ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಅಸಮಾಧಾನ, 'ಕಾಲಾಯ ತಸ್ಮೈ ನಮಃ' ಎಂದ ಸಿಎಂ ಇಬ್ರಾಹಿಂ!

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ಬಿಜೆಪಿ ಹತ್ತಿರ ಹೋಗಿದ್ದು ತಪ್ಪು, ಅವರೇ ನಮ್ಮ ಬಳಿ ಬರಬೇಕಿತ್ತು ಎಂದು ಹೇಳಿದ್ದಾರೆ.
 

Karnataka JDS chief C M Ibrahim disgruntled Alliance With BJP to decide further action on october 16 san

ಬೆಂಗಳೂರು (ಸೆ.30): ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ಕಾರಣ ನಿಮ್ಮ ಮುಂದಿನ ನಿರ್ಧಾರವೇನು ಎನ್ನುವ ಮಾಧ್ಯಮ ಪ್ರಶ್ನೆಗೆ, ಕಾಲಾಯ ತಸ್ಮೈ ನಮಃ ಎಂದು ಸಂಸ್ಕೃತದ ಶ್ಲೋಕ ಹೇಳಿದ ಸಿಎಂ ಇಬ್ರಾಹಿಂ ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ. ಇದರ ನಡುವೆ, ಮೈತ್ರಿ ವಿಚಾರವಾಗಿ ಜೆಡಿಎಸ್‌ ಪಕ್ಷದ ನಾಯಕೇ ಬಿಜೆಪಿಯ ಬಳಿ ಹೋಗಿದ್ದು, ತಪ್ಪು, ಅವರೇ ನಮ್ಮ ಬಳಿ ಬರಬೇಕಿತ್ತು ಎಂದು ಹೇಳಿದ್ದಾರೆ. ಮೈತ್ರಿ ಆದ ಬಳಿಕ ಕುಮಾರಸ್ವಾಮಿ ಜತೆ ಇಲ್ಲಿಯವರೆಗೂ ಮಾತನಾಡಿಲ್ಲ . ಕುಮಾರಸ್ವಾಮಿ ನನಗೆ ಸಹೋದರ, ದೇವೇಗೌಡರು ತಂದೆ ಸಮಾನ. ದೆಹಲಿಗೆ ಹೋಗ್ತಿದ್ದೇವೆ ಅಂತಾ ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ದಾರೆ ಅನ್ನೋದನ್ನೂ ಹೇಳಿಲ್ಲ. ಪಕ್ಷದ ಅಧ್ಯಕ್ಷರಿಗೇ ಮೈತ್ರಿ ಆಗಿದೆ ಅಂತ ಹೇಳಿಲ್ಲ. ಚುನಾವಣೆಯಲ್ಲಿ ಶೇಕಡಾ 20 ರಷ್ಟು ಮುಸ್ಲಿಂ ಮತ ಬಂದಿದೆ. ಒಕ್ಕಲಿಗ ಮತ ಕಾಂಗ್ರೆಸ್ ಗೆ ಹೋಗಿದೆ. ಪಕ್ಷದ ತೀರ್ಮಾನ ಅಂತ ಕರೆಯಲು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಬೇಕು. ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಅಂದಿದ್ದೀರಿ. ಆದರೆ, ನನ್ನ ಜತೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಜೆಡಿಎಸ್‌ನಲ್ಲಿಯೇ ಉಳಿಯುತ್ತೀರಾ ಎನ್ನುವ ಪ್ರಶ್ನೆಗೆ, 16 ನೇ ತಾರೀಖು ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಹೈಕಮಾಂಡ್ ನಾಯಕರು ಮಾತನಾಡಿದ್ದಾರೆ. ಜನತಾದಳ ಸೇರಲು ದೇವೇಗೌಡರು ಕಾರಣ. ಸೆಕ್ಯುಲರ್ ಸಿದ್ದಾಂತ ಅಂತ ಜೆಡಿಎಸ್‌ಗೆ ಹೋದೆ. ಅಂದು ಪರಿಷತ್ ಸದಸ್ಯ ಸ್ಥಾನ ಬಿಟ್ಟು ಹೋದೆ. ಇಲ್ಲಿ ಪಕ್ಷದ ಅಧ್ಯಕ್ಷನಾಗಿದ್ದೇನೆ. 16 ನೇ ತಾರೀಖು ಸಭೆ ಅಜೆಂಡಾ ಏನೆಂದರೆ, ಈ ಮೈತ್ರಿ ಮಾತುಕತೆ ಸರಿಯೇ? ಮೈತ್ರಿ ಮುಂದುವರಿದರೆ, ಮುಂದಿನ ನಡೆಯೇನು? ದೇವೇಗೌಡರು ಮನವೊಲಿಸುವ ಬಗ್ಗೆ ಚರ್ಚೆ ನಡೆಸಲಿದ್ದೇವೆ. ದೇವೇಗೌಡರು ಒಪ್ಪದೇ ಇದ್ದರೆ, ಮುಂದಿನ ನಡೆ ಏನು ಅನ್ನೋ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ತಿಪ್ಪೇಸ್ವಾಮಿ ಮೂಲಕ ನನ್ನ ಜತೆ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ. 16ನೇ ತಾರೀಖು ನಾನು ಮಾತನಾಡ್ತೀನಿ ಎಂದು ಹೇಳಿದ್ದೇನೆ ಎಂದರು.

