ದರು.