ಯಡಿಯೂರಪ್ಪ ಪತ್ರ ಬರೆ​ದಿ​ದ್ದು ನೀತಿ ಸಂಹಿತೆ ಉಲ್ಲಂಘನೆ: ಆಯನೂರು ಮಂಜುನಾಥ್‌

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಾತಿ ಆಧಾರದ ಮೇಲೆ ಮತ ನೀಡಲು ಪತ್ರ ಬರೆದಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. 
 

Karnataka Election 2023 Ayanur Manjunath Slams On BS Yediyurappa gvd

ಶಿವಮೊಗ್ಗ (ಮೇ.12): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಾತಿ ಆಧಾರದ ಮೇಲೆ ಮತ ನೀಡಲು ಪತ್ರ ಬರೆದಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಒಬ್ಬ ಹೋರಾಟಗಾರನನ್ನು ಪಕ್ಷ ಒಂದು ಜಾತಿಗೆ ಸೀಮಿತಗೊಳಿಸಿರುವುದು ದುರಂತ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ- ಜನಾಂಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಮಾಜಿ ಮುಖ್ಯಮಂತ್ರಿ ಮಾಡಿದ ಈ ಕೆಲಸ ಸರಿಯಲ್ಲ. 

ಬಿ.ಎಸ್‌. ಯಡಿಯೂರಪ್ಪ ಅವರಂಥ ನಾಯಕರನ್ನು ಬಿಜೆಪಿಯವರು ಚುನಾವಣೆಗೋಸ್ಕರ ಜಾತಿಯ ನಾಯಕನನ್ನಾಗಿ ಮಾಡಿದ್ದು ವಿಷಾದನೀಯ ಎಂದರು. ಯಡಿಯೂರಪ್ಪ ಅವರು ಹೋರಾಟಗಾರ, ಜನನಾಯಕರು. ಅಂತಹ ವ್ಯಕ್ತಿಯನ್ನು ಚುನಾವಣೆಗಾಗಿ ಬಿಜೆಪಿಯವರು ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಜಾತಿಯ ನಾಯಕನನ್ನಾಗಿ ಮಾಡಿದ್ದಾರೆ. ಅವರ ಕೈಯಲ್ಲಿ ಪತ್ರ ಬರೆಸಿ ಲಿಂಗಾಯಿತ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಸಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Karnataka Election 2023: ಮತ​ದಾ​ನ​ದಲ್ಲಿ ರಾಮ​ನ​ಗರಕ್ಕೆ ರಾಜ್ಯ​ದ​ಲ್ಲಿಯೇ 2ನೇ ಸ್ಥಾನ

ಜೆಡಿಎಸ್‌ ಹೊರತಾದ ಸರ್ಕಾರ ಸಾಧ್ಯವಿಲ್ಲ: ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಇದೆ ಎಂದು ಸುದ್ದಿ ಮಾಧ್ಯಮಗಳು ಬಿತ್ತರಿಸುತ್ತಿವೆ. ಆದರೆ ಜೆಡಿಎಸ್‌ 60 ಸ್ಥಾನ ಬರಲಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಯಾವ ಪಕ್ಷಕ್ಕೂ ಸ್ಪಷ್ಟಬಹುಮತ ದೊರಕುವ ಸಾಧ್ಯತೆ ಕಡಿಮೆ ಇದೆ. ಅತಂತ್ರ ವಿಧಾನಸಭೆ ನಿಶ್ಚಿತ ಎಂಬ ವಾತಾವರಣ ಇದೆ. ಜೆಡಿಎಸ್‌ ಬೆಂಬಲವಿಲ್ಲದೆ ಯಾವ ಪಕ್ಷವೂ ಅಧಿಕಾರ ಹಿಡಿಯದು ಎಂದು ಹೇಳಿದರು.  ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಮಾತನಾಡಿ, ಶಾಂತಿ ಮತ್ತು ಮನುಷ್ಯತ್ವ ಕಾಪಾಡುವ ಭರವಸೆಯನ್ನು ಮತದಾರರಿಗೆ ನೀಡುವುದರ ಮೂಲಕ ಜೆಡಿಎಸ್‌ ಮತ ಯಾಚನೆ ಮಾಡಿದರೆ, ಕಾಂಗ್ರೆಸ್‌ ಹಾಗೂ ಬಿಜೆಪಿ ಹಣ, ಜಾತಿ, ಹಿಂದುತ್ವದ ಮೇಲೆ ಚುನಾವಣೆ ನಡೆಸಿವೆ. ಆದರೆ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 