ಮೈತ್ರಿ ಯಿಂದ ಜೆಡಿಎಸ್ ಗೆ ಲಾಭ ಇದೆಯೇ ಎನ್ನುವ ಪ್ರಶ್ನೆಗೆ,  ಮೂರೋ ನಾಲ್ಕು ಸೀಟು ಬಂದರೂ ಬರದೇ ಇದ್ರೂ, ನಮ್ಮ ಸಿದ್ದಾಂತ ಏನಾಯಿತು.? ನಮ್ಮ ಸಿದ್ದಾಂತವನ್ನು ಬಿಜೆಪಿ ಒಪ್ಪುತ್ತಾರೆಯೇ? ಹದಿನಾರನೆಯ ತಾರೀಖು ಚರ್ಚೆ ಮಾಡ್ತೀನಿ. ದೆಹಲಿಗೆ ಹೋಗುವಾಗ ನನ್ನ ಬಿಟ್ಟು ಹೋದ್ರಲ್ಲಾ. ನಂಗೆ ನೋವಾಯಿತು. ಇವರು ಬಿಜೆಪಿ ಹತ್ರ ಹೋಗಿದ್ದು ತಪ್ಪು. ಅವರೇ ನಮ್ಮ ಬಳಿ ಬರಬೇಕಿತ್ತು. ಪಕ್ಷದ ಕಾರ್ಯಕರ್ತರ ಮುಂದೆ ತಲೆ ತಗ್ಗಿಸೋ ಪರಿಸ್ಥಿತಿ ಬಂತು ಎಂದು ಸಿಎಂ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದಾರೆ.

ನಾವು ಯಾರ ಮೇಲೂ ಡಿಪೆಂಡ್ ಅಗಿರಲಿಲ್ಲ, ಅವರು ನಮ್ಮ ಮೇಲೆ‌ ಡಿಪೆಂಡ್ ಆಗಿದ್ದರು. ಈಗ ಹೋಗಿ ಮಾತಾಡಿದ್ದೇ ತಪ್ಪು ಮಾಡಿದ್ದು. ವಯಸ್ಸಾದ ಕಾಲದಲ್ಲಿ ದೇವೇಗೌಡರ ಕೈ ಹಿಡಿದೆ ಎಂಬ ತೃಪ್ತಿ ಇದೆ. ನನಗೆ ಸ್ಥಾನ ಮುಖ್ಯ ಅಲ್ಲ, ಮಾನ ಮುಖ್ಯ. 60 ವರ್ಷದ ರಾಜಕೀಯದಲ್ಲಿ ಕಳಂಕ ನನ್ನ ಮೇಲೆ ಇಲ್ಲ.16 ರಂದು ಮುಂದೆ ಏನು ಮಾಡಬೇಕು ಅಂತಾ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪವಾರ್, ‌ನಿತೀಶ್, ಆಪ್, ಕಾಂಗ್ರೆಸ್ ಪಕ್ಷವೋ‌ ಏನು ಅಂತಾ ತೀರ್ಮಾನಿಸುತ್ತೇನೆ. ಕಾಂಗ್ರೆಸ್, ಬಿಜೆಪಿಗೆ ಒಳ್ಳೆಯದಾಗಬೇಕು ಅಂದರೆ ಕರ್ನಾಟಕದಲ್ಲಿ ಮೂರನೇ ಶಕ್ತಿ ಇರಬೇಕು ಎಂದು ಹೇಳಿದ್ದಾರೆ.

