ಬಿಜೆಪಿ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯಗಳಿಂದ ಜನತೆ ರೋಸಿ ಹೋಗಿದ್ದಾರೆ: ಬಿ.ಕೆ.ಹರಿಪ್ರಸಾದ್
ಸುಳ್ಳು ಎನ್ನುವುದೇ ಬಿಜೆಪಿಯ ಮನೆ ದೇವರಾಗಿದೆ. ಮಹಾತ್ಮಾ ಗಾಂಧೀಜಿಯವರ ಹಿಂದೂ ಧರ್ಮ ಬೇಕೋ ಅಥವಾ ನಾಥುರಾಮ ಗೋಡ್ಸೆ ಅವರ ಹಿಂದುತ್ವ ಬೇಕೋ ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಭಟ್ಕಳ (ಏ.28): ಸುಳ್ಳು ಎನ್ನುವುದೇ ಬಿಜೆಪಿಯ ಮನೆ ದೇವರಾಗಿದೆ. ಮಹಾತ್ಮಾ ಗಾಂಧೀಜಿಯವರ ಹಿಂದೂ ಧರ್ಮ ಬೇಕೋ ಅಥವಾ ನಾಥುರಾಮ ಗೋಡ್ಸೆ ಅವರ ಹಿಂದುತ್ವ ಬೇಕೋ ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕೆಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಮುರ್ಡೇಶ್ವರದಲ್ಲಿ ಕಾಂಗ್ರೆಸ್ ಬೆಂಬಲಿತ ನಾಮಧಾರಿಗಳ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರದ ದಬ್ಬಾಳಿಕೆ, ದೌರ್ಜನ್ಯಗಳಿಂದ ಜನತೆ ರೋಸಿ ಹೋಗಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ದೇಶದ ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ.
ಸುಳ್ಳು ಹೇಳುವ ವಿಶ್ವಗುರು ನರೇಂದ್ರ ಮೋದಿ 8 ವರ್ಷದ ಅಧಿಕಾರದ ಅವಧಿಯಲ್ಲಿ ಏನೂ ಮಾಡಿಲ್ಲ. ಜಿಎಸ್‌ಟಿಯಿಂದ ದೇಶದ ಜನರು ಹೈರಾಣಾಗಿದ್ದಾರೆ. ಬಡವರು, ರೈತರು, ದೀನ ದಲಿತರು ತತ್ತರಿಸಿ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತನ್ನ ಸ್ನೇಹಿತ ಉದ್ಯಮಿ ಆದಾನಿಗೆ ಮಾತ್ರ ಸಹಾಯ ಮಾಡುತ್ತಿದ್ದು, ದೇಶದ ಜನತೆಯನ್ನು ಮರೆತಿದ್ದಾರೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು ಹೆಚ್ಚಿದ್ದಾರೆ. ಇತ್ತೀಚೆಗಷ್ಟೇ ಭ್ರಷ್ಟಾಚಾರದಡಿಯಲ್ಲಿ ಜೈಲುಪಾಲಾದ ಶಾಸಕ ಮಾಡಾಳು ವಿರೂಪಾಕ್ಷ ಬಿಜೆಪಿಯ ಭ್ರಷ್ಟಾಚಾರದ ಮಾಡೆಲ್ ಆಗಿದ್ದಾರೆ ಎಂದು ಆರೋಪಿಸಿದರು.
