ವಿಜಯಪುರ[ಮಾ. 03] ಮಂಡ್ಯದಿಂದ ಸುಮಲತಾಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಒಳ್ಳೆಯದು. ಒಂದು ವೇಳೆ ಟಿಕೆಟ್ ನೀಡಿದರೆ ಸುಮಲತಾ ಪರ ಪ್ರಚಾರ ಮಾಡುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಿಜಯಪುರಲ್ಲಿ ಮಾತನಾಡಿ, ಟಿಕೆಟ್ ನೀಡುವ ನಿರ್ಧಾರ ಹೈಕಮಾಂಡಗೆ ಬಿಟ್ಟ ವಿಚಾರ ಎನ್ನುತ್ತಾ ಸುಮಲತಾ ಪರ ಬ್ಯಾಟ್ ಬೀಸಿದರು.

ಅಂಬಿ ರಾಜಕೀಯದಲ್ಲಿ ರಾರಾಜಿಸುವಾಗ ನೀವು ಬಚ್ಚಾ ಎಂದ ಫ್ಯಾನ್ಸ್, HDK ಯೂಟರ್ನ್

ಎಂ.ಬಿ.ಪಾಟೀಲರೆ ಅಧ್ಯಕ್ಷರಾಗಿರುವ  ಬಿಎಲ್‌ ಡಿ  ಸಂಸ್ಥೆಯ ಇಂಜಿನಿಯರಿಂಗ್ ಪ್ರಾಧ್ಯಾಪಕರೊಬ್ಬರು ಪಾಕಿಸ್ತಾನ ಪ್ರಧಾನಿ ಪರ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪಾಟೀಲ್, ಪ್ರಾಧ್ಯಾಪಕ ಪಾಕ್ ಪ್ರಧಾನಿ ಪರ ಪೋಸ್ಟ್ ಮಾಡಿಲ್ಲ. ಯುದ್ಧವಾದರೆ ಎರಡೂ ದೇಶದ ಜನರಿಗೆ,ದೇಶಕ್ಕೆ ಹಾನಿಯಾಗುತ್ತದೆ ಎಂದು ಪೋಸ್ಟ್  ಮಾಡಿದ್ದಾರೆ ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಯಾವುದೇ ವಿಚಾರದಲ್ಲಿ ಕಾನೂನು ಚೌಕಟ್ಟಿನೊಳಗೆ ಹೋರಾಡಬೇಕು.  ದೇಶದ ವಿರುದ್ದ ಹಾಗೂ ಸೈನಿಕರ ವಿರುದ್ದ ಮಾತನಾಡಿದರೆ, ಪೋಸ್ಟ್ ಮಾಡಿದರೆ ಉಗ್ರ ಕ್ರಮ ತೆಗೆದುಕೊಳ್ಳಲೇಬೇಕು ಎಂದರು.