ಸಿಎಂ, ಡಿಸಿಎಂ ಚನ್ನಪಟ್ಟಣ ಅಭಿವೃದ್ಧಿ ಬದಲು, ಗೌಡರ ಕುಟುಂಬದ ಬಗ್ಗೆ ಟೀಕಿಸಿದ್ದಾರೆ; ಸಚಿವ ಕುಮಾರಸ್ವಾಮಿ!

ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ಸರ್ಕಾರ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿಲ್ಲ, ವೈಯಕ್ತಿಕ ಟೀಕೆಗಳಿಗೆ ಸೀಮಿತವಾಗಿದೆ. ಸಿಎಂ, ಡಿಸಿಎಂ ಭಾಷಣದಲ್ಲೂ ಚನ್ನಪಟ್ಟಣದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದರು.

Karnataka Govt not said about Channapatna development says Minister HD Kumaraswamy sat

ರಾಮನಗರ (ನ.07): ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ಸರ್ಕಾರ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿಲ್ಲ, ವೈಯಕ್ತಿಕ ಟೀಕೆಗಳಿಗೆ ಸೀಮಿತವಾಗಿದೆ. ಸಿಎಂ, ಡಿಸಿಎಂ ಭಾಷಣದಲ್ಲೂ ಚನ್ನಪಟ್ಟಣದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣದ ವಿರೂಪಾಕ್ಷಿಪುರ ಗ್ರಾಮದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಸೇರಿ ಹಲವು ಮಂತ್ರಿಗಳು ಚನ್ನಪಟ್ಟಣಕ್ಕೆ ಬಂದು ಭಾಷಣ ಮಾಡಿದ್ದಾರೆ. ನಿನ್ನೆ ಸಿಎಂ ಭಾಷಣದಲ್ಲಿ ಚನ್ನಪಟ್ಟಣಕ್ಕೆ ಏನು ಕೊಡ್ತೀವಿ ಅನ್ನೋದೆ ಇಲ್ಲ. ದೇವೇಗೌಡರು, ನಿಖಿಲ್ ಹಾಗೂ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಚನ್ನಪಟ್ಟಣ ಸಮಸ್ಯೆ, ಮುಂದಿನ ಕಾರ್ಯಕ್ರಮದ ಬಗ್ಗೆ ಸಣ್ಣ ಮಾತು ಇಲ್ಲ. ಇನ್ನೂ ಕೆಲ ಮಂತ್ರಿಗಳು ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಏನು‌ ಮಾಡವ್ರೆ ಅಂತಾರೆ. ಅಭಿವೃದ್ಧಿ ಅಂದ್ರೆ ಏನು, ಚನ್ನಪಟ್ಟಣ ಸುತ್ತುತ್ತಾ ಇದ್ದೀರಲ್ಲ. ನಿಮ್ಮ ಕ್ಷೇತ್ರದ ರಸ್ತೆ, ಕ್ಷೇತ್ರದ ಗ್ರಾಮದ ಪರಿಸ್ಥಿತಿ ನೋಡಿದ್ದೀರಾ? ಕಮಿಷನ್ ಪಡೆಯೋದೆ ನಿಮ್ಮ ಪ್ರಕಾರ ಅಭಿವೃದ್ಧಿಯಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಹೇಳಿಕೆ ನೋಡುತ್ತಿದ್ದರೆ ಅಭಿವೃದ್ಧಿ ಪದದ ಬಗ್ಗೆ ಗೊಂದಲ ಆಗುತ್ತದೆ. ನಿಖಿಲ್ ಕುಮಾರಸ್ವಾಮಿ ಆಯ್ಕೆ ಆಗಿ ವಿಧಾನಸೌದಕ್ಕೆ ಹೋಗುತ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಅಂದರೆ ಏನು ಅಂತ ವಿಶೇಷ ಚರ್ಚೆ ಮಾಡಿ ಗಮನ ಸೆಳೆಯಬೇಕು. ರೂಲ್ಸ್ 69 ಅಡಿ ನಿಖಿಲ್ ಕುಮಾರಸ್ವಾಮಿ ಅವರೇ ದೊಡ್ಡ ಚರ್ಚೆ ಮಾಡ್ತಾರೆ. ಇವರ ಎಲ್ಲಾ ಟೀಕೆಗೂ ನಿಖಿಲ್ ವಿಧಾನಸಭೆಗೆ ಪ್ರವೇಶ ಮಾಡಿ ಉತ್ತರ ಕೊಡುತ್ತಾನೆ. ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಇದನ್ನೂ ಓದಿ: ಅಧಿಕಾರದ ತೆವಲಿಗಾಗಿ ಕುಮಾರಸ್ವಾಮಿಯಿಂದ ಕ್ಷೇತ್ರ ಬದಲಾವಣೆ: ಸಚಿವ ಚಲುವರಾಯಸ್ವಾಮಿ

