Asianet Suvarna News Asianet Suvarna News

Raichur Election Result 2023: 'ಕೈ' ಹಿಡಿದ ಬಿಸಿಲ ನಾಡ ಜನತೆ!

2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿವೆ. 4 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳು ಇರುವ ಈ ಜಿಲ್ಲೆಯಲ್ಲಿ 2 ಸಾಮಾನ್ಯ ಕ್ಷೇತ್ರಗಳು. 

Karnataka Election Result 2023 Raichur Assembly Constituencies gvd
Author
First Published May 13, 2023, 4:32 PM IST

ರಾಯಚೂರು (ಮೇ.13): 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿವೆ. 4 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳು ಇರುವ ಈ ಜಿಲ್ಲೆಯಲ್ಲಿ 2 ಸಾಮಾನ್ಯ ಕ್ಷೇತ್ರಗಳು. 

ರಾಯಚೂರು ಗ್ರಾಮೀಣ ಕ್ಷೇತ್ರ (Raichuru Rural Constituency): ಕಾಂಗ್ರೆಸ್‌ನ ಬಸನಗೌಡ ದದ್ದಲ್ ಗೆಲುವು 
ಕಳೆದ ಚುನಾವಣೆಯಲ್ಲಿ ಗೆದ್ದು ಮೊದಲ ಸಲ ಶಾಸಕರಾಗಿದ್ದ ಕಾಂಗ್ರೆಸ್‌ನ ಬಸನಗೌಡ ದದ್ದಲ್ ಈ ಬಾರಿ ಮತ್ತೊಮ್ಮೆ 88694 ಗಳಿಸಿ ಗೆದಿದ್ದಾರೆ. ಬಿಜೆಪಿಯ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ನಡುವೆ ನೇರ ಪೈಪೋಟಿಯಿತ್ತು. ಆಮ್ ಆದ್ಮಿ ಪಾರ್ಟಿಯಿಂದ ಸುಭಾಶ್ಚಂದ್ರ ಸಾಂಬಾಜಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಎಂ.ಖಾಸಿಂ ನಾಯಕ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯಿಂದ ವೀರನಗೌಡ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಐ.ಕುಮಾರ್ ನಾಯಕ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಬಡೇಸಾಬ್ ಸ್ಪರ್ಧಾ ಸೇರಿದಂತೆ ಒಟ್ಟು 8 ಮಂದಿ ಕಣದಲ್ಲಿದ್ದರು. ಇನ್ನು 2018 ರಲ್ಲಿ ಬಸಣ್ಣ ಗೌಡ ದದ್ದಲ್ ಅವರು ಕಾಂಗ್ರೆಸ್‌ನಿಂದ 1,59,875 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ತಿಪ್ಪರಾಜು ಹವಾಲ್ದಾರ್ (Tipparaju Havaldar)-74893
ಕಾಂಗ್ರೆಸ್‌-ಬಸನಗೌಡ ದದ್ದಲ್ (Basanagouda Daddal)-88694
ಜೆಡಿಎಸ್-ನರಸಿಂಹ ನಾಯಕ್ (Narasimha Nayak)-4090

ಪುರುಷ ಮತದಾರರು-111,969
ಮಹಿಳಾ ಮತದಾರರು-116,207
ಇತರೆ-65
ಒಟ್ಟು-228,241

ರಾಯಚೂರು ಗ್ರಾಮೀಣ ಜಾತಿ ಲೆಕ್ಕಾಚಾರ
ಎಸ್ಸಿ 40,000
ಎಸ್ಟಿ 40,000
ಕುರುಬ    32,000
ಗಂಗಾಮತಸ್ಥರು    25,000
ಲಿಂಗಾಯತರು    25,000
ಅಲ್ಪ ಸಂಖ್ಯಾತರು    18,000

ರಾಯಚೂರು ನಗರ ಕ್ಷೇತ್ರ (Raichuru City Assembly Constituency): ಬಿಜೆಪಿಯ ಡಾ.ಶಿವರಾಜ್ ಪಾಟೀಲ್ ಗೆಲುವು
ಸಾಮಾನ್ಯ ವರ್ಗಕ್ಕೆ ಮೀಸಲಿರುವ ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ 66754 ಮತಗಳನ್ನು ಗಳಿಸಿ ಹ್ಯಾಟ್ರಿಕ್ ಜಯಭೇರಿ ಸಾಧಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೈಯದ್ ಯಾಸೀನ್ ಸತತ ಸೋಲು ಕಂಡಿದ್ದರಿಂದ ಈ ಬಾರಿ ಹೊಸಮುಖಕ್ಕೆ ಪಕ್ಷ ಅವಕಾಶ ನೀಡಿದ್ದರು. ಜೆಡಿಎಸ್‌ನಿಂದ ನಗರಸಭೆ ಮಾಜಿ ಅಧ್ಯಕ್ಷ ಇ.ವಿನಯ್ ಕುಮಾರ್ ಕಣಕ್ಕಿಳಿದಿದ್ದರು. ಇನ್ನು 2018 ರಲ್ಲಿಶಿವರಾಜ್ ಪಾಟೀಲ್ ಅವರು ಬಿಜೆಪಿಯಿಂದ 1,23,305 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಡಾ.ಶಿವರಾಜ್ ಪಾಟೀಲ್ (Dr Shivaraj Patil)-66754
ಕಾಂಗ್ರೆಸ್‌-ಮಹಮದ್ ಶಾಲಂ (Mohammed Shalm)-63616
ಜೆಡಿಎಸ್-ವಿನಯಕುಮಾರ್ ಇ (Vinaykumar  E)-2562