ಜೆಡಿಎಸ್‌ಗೆ ಜನರಿಂದ ಉತ್ತಮ ಬೆಂಬಲ ದೊರಕಿದೆ ಎಂದರು. ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಮಾತನಾಡಿ, ಶಿವಮೊಗ್ಗ ಜನತೆಯಿಂದ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ದೊರಕಿದೆ. ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಆಯನೂರು ಮಂಜುನಾಥ್‌ ಗೆಲುವು ಪಡೆಯಲಿದ್ದಾರೆ. ಜತೆಗೆ ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲೂ ಜೆಡಿಎಸ್‌ ಗೆಲುವು ಸಾಧಿಸಲಿದೆ. ಸೊರಬ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಉತ್ತಮ ಸಾದನೆಯನ್ನು ತೋರಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಐಡಿಯಲ್‌ ಗೋಪಿ, ವೈ.ಎಚ್‌. ನಾಗರಾಜ್‌, ದೀಪಕ್‌ ಸಿಂಗ್‌, ರಘು ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್‌ ಕುಟುಂಬವೇ ಬಂದರೂ ಗೆಲುವು ನನ್ನದೇ: ಪ್ರೀತಂ ಗೌಡ

‘ಶಾಂತಿ ಮರು​ಸ್ಥಾ​ಪನೆ ಆಗ​ಬೇ​ಕಿ​ದೆ​’: ಶಿವಮೊಗ್ಗದಲ್ಲಿ ಶಾಂತಿಯನ್ನು ಮರುಸ್ಥಾಪನೆ ಮಾಡಬೇಕಾದ ಜವಾಬ್ದಾರಿ ಇದೆ. ಜನರು ರಾಜಕೀಯ ಪಕ್ಷಗಳ ನಡೆಗೆ ಬೇಸರಗೊಂಡಿದ್ದಾರೆ. ಕಾಂಗ್ರೆಸ್‌ ಜಾತಿ, ಒಳಜಾತಿಯ ಆಧಾರದ ಮೇಲೆ ಮತಯಾಚಿಸಿದರೆ, ಬಿಜೆಪಿ ಧರ್ಮದ ಆಧಾರದಲ್ಲಿ ಮತ ಕೇಳಿದೆ. ಮತಗಟ್ಟೆಯಲ್ಲಿ ಭಜರಂಗಿಯ ಚಿತ್ರ ಇಟ್ಟು ಮತ ಕೇಳಿರುವ ದೃಶ್ಯಗಳು ಲಭ್ಯವಾಗಿದೆ. ಅಭಿವೃದ್ಧಿ ಮೇಲೆ ಮತ ಕೇಳಲಿಲ್ಲ. ನಾನು ಅಭಿವೃದ್ಧಿ ಬಗ್ಗೆ ಮತ ಕೇಳಿದ್ದೇನೆ. ಕಡಿಮೆ ಅವಧಿಯಲ್ಲಿ ಎಲ್ಲೆಡೆ ತಲುಪಿದ್ದೇವೆ. ಎಲ್ಲ ಜಾತಿ -ಜನಾಂಗದವರು ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಆಯ​ನೂರು ಮಂಜು​ನಾಥ್‌ ಹೇಳಿ​ದ​ರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

Latest Videos
Follow Us:
Download App:
  • android
  • ios