ಆನೇಕಲ್‌ನಲ್ಲಿ ಪಂಚರತ್ನ ಯಾತ್ರೆ: ಹೆಚ್‌ಡಿಕೆ ಸ್ವಾಗತಕ್ಕೆ ಸಿದ್ಧಗೊಂಡ 40 ಅಡಿ ಎತ್ತರದ ಬೃಹತ್ ಹಾರ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತದ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸಿ ಇದೀಗ  ಆನೇಕಲ್ ತಾಲೂಕಿಗೆ ಆಗಮಿಸಲಿರುವ ಹಿನ್ನೆಲೆ ಎಚ್‌ಡಿಕೆ ಸ್ವಾಗತಕ್ಕೆ ಸಿದ್ಧವಾಗಿ ಬೃಹತ್ ರಾಗಿಯ ಹಾರ. ಎರಡು ಕ್ರೇನುಗಳ ಸಹಾಯದಿಂದ ಹಾಕಲಾಗುತ್ತಿದೆ.

karnataka electiion pancharatna rathayatre Garland of huge millet ready at anekal rav

ಆನೇಕಲ್ (ಮಾ.12) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತದ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸಿ ಇದೀಗ  ಆನೇಕಲ್ ತಾಲೂಕಿಗೆ ಆಗಮಿಸಲಿರುವ ಹಿನ್ನೆಲೆ ಎಚ್‌ಡಿಕೆ(HD Kumaraswamy) ಸ್ವಾಗತಕ್ಕೆ ಸಿದ್ಧವಾಗಿ ಬೃಹತ್ ರಾಗಿಯ ಹಾರ.

ರಾಗಿಯ ಕಣಜ ಆನೇಕಲ್‌ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ(Pancharatna rathayatre)ಸಮಾವೇಶ ನಡೆಯುವ ಹಿನ್ನೆಲೆ ಪ್ರೀತಿಯ ಕುಮಾರಣ್ಣ, ರೈತರ ಬಂಧುಗೆ ಚಂದಾಪುರದಲ್ಲಿ  ರಾಗಿಯ ಬೃಹತ್ ಹಾರ ಸಿದ್ಧಪಡಿಸಲಾಗಿದೆ. 

ಜೆಡಿಎಸ್‌ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಚ್‌ಡಿ ಕುಮಾರಸ್ವಾಮಿಯವರ ಬಲ ಎಂದರೆ ಕಾರ್ಯಕರ್ತರು. ಎಚ್‌ಡಿ ಕುಮಾರಸ್ವಾಮಿಗೆ ಭವ್ಯ ಸ್ವಾಗತ ಕೋರಲು 40ಕ್ಕೂ ಹೆಚ್ಚು ಅಡಿ ಎತ್ತರದ ರಾಗಿಯ ಬೃಹತ್ ಹಾರ ಸಿದ್ಧಪಡಿಸಿದ್ದಾರೆ.  ಪ್ಯಾಕೇಟ್ ಗಳಲ್ಲಿ ಜೋಡಣೆ ಮಾಡಿರುವ ರಾಗಿ ಹಾರ ಹಾಕಲು ಎರಡು ಕ್ರೈನ್ ಗಳೇ ಬೇಕು. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಮುಖಂಡರು ಹಾಗೂ ಕಾರ್ಯಕರ್ತರು. ಕಾರ್ಯಕ್ರಮ ಯಶಸ್ವಿಗೊಳಿಸಲು ಸಜ್ಜಾಗಿ ನಿಂತಿದ್ದಾರೆ.

HD Kumaraswamy: ಇಂದು ತೀರ್ಥಹಳ್ಳಿಗೆ ಎಚ್‌ಡಿಕೆ: ಹಸಿ ಅಡಕೆ ಬೃಹತ್‌ ಹಾರ, ಟೋಪಿ ರೆಡಿ!

Latest Videos
Follow Us:
Download App:
  • android
  • ios