ವಿಧಾನಪರಿಷತ್ ಭೋಜೇಗೌಡಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತ: ಆಡಿಯೋ ವೈರಲ್
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಮಾತನಾಡಿ, ಭಟ್ಕಳ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಕಳೆದ 5 ವರ್ಷದಲ್ಲಿ ಅತಿಕ್ರಮಣ ಸಮಸ್ಯೆಗೆ ಸಂಬಂಧಿಸಿದಂತೆ ಒಂದೇ ಒಂದು ಸಭೆ ನಡೆಸಿಲ್ಲ. ಹಕ್ಕುಪತ್ರವನ್ನೂ ಕೊಟ್ಟಿಲ್ಲ. ಭಟ್ಕಳದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯವಾಗಿದೆ. ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ನಿರಂತರ ಅಪಪ್ರಚಾರ ಮಾಡಿ ಸೋಲಿಸಲಾಯಿತು. ಬಿಜೆಪಿಯಿಂದ ನಾನು ಹಿಂದುತ್ವದ ಪಾಠ ಕಲಿಯಬೇಕಿಲ್ಲ. ಹಿಂದುತ್ವ ಏನು ಎನ್ನುವುದು ನನಗೆ ಅರಿವಿದೆ. ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗುತ್ತದೆ. ನಂತರ ಮರೆತು ಹೋಗುತ್ತದೆ ಎಂದರು.
ಹೊನ್ನಾವರ ನಾಮಧಾರಿ ಸಮಾಜದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ರಾಜಕಾರಣದಲ್ಲಿ ಎಲ್ಲ ಸಮಾಜದವರನ್ನೂ ಸಮಾನವಾಗಿ ನೋಡುವ ವ್ಯಕ್ತಿಯಿದ್ದರೆ ಅದು ಮಂಕಾಳ ವೈದ್ಯ ಮಾತ್ರ. ಅವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕಾಗಿದೆ. ಈ ಬಾರಿ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು. ನಾಮಧಾರಿ ಸಮಾಜ ಮಾವಳ್ಳಿಯ ಸುಬ್ರಾಯ ನಾಯ್ಕ ಗುಮ್ಮನಹಕ್ಲ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
‘ಮನ್ ಕಿ ಬಾತ್’ ಗಿನ್ನಿಸ್ ದಾಖಲೆ ಸೇರುವ ಸಾಧ್ಯತೆ: ಸಂಸದ ಬಿ.ವೈ.ರಾಘವೇಂದ್ರ
ವೇದಿಕೆಯಲ್ಲಿ ಕುಪ್ಪ ನಾಯ್ಕ ಮೂಡ್ಕೇರಿ, ನಾಗಪ್ಪ ನಾಯ್ಕ ಬೇಡುಮನೆ, ಗೋಪಾಲ ಮಂಜಪ್ಪ ನಾಯ್ಕ, ವಿಠಲ ಹೊನ್ನಪ್ಪ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಗಣೇಶ ಮಂಜಪ್ಪ ನಾಯ್ಕ, ವಾಸು ಎಂ. ನಾಯ್ಕ, ಐ.ವಿ. ನಾಯ್ಕ, ಪುಷ್ಪಾ ನಾಯ್ಕ, ಸಿಂಧೂ ಭಾಸ್ಕರ ನಾಯ್ಕ, ಎಂ.ಎಂ. ನಾಯ್ಕ ಜಾಲಿ, ವಾಮನ ನಾಯ್ಕ ಮಂಕಿ, ರಾಜು ನಾಯ್ಕ ಕೊಪ್ಪ, ನಾಗಪ್ಪ ನಾಯ್ಕ ಮುಂಡಳ್ಳಿ, ರೇವತಿ ನಾಯ್ಕ ಶಿರಾಲಿ, ಬೇಬಿ ನಾಯ್ಕ ಬೇಂಗ್ರೆ, ಪದ್ಮಾ ಕೇಶವ ನಾಯ್ಕ ಕಾಯ್ಕಿಣಿ, ರಾಘವೇಂದ್ರ ನಾಯ್ಕ, ವೆಂಕಟೇಶ ನಾಗಪ್ಪ ನಾಯ್ಕ, ಮಂಜಪ್ಪ ರಾಮಪ್ಪ ನಾಯ್ಕ, ರಾಮ ಜಟ್ಟಪ್ಪ ನಾಯ್ಕ ಮುಂತಾದವರಿದ್ದರು.