ಬೆಂಗಳೂರು(ಜ. 28)  ತನ್ನ ರಾಜಕೀಯ ಬದ್ದ ವೈರಿ ಕೊಠಡಿಯನ್ನೇ ಸಚಿವ ಸಿ ಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿಂದೆ ಪಡೆದಿದ್ದ  ಕೊಠಡಿಯನ್ನೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ.

ವಿಧಾನಸೌಧದ ಕೊಠಡಿ ಸಂಖ್ಯೆ 336, 337 ಸಂಖ್ಯೆಯ ಕೊಠಡಿ ಪಡೆದ ಯೋಗೇಶ್ವರ್ ಪೂಜೆ ನೆರವೇರಿಸಿದ್ದಾರೆ.  ಈ ಹಿಂದೆ 20111 ರಲ್ಲಿ ಸಚಿವರಾಗಿದ್ದಾಗ ಈ ಕೊಠಡಿಯಲ್ಲೇ ಕರ್ತವ್ಯ. ನಿರ್ವಹಿಸಿದ್ದ ಯೋಗೇಶ್ವರ್ ಈಗ ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದ್ದಾರೆ.

ಪರಿಷತ್‌ ಗಾಗಿ ಒಂದಾದ ಬಿಜೆಪಿ-ಜೆಡಿಎಸ್

ಈ ಕೊಠಡಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈಗಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯನಿರ್ವಹಿಸಿದ್ದರು. ಸಹಜವಾಗಿಯೇ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದಿರೋದಕ್ಕೆ ಕಾರಣ ಏನು..?  ಎಂಬ ಪ್ರಶ್ನೆ ಸಹ ಮೂಡಿದೆ.

ರಮೇಶ ಜಾರಕಿಹೊಳಿ ಸೂಚನೆಯಂತೆ ಸಚಿವ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಇನ್ನೊಂದು ಕಡೆ ಡಿಕೆಶಿ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆ ಪಡೆದಿರುವ ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಂಡು ಹಲವು ದಿನ ಕಳೆದಿದೆ. ಇದೀಗ ತನ್ನ ಆಪ್ತನಿಗೆ ಡಿಕೆಶಿ ಇದ್ದ ಕೊಠಡಿ ಕೊಡಿಸಿದ ರಮೇಶ್ ಜಾರಕಿಹೊಳಿ ಕೊಡಿಸಿದ್ದಾರೆ.