ಪುರುಷ ಮತದಾರರು-109,996
ಮಹಿಳಾ ಮತದಾರರು- 109,156
ಇತರೆ-96
ಒಟ್ಟು-2,38,620

ರಾಯಚೂರು ಜಾತಿ ಲೆಕ್ಕಾಚಾರ
ಮುಸ್ಲಿಂ    90,000
ದಲಿತರು    45,000
ಲಿಂಗಾಯತ    20,000
ಮುನ್ನೂರು ಕಾಪು    18,000
ಆರ್ಯ ವೈಶ್ಯರು    12,000
ಬ್ರಾಹ್ಮಣ    8,000
ಕಬ್ಬಲಿಗ    8,000
ಯಾದವ    6,000
ಕುರುಬ    5,000
ಇತರೆ    12,000

ಮಾನ್ವಿ ಕ್ಷೇತ್ರ (Manvi Assembly Constituency): ಕಾಂಗ್ರೆಸ್‌ನ ಹಂಪಯ್ಯ ನಾಯ್ಕ್ ಗೆಲುವು
ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಂಪಯ್ಯ ನಾಯ್ಕ್ 66922 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಮಾನ್ವಿ ಕ್ಷೇತ್ರಕ್ಕೆ ನಡೆದಿರುವ 14 ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿವರೆಗೂ ಬಿಜೆಪಿ ಗೆದ್ದಿರುವ ಇತಿಹಾಸವೇ ಇಲ್ಲ. ಈ ಬಾರಿ ಕಾಂಗ್ರೆಸ್ ಮಾಜಿ ಸಂಸದ, ಡಿಸಿಸಿ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಖಾತೆ ತೆರೆಯುವ ಯೋಜನೆ ಹಾಕಿಕೊಂಡಿತ್ತು. ಹಾಲಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಸಹ ಗಟ್ಟಿ ಪೈಪೋಟಿ ನೀಡಿದ್ದರು. ಇನ್ನು 2018 ರಲ್ಲಿ ರಾಜವೆಂಕಟಪ್ಪ ನಾಯಕ್ ಅವರು ಜೆಡಿಎಸ್‌ನಿಂಂದ 1,52,183 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಬಿ.ವಿ.ನಾಯಕ್ (BV Nayak)-59203
ಕಾಂಗ್ರೆಸ್‌-ಹಂಪಯ್ಯ ನಾಯ್ಕ್ (Hampayya Naik)-66922    
ಜೆಡಿಎಸ್-ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak)-25990

ಪುರುಷ ಮತದಾರರು-116,819
ಮಹಿಳಾ ಮತದಾರರು-121,729
ಇತರೆ-72
ಒಟ್ಟು-238,620

ಮಾನ್ವಿ ಜಾತಿ ಲೆಕ್ಕಾಚಾರ
ಎಸ್ಟಿ 70,000
ಎಸ್ಸಿ 40,000
ಲಿಂಗಾಯತ    40,000
ಕುರುಬ    25,000
ಆಂಧ್ರ ರೆಡ್ಡಿಗಳು    12,000
ಮುಸ್ಲಿಂ    30,000