ಕುಮಾರಸ್ವಾಮಿ ಆಡಿಯೋ ಹಾಕಿ ಕಾಂಗ್ರೆಸ್ ನಾಯಕರ ಆರೋಪ ವಿಚಾರದ ಬಗ್ಗೆ ಮಾತನಾಡಿ, ಡಿ.ಕೆ.ಸುರೇಶ್ ಆಡಿಯೋ ಹಾಕಿದ ಕುಮಾರಸ್ವಾಮಿ, ಬಿಡದಿಯಲ್ಲಿ ಮೆಗಾಸಿಟಿ ಮಾಡ್ತೀನಿ ಅಂತ ಟೋಪಿ ಹಾಕವ್ನೆ. ರಿಯಲ್ ಎಸ್ಟೇಟ್ ಹೆಸರಲ್ಲಿ ಸಾಕಷ್ಟು ಜನಕ್ಕೆ ಟೋಪಿ ಹಾಕವ್ನೆ. ಬಿಡದಿ ಭಾಗದಲ್ಲಿ ಹೋಗಿ ಕೇಳಿ ಅವನ ಬಗ್ಗೆ ಎಂದು ಯೋಗೆಶ್ವರ್ ಬಗ್ಗೆ ಡಿ.ಕೆ.ಸುರೇಶ್ ಮಾತನಾಡಿರೋ ಆಡಿಯೋ ಪ್ಲೇ ಮಾಡಿ ಕೌಂಟರ್ ನೀಡಿದರು. ಮುಂದುವರೆದು, ಕುಮಾರಸ್ವಾಮಿಗ ಮುಖಂಡರ ಹೆಸರೂ ಗೊತ್ತಿಲ್ಲ ಅದಕ್ಕೆ ಬ್ರದರ್, ಬ್ರದರ್ ಎಂತಾರೆ ಎಂಬ ಡಿ.ಕೆ.ಸುರೇಶ್ ಆರೋಪಕ್ಕೆ ಅಯ್ಯೋ..ನಾನು‌ ಎಲ್ಲರನ್ನೂ ಬ್ರದರ್ ಅಂತಲೇ ಕರೆಯುತ್ತೇನೆ. ಅದರಲ್ಲೇನಿದೆ ಎಂದು ಹೇಳಿದರು.

ಕುಮಾರಸ್ವಾಮಿ ಗುರಿ ಅಭಿವೃದ್ಧಿ ಅಲ್ಲ, ಸರ್ಕಾರ ಬೀಳಿಸೋದು ಎಂಬ ಕೃಷ್ಣ ಬೈರೇಗೌಡ ಆರೋಪ ವಿಚಾರದ ಬಗ್ಗೆ ಮಾತನಾಡಿ, ಕೃಷ್ಣ ಬೈರೇಗೌಡನ ಕ್ಷೇತ್ರದಲ್ಲಿ ಪ್ರವಾಹ ಆಗಿ ಜನ ಬೀದಿಗೆ ಬಂದಿದ್ದಾರೆ. ಬ್ಯಾಟರಾಯನಪುರದಲ್ಲಿ ಏನಪ್ಪ ನೀನು ಅಭಿವೃದ್ಧಿ ಮಾಡಿರೋದು. ಅಧಿಕಾರಿಗಳಿಗೆ ಕೈ ಮುಗಿದು ಗೋಗರಿದಿದ್ದೀರಿ. ಚನ್ನಪಟ್ಟಣದಲ್ಲಿ ನಾನು‌ ಮಾಡಿರೋ ಕೆಲಸದ 10 ಪರ್ಸೆಂಟ್ ಮಾಡಿದ್ದೀರಾ.? ನಿಮ್ಮಿಂದ ಅಭಿವೃದ್ಧಿ ಮಾಡೋದು ಕಲಿಬೇಕಾ.? ನಿಮ್ಮ ಯೋಗ್ಯತೆಗೆ ನಿಮ್ಮ ಕ್ಷೇತ್ರದಲ್ಲಿ ರೈತರ ಭೂಮಿ ತಿಂದಿದ್ದಾರೆ. ನಿಮ್ಮ ಗುರುಗಳು ಅರಣ್ಯ ಇಲಾಖೆ ಜಾಗ ದೋಚಿದ್ದಾರೆ. ಶ್ರೀನಿವಾಸಪುರದಲ್ಲಿ 120 ಎಕರೆ ಲೂಟಿ ಮಾಡಿ, ಪೊಗರುದಸ್ತಾಗಿದ್ದಾರಲ್ಲ. ಕೇಂದ್ರ ಅರಣ್ಯ ಇಲಾಖೆ ಕೊಟ್ಟಿರೋ ನೋಟೀಸ್ ನೋಡಿದ್ದೀರಾ.? ರೈತರನ್ನ ಒಕ್ಕಲೆಬ್ಬಿಸುತ್ತೀರಿ, ಒಂದು ರಸ್ತೆ ಮಾಡಲು ಬಿಡಲ್ಲ. ಇದೇನಾ ಅಭಿವೃದ್ಧಿ.? ಎಂದು ಕಿಡಿಕಾರಿದರು.

ಇದನ್ನೂ ಓದಿ: ಮೊಬೈಲ್ ರಿಚಾರ್ಜ್‌ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್ ಪ್ಲಾನ್; ನೀವು ಹಣ ಕಟ್ಟಿದಷ್ಟೇ ಕರೆಂಟ್ ಸಪ್ಲೈ!

Latest Videos
Follow Us:
Download App:
  • android
  • ios