ಎಚ್‌ ವಿಶ್ವನಾಥ್ ವಿಧಾನ ಪರಿಷತ್‌ಗೆ ನಾಮನಿರ್ದೇಶನ: ಸರ್ಕಾರಕ್ಕೆ ಕೋರ್ಟ್ ನೋಟಿಸ್

ಎಚ್. ವಿಶ್ವನಾಥ್ ಅವರನ್ನ ವಿಧಾನ ಪರಿಷತ್‌ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದಕ್ಕೆ ಹೈಕೋರ್ಟ್ ಪಿಐಎಲ್ ಸಲ್ಲಿಕೆಯಾಗಿದ್ದು, ಇದೀಗ ಕೋರ್ಟ್ ಈ ಬಗ್ಗೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.‌

Karnataka high Court Notice To State Govt over pil on nominating vishwanath as mlc rbj

ಬೆಂಗಳೂರು, (ಸೆ.22): ಅನರ್ಹ ಶಾಸಕನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿರುವುದಕ್ಕೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು (ಮಂಗಳವಾರ) ಹೈಕೋರ್ಟ್‌ನಲ್ಲಿ ನಡೆಯಿತು.  

ಸಂವಿಧಾನದ ನಿಯಮಾವಳಿ ಉಲ್ಲಂಘಿ ಅನರ್ಹ ಶಾಸಕರನ್ನು ಎಂಎಲ್‌ಸಿಯಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಎಚ್‌. ವಿಶ್ವನಾಥ್ ಅವರ ನೇಮಕ್ಕೆ ತಡೆ ನೀಡಬೇಕೆಂದು ಎಸ್. ರುಕ್ಮಾಂಗದ ಪಿಐಎಲ್ ಸಲ್ಲಿಸಿದ್ದರು.

ವಿಶ್ವನಾಥ್‌ಗೆ ಎದುರಾಯ್ತು ಮತ್ತೊಂದು ಕಂಟಕ: ಪರಿಷತ್‌ ಸ್ಥಾನ ರದ್ದತಿಗೆ ಶಾಸಕರಿಂದ ಪತ್ರ

ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪ್ರತಿವಾದಿಗಳ ವಾದ ಕೇಳದೇ ಆದೇಶ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಅಕ್ಟೋಬರ್ 20ಕ್ಕೆ ಮುಂದೂಡಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಶಾಸಕರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಬಳಿಕ ಕೆಲವರು ಬೈ ಎಲೆಕ್ಷನ್‌ನಲ್ಲಿ ಗೆದ್ದು ಮಂತ್ರಿಯಾಗಿದರು.

ಇನ್ನು ಎಚ್.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಸೋಲು ಕಂಡರು. ಆದರೂ ಅವರಿಗೆ ಬಿಜೆಪಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದೆ. ಅಲ್ಲದೇ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರನ್ನೂ ಸಹ ಪರಿಷತ್‌ ಸದಸ್ಯರಾಗಿ ನೇಮಿಸಲಾಗಿದೆ.  ಇದೀಗ ಹೈಕೋರ್ಟ್ ಕೊಟ್ಟಿರುವ ನೋಟಿಸ್‌ಗೆ ರಾಜ್ಯ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios