Asianet Suvarna News Asianet Suvarna News

Karnataka Election Results 2023 : ಬಜರಂಗದಳ ನಿಷೇಧ ಘೋಷಣೆಯಿಂದ ಕಾಂಗ್ರೆಸ್‌ಗೆ ಮುಸ್ಲಿಂ ಮತ?

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲೇ ನೀಡಿದ್ದ ಭರವಸೆಯಿಂದಾಗಿ ಮುಸ್ಲಿಂ ಮತಗಳನ್ನು ತನ್ನ ಪರವಾಗಿ ಧ್ರುವೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  

Karnataka Election Results 2023 Is Bajrang Dal Ban Proclamation Muslim Vote for Congress Congress succeeded in polarizing the Muslim vote akb
Author
First Published May 14, 2023, 7:50 AM IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲೇ ನೀಡಿದ್ದ ಭರವಸೆಯಿಂದಾಗಿ ಮುಸ್ಲಿಂ ಮತಗಳನ್ನು ತನ್ನ ಪರವಾಗಿ ಧ್ರುವೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ‘ಸರ್ವ ಜನಾಂಗದ ಶಾಂತಿಯ ತೋಟ-ಇದುವೇ ಕಾಂಗ್ರೆಸ್‌ನ ಬದ್ಧತೆ’ ಹೆಸರಿನಲ್ಲಿ ‘ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ’ ಘೋಷವಾಕ್ಯದಡಿ ಬಿಡುಗಡೆಯಾದ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ಬಜರಂಗದಳ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ದಂತಹ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು.

ರಾಜ್ಯ ಕಾಂಗ್ರೆಸ್‌ ಮುಖಂಡರ ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ನಾಯಕರೊಬ್ಬರು ಬಜರಂಗದಳ ನಿಷೇಧ ಪ್ರಸ್ತಾಪವನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದರು. ಆದರೆ ಇದಕ್ಕೆ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವೆಡೆ ಪ್ರತಿಭಟನೆಯನ್ನೂ ನಡೆಸಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

ಈ ಹಂತದಲ್ಲಿ ಕಾಂಗ್ರೆಸ್‌ನ ಕೆಲ ನಾಯಕರು, ಇದು ಬಿಜೆಪಿ ಕೈಗೆ ಚುನಾವಣೆ ಸಮಯದಲ್ಲಿ ಪ್ರಬಲವಾದ ಅಸ್ತ್ರ ನೀಡಿದಂತಾಗಿದೆ. ಇದನ್ನು ಹಿಂಪಡೆದರೆ ಚುನಾವಣೆ ದೃಷ್ಟಿಯಿಂದ ಒಳ್ಳೆಯದು ಎಂಬ ಸಲಹೆ ನೀಡಿದರಾದರೂ, ನಿಷೇಧ ಪ್ರಸ್ತಾಪ ವಾಪಸ್‌ ಪಡೆದರೆ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಸಮಜಾಯಿಷಿಯೂ ಹಲವರಿಂದ ವ್ಯಕ್ತವಾಗಿದ್ದರಿಂದ ಅನಿವಾರ್ಯವಾಗಿ ರಾಜ್ಯ ಕಾಂಗ್ರೆಸ್‌ ಮುಖಂಡರು ಇದನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬಜರಂಗ ದಳ ನಿಷೇಧ ಪ್ರಸ್ತಾಪ ಬಿಸಿ ತುಪ್ಪವಾದರೂ ಕೊನೆಗೆ ಕಾಂಗ್ರೆಸ್‌ ಇದನ್ನು ಅರಗಿಸಿಕೊಂಡಿತು. ಚುನಾವಣಾ ಪ್ರಚಾರ ಸಭೆಗಳಲ್ಲೆಲ್ಲಾ ಬಿಜೆಪಿ ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಿತು. ಇದನ್ನೇ ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿಯೂ ಮಾಡಿಕೊಂಡಿತು. ಅಷ್ಟೇ ಏಕೆ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದಲ್ಲೂ ‘ಜೈ ಬಜರಂಗಿ’ ಘೋಷಣೆ ಮೊಳಗಿತು. ಇದೆಲ್ಲದರ ಪರಿಣಾಮವಾಗಿ ಜೆಡಿಎಸ್‌ಗೆ ಹಂಚಿಕೆಯಾಗುತ್ತಿದ್ದ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಚೆನ್ನಾಗಿ ವಾಲಿದವು. ಹೀಗಾಗಿ ಹೆಚ್ಚಿನ ಸ್ಥಾನಗಳನ್ನು ಪಕ್ಷ ಗಳಿಸುವಂತಾಯಿತು. ಮುಸ್ಲಿಂ ಮತಗಳ ಧ್ರುವೀಕರಣವಾಯಿತು ಎಂದು ಹೇಳಲಾಗುತ್ತಿದೆ.

ಬಜರಂಗದಳ ನಿಷೇಧದ ಕಾಂಗ್ರೆಸ್‌ ಪ್ರಣಾಳಿಕೆಗೆ ರಮ್ಯಾ ಆಕ್ಷೇಪ

Follow Us:
Download App:
  • android
  • ios