ದೇವದುರ್ಗ ಕ್ಷೇತ್ರ (Devadurga Assembly Constituency): ಜೆಡಿಎಸ್ನ ಕರೆಮ್ಮ ನಾಯಕ್ ಗೆಲುವು
ಮಾಜಿ ಸಚಿವ, ನಾಲ್ಕು ಬಾರಿ ಶಾಸಕರಾಗಿರುವ ಬಿಜೆಪಿಯ ಕೆ.ಶಿವನಗೌಡ ನಾಯಕ ವಿರುದ್ಧ 99544 ಮತಳನ್ನು ಗಳಿಸಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಗೆದಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಕ್ಷೇತ್ರ 15 ವರ್ಷಗಳಲ್ಲಿ 2 ಸಾರ್ವತ್ರಿಕ ಚುನಾವಣೆ ಹಾಗೂ 2 ಉಪ ಚುನಾವಣೆಗಳನ್ನು ಕಂಡಿದೆ. ಕಾಂಗ್ರೆಸ್‌ನಿಂದ ಶ್ರೀದೇವಿ ನಾಯಕ ಹಾಗೂ ಜೆಡಿಎಸ್‌ನಿಂದ ಕರೆಮ್ಮ ಜಿ.ನಾಯಕ ಹಾಗೂ ಪಕ್ಷೇತರರಾಗಿ ರೂಪಾ ಎಸ್.ನಾಯಕ ಸ್ಪರ್ಧಿಸಿದ್ದರು. ಇನ್ನು 2018 ರಲ್ಲಿ ಶಿವನಗೌಡ ನಾಯಕ್ ಅವರು ಬಿಜೆಪಿಯಿಂದ 1,55,437 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಕೆ.ಶಿವನಗೌಡ ನಾಯಕ್ (K Shivanagouda Nayak)-65288
ಕಾಂಗ್ರೆಸ್‌-ಶ್ರೀದೇವಿ ಆರ್.ನಾಯಕ್ (Sfridevei R Nayak)-3909
ಜೆಡಿಎಸ್-ಕರೆಮ್ಮ ನಾಯಕ್ (Karemma Nayak)-99544

ಪುರುಷ ಮತದಾರರು-1,10,066
ಮಹಿಳಾ ಮತದಾರರು-1,13,378
ಇತರೆ-28
ಒಟ್ಟು-223,472

ದೇವದುರ್ಗ ಜಾತಿ ಲೆಕ್ಕಾಚಾರ
ಎಸ್ಟಿ 55,000
ಎಸ್ಸಿ 40,000
ಮುಸ್ಲಿಂ    25,000
ಲಂಬಾಣಿ    20,000
ಕುರುಬ    20,000

ಲಿಂಗಸುಗೂರು ಕ್ಷೇತ್ರ (Lingasugur Assembly Constituency): ಬಿಜೆಪಿಯ ಮಾನಪ್ಪ ಡಿ.ವಜ್ಜಲ್ ಗೆಲುವು
ಎಸ್ಸಿ ಮೀಸಲಿನ ಲಿಂಗಸುಗೂರಿನಲ್ಲಿ ಹಾಲಿ ಶಾಸಕ ಡಿ.ಎಸ್.ಹುಲಗೇರಿ, ಜೆಡಿಎಸ್‌ನ ಸಿದ್ದು ಬಂಡಿ ಹಾಗೂ ಬಿಜೆಪಿಯ ಮಾನಪ್ಪ ವಜ್ಜಲ್ ನಡುವೆ ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಮಾನಪ್ಪ ಡಿ.ವಜ್ಜಲ್ 58769 ಮತಗಳನ್ನು ಗಳಿಸಿ ಗೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಎರಡು ಸಲ ಶಾಸಕರಾಗಿರುವ ಮಾನಪ್ಪ ವಜ್ಜಲ್ 3ನೇ ಬಾರಿ ಗೆದಿದ್ದಾರೆ. ಒಟ್ಟಾರೆ 7 ಅಭ್ಯರ್ಥಿಗಳು ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕಣಕ್ಕಿಳಿದಿದ್ದರು. 2018 ರಲ್ಲಿ ದುರ್ಗಪ್ಪ ಹೂಲಗೇರಿ ಅವರು ಕಾಂಗ್ರೆಸ್‌ನಿಂದ 1,62,075 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಮಾನಪ್ಪ ಡಿ.ವಜ್ಜಲ್ (Manappa D Vajjal)-58769
ಕಾಂಗ್ರೆಸ್‌-ದುಗ್ಗಪ್ಪ ಎಸ್.ಹುಲಗೇರಿ (Duggappa S Hulageri)-55960
ಜೆಡಿಎಸ್- ಸಿದ್ದು ಬಂಡಿ (Siddu Bandi)-41322

ಪುರುಷ ಮತದಾರರು-1,18,857
ಮಹಿಳಾ ಮತದಾರರು-1,19,030
ಇತರೆ-10
ಒಟ್ಟು-2,37,897

ಲಿಂಗಸಗೂರು ಜಾತಿ ಲೆಕ್ಕಾಚಾರ
ಎಸ್ಸಿ 60,000
ಎಸ್ಟಿ 40,000
ಲಿಂಗಾಯತ    30,000
ಕುರುಬ    20,000
ಮುಸ್ಲಿಂ    20,000
ಲಂಬಾಣಿ    15,000

