ಟಿಕೆಟ್‌ಗಾಗಿ ಕಡಿಮೆ ವಯಸ್ಸು ನಮೂದಿಸಿದ್ರಾ ಕೆ ಜಿ ಬೋಪಯ್ಯ ? ಚುನಾವಣಾ ಆಯೋಗಕ್ಕೆ ದೂರು

ರಾಜ್ಯ ವಿಧಾನಸಭಾ ಚುನಾವಣೆ‌ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟಗಳು ಶುರುವಾಗಿವೆ. ಇದೀಗ ವಿರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಕೆ.ಜಿ ಬೋಪಯ್ಯ(KG Bopaiah) ಮತ್ತೆ ಕಣಕಿಳಿಯೋದು ಬಹುತೇಕಾ ಫಿಕ್ಸ್  ಆಗುತ್ತಿದಂತೆ ಶಾಸಕರ ವಿರುದ್ದ ಆರೋಪಗಳು ಕೇಳಿ ಬರುತ್ತಿದೆ. 

Karnataka election 2023 KG Bhopaiah age issue: Complaint submitted to Election Commission

ವರದಿ : ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮಾ.10): ರಾಜ್ಯ ವಿಧಾನಸಭಾ ಚುನಾವಣೆ‌ ಸಮೀಪಿಸುತ್ತಿದ್ದಂತೆ ರಾಜಕೀಯ ಕೆಸರೆರಚಾಟಗಳು ಶುರುವಾಗಿವೆ. ಇದೀಗ ವಿರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಕೆ.ಜಿ ಬೋಪಯ್ಯ(KG Bopaiah) ಮತ್ತೆ ಕಣಕಿಳಿಯೋದು ಬಹುತೇಕಾ ಫಿಕ್ಸ್  ಆಗುತ್ತಿದಂತೆ ಶಾಸಕರ ವಿರುದ್ದ ಆರೋಪಗಳು ಕೇಳಿ ಬರುತ್ತಿದೆ. 

ಚುನಾವಣಾ ಆಯೋಗ(karnataka election commission)ಕ್ಕೆ ವಯಸಿನ ವಿಚಾರದಲ್ಲಿ ಸುಳ್ಳು ದಾಖಲೆ(Fake documents) ಸಲ್ಲಿಸಿದ್ದಾರೆ ಎಂದು ವಿರಾಜಪೇಟೆ ಪೊಲೀಸ್ ಠಾಣೆ(Virajpete police station)ಯಲ್ಲಿ ದೂರು ದಾಖಲಾಗಿದೆ. 

Kodagu: ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಹಾಗಾದ್ರೆ ಏನಿದು ಏಜ್ ಫೈಟ್?

ಹಾಲಿ ವಿರಾಜಪೇಟೆ ವಿಧಾನ ಸಭಾ(Virajapete assembly constituency) ಸದಸ್ಯರಾದ ಕೆ. ಜಿ. ಬೋಪಯ್ಯನವರು  ತಮ್ಮ ವಯಸ್ಸಿನ ಕುರಿತು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎಂದು ಚೇರಳ ಶ್ರೀಮಂಗಲದ ನಿವಾಸಿ ಪಿ.ಬಿ ತಿಮ್ಮಯ್ಯ ಎಂಬುವರು  ವಿರಾಜಪೇಟೆ ನಗರ ಪೊಲೀಸ್  ಠಾಣೆಯಲ್ಲಿ ಬೋಪಯ್ಯ ಅವರ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ವಿರಾಜಪೇಟೆ ಕ್ಷೇತ್ರದ  ವಿಧಾನ ಸಭಾ ಸದಸ್ಯರಾದ ಕೆ. ಜಿ. ಬೋಪಯ್ಯ ಎಂಬವರು 26.10.1979ರಲ್ಲಿ ಬಾರ್ ಕೌನ್ಸಿಲ್ ಅಲ್ಲಿ ವಕೀಲರಾಗಿದ್ದು ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು  1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ. ಆದರೆ ಬೋಪಯ್ಯನವರು 2004 ನೇ ಸಾಲಿನ  ಚುನಾವಣೆ ಸಮಯದಲ್ಲಿ  ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ  53 ವರ್ಷ ಆಗಿತ್ತು. ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು 49 ವರ್ಷ ಎಂದು ಸುಳ್ಳು ಮಾಹಿತಿ  ನೀಡಿದ್ದಾರೆ. ಅಲ್ಲದೆ 2013 ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು ಜನ್ಮ ದಿನಾಂಕದ ಅನುಗುಣವಾಗಿ  61 ವರ್ಷ ಆಗಿದ್ದು, ಅವರು ಚುನಾವಣೆ ಆಯೋಗಕ್ಕೆ ಅವರ ವಯಸ್ಸನ್ನು 58 ವರ್ಷ ಎಂದು ಸುಳ್ಳು ಮಾಹಿತಿ  ನೀಡಿದ್ದಾರೆ ಎಂದು ದೂರು ದಾರ ಪಿ.ಬಿ ತಿಮ್ಮಯ್ಯ ಆರೋಪಿಸಿದ್ದಾರೆ. 