ನಾನಿನ್ನೂ ಬದುಕಿದ್ದೇನೆ, ಮುಸ್ಲಿಮರನ್ನು ಉಳಿಸಿಕೊಳ್ತೀನಿ: ದೇವೇಗೌಡ ಖಡಕ್‌ ಮಾತು!

ನನ್ನ ನಿಲುವು ಪಕ್ಷದ ಅಧ್ಯಕ್ಷನಾಗಿ ಈಗಲೇ ಹೇಳುವುದರಲ್ಲಿ ಅರ್ಥ ಇಲ್ಲ. ನಿರೀಕ್ಷಣೆ ಮಾಡಿ ಉತ್ತರ ಕೊಡುವವನು ಅಲ್ಲ ನಾನು. ಇಂದು ಪಾಂಡವರ ಸ್ಥಿತಿಯೇ ನಮಗೆ ಆಗಿದೆ. ಮದುವೆಗೆ ಹೋಗುವುದು ಬೇರೆ, ಮದುವೆ ಆಗುವುದು ಬೇರೆ. ಪಕ್ಷ ಬೇರೆ, ಸದನದ ನಡವಳಿಕೆ ಬೇರೆ. ನಮ್ಮ ಸಿದ್ದಾಂತ ಬಿಜೆಪಿಯವರು ಒಪ್ಪುತ್ತಾರಾ? ಜನತಾದಳ ಸೀಟು ನೋಡಿ ರಾಜಕೀಯ ಮಾಡುವ ಪಕ್ಷ ಅಲ್ಲ. ಕುಮಾರಸ್ವಾಮಿ ತಿಪ್ಪೇಸ್ವಾಮಿ ಮೂಲಕ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ನಾಳೆಯ ಸಭೆಗೆ ಕರೆದಿದ್ದಾರೆ, ಹೋಗಲ್ಲ. ದೆಹಲಿಗೆ ಹೋಗುವಾಗ ಹೇಳದೇ ಹೋಗಿದ್ದು ನನಗೆ ನೋವಾಗಿದೆ. ಈಗ ನಾನು ಪಕ್ಷದ ಕಾರ್ಯಕರ್ತರ ಮುಂದೆ ತಲೆ ಬಗ್ಗಿಸುವ ಪರಿಸ್ಥಿತಿ ಬಂದಿದೆ. ನನ್ನ ಕಡೆಗಣಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ನಾವು ಅವರ ಹೊಲಕ್ಕೇ ಗೊಬ್ಬರ ಹೊಡೆಯುತ್ತಿದ್ದೇವೆ. ನನ್ನ ಕಡೆಗಣಿಸಿ ಅವರಿಗೆ ಏನಾಗಬೇಕಿದೆ? ಬಿಜೆಪಿಯವರು ದೇವೇಗೌಡರ ಮನೆ ಬಾಗಿಲಿಗೆ ಬರಬೇಕಿತ್ತು. ಅಲ್ಪಸಂಖ್ಯಾತರಿಗೆ ದೇವೇಗೌಡರ ಬಗ್ಗೆ ವಿಶ್ವಾಸ ಇದ್ದಿದ್ದಕ್ಕೆ ಮತಗಳು ಬಂದಿವೆ. ಒಕ್ಕಲಿಗರ ಜನತಾದಳದ ಮೂಲ ಮತಗಳು ಕಾಂಗ್ರೆಸ್ ಗೆ ಹೋಗಿವೆ ಎಂದು ತಿಳಿಸಿದರು.

ಜೆಡಿಎಸ್‌-ಬಿಜೆಪಿ ಮೈತ್ರಿ: ಸಮಯಾನುಸಾರ ಹೊಂದಾಣಿಕೆ ಮಾಡಿಕೊಂಡಿದ್ದು ನಮಗೆ ಹೊಸದಲ್ಲ, ಕಾಶಂಪೂರ

 

Latest Videos
Follow Us:
Download App:
  • android
  • ios