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಸಿಂಧನೂರು ಕ್ಷೇತ್ರ (Sindanuru Assembly Constituency): ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಗೆಲುವು
ನಾಲ್ಕು ಸಲ ಶಾಸಕರಾದ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಮತ್ತೊಮ್ಮೆ 73645 ಮತಗಳನ್ನು ಗಳಿಸಿ ಜಯಭೇರಿ ಸಾಧಿಸಿದ್ದಾರೆ. ಎರಡು ಬಾರಿ ಶಾಸಕರಾಗಿ, ಸಚಿವರಾಗಿದ್ದ ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಅವರ ವಿರುದ್ಧ ಬಿಜೆಪಿಯಿಂದ ಕೆ.ಕರಿಯಪ್ಪ ಅವರು ಸ್ಪರ್ಧಿಸಿದ್ದರು. ಇನ್ನು 2018 ರಲ್ಲಿ ವೆಂಕಟರಾವ್ ನಾಡಗೌಡ ಅವರು ಜೆಡಿಎಸ್‌ನಿಂದ 1,62,120 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಕೆ.ಕರಿಯಪ್ಪ (K Kariyappa)-51703
ಕಾಂಗ್ರೆಸ್‌-ಹಂಪನಗೌಡ ಬಾದರ್ಲಿ (Hampanagouda Badarli)-73645
ಜೆಡಿಎಸ್-ವೆಂಕಟರಾವ್ ನಾಡಗೌಡ (Venkatarao Nadagouda)-43461

ಪುರುಷ ಮತದಾರರು-1,12,909
ಮಹಿಳಾ ಮತದಾರರು-1,15,755
ಇತರೆ-40
ಒಟ್ಟು-2,28,704

ಸಿಂಧನೂರು ಜಾತಿ ಲೆಕ್ಕಾಚಾರ
ಲಿಂಗಾಯತ    45,000
ಕುರುಬ    37,000
ಎಸ್ಸಿ 25,000
ಎಸ್ಟಿ 22,000
ಮುಸ್ಲಿಂ    30,000
ಬಾಂಗ್ಲಾವಲಸಿಗರು    15,000
ಆಂಧ್ರ ವಲಸಿಗರು    12,000

ಮಸ್ಕಿ ಕ್ಷೇತ್ರ (Maski Assembly Constituency): ಕಾಂಗ್ರೆಸ್‌ನ ಬಸನಗೌಡ ತುರುವಿಹಾಳ್ ಗೆಲುವು
ಎರಡೂವರೆ ವರ್ಷಗಳ ಹಿಂದೆ ಉಪಚುನಾವಣೆ ಎದುರಿಸಿದ್ದ ಪರಿಶಿಷ್ಟ ಪಂಗಡ ಮೀಸಲಿನ ಕ್ಷೇತ್ರವಾದ ಮಸ್ಕಿಯಲ್ಲಿ ಕಾಂಗ್ರೆಸ್‌ನ ಆರ್.ಬಸನಗೌಡ ತುರ್ವಿಹಾಳ 79566 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದ ಪ್ರತಾಪಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿ ಉಪಚುನಾವಣೆಯಲ್ಲಿ ಅದೇ ಆರ್.ಬಸನಗೌಡ ತುರ್ವಿಹಾಳ ವಿರುದ್ಧ ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮೊದಲ ಸಲ ಶಾಸಕರಾಗಿ ಆಯ್ಕೆಯಾಗಿದ್ದ ಆರ್.ಬಸನಗೌಡ ತುರ್ವಿಹಾಳ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದರು. ಇನ್ನು 2018 ರಲ್ಲಿ ಪ್ರತಾಪ್‌ಗೌಡ ಪಾಟೀಲ್ ಅವರು ಕಾಂಗ್ರೆಸ್‌ನಿಂದ 1,34,667 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.

ಅಭ್ಯರ್ಥಿಗಳು-ಪಡೆದ ಮತಗಳು
ಬಿಜೆಪಿ-ಪ್ರತಾಪ್ ಗೌಡ ಪಾಟೀಲ್ (Pratap Gowda Patil)-66513
ಕಾಂಗ್ರೆಸ್‌-ಬಸನಗೌಡ ತುರುವಿಹಾಳ್ (Basanagouda Turuvihal)-79566
ಜೆಡಿಎಸ್-ರಾಘವೇಂದ್ರ ನಾಯಕ್ (Raghavendra Nayak)-1906

ಪುರುಷ ಮತದಾರರು-96,659
ಮಹಿಳಾ ಮತದಾರರು-98,829
ಇತರೆ-16
ಒಟ್ಟು-195,504

ಮಸ್ಕಿ ಜಾತಿ ಲೆಕ್ಕಾಚಾರ
ಎಸ್ಟಿ 50,000
ಎಸ್ಸಿ 35,000
ಲಿಂಗಾಯತರು    30,000
ಕುರುಬರು    25,000
ಮುಸ್ಲಿಂ    22,000

Follow Us:
Download App:
  • android
  • ios