ಅದು ಅಲ್ಲದೆ 2018 ರ ನಲ್ಲಿ ನಡೆದ ಚುನಾವಣೆಯಲ್ಲಿ  ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ  67 ಆಗಿದ್ದು, ಬೋಪಯ್ಯನವರು ಚುನಾವಣೆ ಆಯೋಗಕ್ಕೆ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ದೂರುದಾರರಾದ ಪಿ. ಬಿ. ತಿಮ್ಮಯ್ಯ ತಿಳಿಸಿದ್ದಾರೆ. ಒಂದು ಜವಬ್ದಾರಿಯುತ ಶಾಸಕರಾಗಿರೊ ಕೆ‌.ಜಿ ಬೋಪಯ್ಯ ಹೀಗೆ ಮಾಡೋದು ಸರಿಯಲ್ಲ ಇವರ ವಿರುದ್ಧ ಮುಂದೆ ಲೋಕಾಯುಕ್ತ ನ್ಯಾಯಾಲಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡೋದಾಗಿ ತಿಮ್ಮಯ್ಯ ತಿಳಿಸಿದ್ದಾರೆ. 

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಜಿ ಬೋಪಯ್ಯ ಅವರು ನನ್ನ ಮೇಲೆ ಬಂದಿರೊ ಆರೋಪ ಶುದ್ದ ಸುಳ್ಳು. ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಪಿ. ಬಿ. ತಿಮ್ಮಯ್ಯ ನೀಡಿರುವ ದೂರು ಆಧಾರದಲ್ಲಿ ದಾಖಲಾಗಿರುವ ದೂರಿನ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ ನನ್ನ ತಂದೆ ಹೆಬ್ಬೆಟ್ಟು, ಹೀಗಾಗಿ ನನ್ನ ತಂದೆ ಕೊಟ್ಟಿರುವ ದಿನಾಂಕವನ್ನೇ ನಾನು ಫಾಲೋ ಮಾಡುತ್ತಾ ಬಂದಿದ್ದೇನೆ. ಇದು ಪ್ರತೀ ಬಾರಿ ಚುನಾವಣೆ ಬಂದಾಗ ನನ್ನ ವಿರುದ್ಧ ಇಂತಹ ಆರೋಪ ಮಾಡುವ ಗ್ಯಾಂಗ್ ಒಂದು ಮಡಿಕೇರಿಯಲ್ಲಿ ಇದೆ.  ಅದು ಹಾಗೆಯೆ ಮಾಡುತ್ತಾ ಬರುತ್ತಿದೆ. ಈ ವಿಚಾರದ ಹಿಂದೆ ಸೋ ಕಾಲ್ಡ್ ಪರಿಸರವಾದಿಗಳು ಇದ್ದಾರೆ. ಅವರೆ ಈ ರೀತಿಯ ಹುನ್ನಾರಗಳನ್ನ ಮಾಡುತ್ತಿರುವುದು. ಅವರ ಈ ಸಣ್ಣತನಕ್ಕೆ ನಾನು ಸಣ್ಣತನ ಮಾಡಲ್ಲ. ನನ್ನ ಆಧಾರ್ ಕಾರ್ಡು,ಮತದಾರರ ಗುರುತ್ತಿನ ಚೀಟಿ, ಪ್ಯಾನ್ ಕಾರ್ಡ್ ಎಲ್ಲಾ ದಾಖಲೆಗಳಲ್ಲೂ ಒಂದೇ ಡೇಟ್ ಇದೆ. ನನಗೆ 73 ವರ್ಷವೋ 83 ಮತ್ತೊಂದೊ ಅದು ಪಕ್ಷದ ತೀರ್ಮಾನ. ಇವರ ಈ ಮೊಂಡು ಬೆದರಿಕೆಗೆ ಹೆದರೋದಿಲ್ಲ ಎಂದು ದೂರುದಾರಿಗೆ ಕೆ.ಜಿ ಬೋಪಯ್ಯ ತಿರುಗೇಟು ನೀಡಿದ್ದಾರೆ. 

Kodagu: ಹದಗೆಟ್ಟ ಶಾಸಕ ಕೆ.ಜಿ. ಬೋಪಯ್ಯ ಊರಿನ ರಸ್ತೆ: 20 ವರ್ಷದಿಂದ ಡಾಂಬರೀಕರಣವೇ ಕಂಡಿಲ್ಲ

ಒಟ್ಟಿನಲ್ಲಿ ಚುನಾವಣೆ ಸಮೀಪದಲ್ಲಿ ಈ ವಿಚಾರ ಮುನ್ನೆಲೆ ಬಂದಿರುವುದು 70 ವರ್ಷಗಳ ನಂತರ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಪ್ರಧಾನಿ ಮೋದಿ(PM Narendra Modi)ಯವರ ಮಾತಿನಂತೆ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್ ತಪ್ಪಬೇಕಾಗಿದೆ ಎನ್ನುವ ಹಿನ್ನೆಲೆಯಲ್ಲಿ ಬೋಪಯ್ಯ ಅವರ ವಯಸ್ಸಿನ ವಿಚಾರ ಈಗ ಮುನ್ನೆಲೆಗೆ ಬಂದಿರುವುದು ಸತ್ಯ.

Latest Videos
Follow Us:
Download App:
  • android
  • ios