ಬಳ್ಳಾರಿಯಲ್ಲಿ ಲೂಟಿ ಆಗ್ತಿತ್ತು, ನಾವು ಪಾದಯಾತ್ರೆ ಮಾಡಿದ ಬಳಿಕ ಈಗ ಎಲ್ಲವೂ ಶಾಂತಿ ಇದೆ: ಡಿಕೆ ಶಿವಕುಮಾರ
ಬಳ್ಳಾರಿಯಲ್ಲಿ ಹಿಂದೆ ಲೂಟಿ ಆಗುತ್ತಿತ್ತು. ಅದಕ್ಕಾಗಿ ನಾವು ಪಾದಯಾತ್ರೆ ಮಾಡಿದ್ದೆವು. ಈಗ ಎಲ್ಲವೂ ಶಾಂತಿ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಕೊಪ್ಪಳ (ಅ.14): ಬಳ್ಳಾರಿಯಲ್ಲಿ ಹಿಂದೆ ಲೂಟಿ ಆಗುತ್ತಿತ್ತು. ಅದಕ್ಕಾಗಿ ನಾವು ಪಾದಯಾತ್ರೆ ಮಾಡಿದ್ದೆವು. ಈಗ ಎಲ್ಲವೂ ಶಾಂತಿ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಇಂದು ಸಂಡೂರುನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು, ಸಂಡೂರು ಕ್ಷೇತ್ರದ ಅಭಿವೃದ್ಧಿಗೆ ತುಕಾರಾಂ 1200 ಕೋಟಿ ತಂದಿದ್ದಾರೆ. ನನ್ನ ಕ್ಷೇತ್ರ ಕನಕಪುರಕ್ಕೇ 200 ಕೋಟಿಯೂ ಸಿಕ್ಕಿಲ್ಲ. ಆದರೆ ತುಕಾರಾಂ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿವಹಿಸಿ ಅಭವೃದ್ಧಿ ಮಾಡುತ್ತಿದ್ದಾರೆ.
ಇಂದು ಸಮಾವೇಶದಲ್ಲಿ ನೆರೆದಿರುವ ನಿಮ್ಮನ್ನೆಲ್ಲ ನೋಡಿ ಕಣ್ಣಿಗೆ ಆನಂದವಾಗ್ತಿದೆ. ಈ ಚುನಾವಣೆಯಲ್ಲಿ ತುಕಾರಾಂ ಅವರನ್ನ ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಒಂದು ಸಂದೇಶ ನೀಡಿದ್ದೀರಿ. ತುಕಾರಾಂ ಅವರನ್ನ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ನನಗೆ ಆ ಮೂಲಕ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದೀರಿ. ಸಂಡೂರು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಅದಕ್ಕೆ ಸಿದ್ದರಾಮಯ್ಯ 1200 ಕೋಟಿ ಅನುದಾನವನ್ನು ಸಂಡೂರು ಗೆ ಕೊಟ್ಟಿದ್ದಾರೆ. ನಾವು ಉಪಚುನಾವಣೆಗಾಗಿ ಇಲ್ಲಿಗೆ ಬಂದಿಲ್ಲ. ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ತುಕಾರಾಂ ನಮ್ಮ ಕೈ ಬಲಪಡಿಸುವ ನಂಬಿಕೆ ನಮಗಿದೆ.
ತಪ್ಪು ಮಾಡಿಲ್ಲ ಎಂದರೆ ನಿವೇಶನ ವಾಪಸ್ ಕೊಟ್ಟಿದ್ದು ಯಾಕೆ? ಸಿದ್ದರಾಮಯ್ಯ, ಖರ್ಗೆಗೆ ಯತ್ನಾಳ್ ಪ್ರಶ್ನೆ
ಹಿಂದೆ ಬಳ್ಳಾರಿ ಏನೇನಾಗುತ್ತಿತ್ತು ಅಂತ ನೀವೆಲ್ಲ ನೋಡಿದ್ದೀರಿ. ಬಳ್ಳಾರಿಯಲ್ಲಿ ಗಣಿ ಧಣಿಗಳಿಂದ ಲೂಟಿ ಆಗುತ್ತಿತ್ತು. ಈ ಲೂಟಿ ತಡೆಯಲು ನಾವು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು. ಅದರ ಪರಿಣಾಮ ಈಗ ಎಲ್ಲವೂ ಶಾಂತಿ ಇದೆ. ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ, ನಾವೇ ಒಂದು ಶಕ್ತಿಯಾಗಿ ನಿಂತುಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ನಮ್ಮ ಸರ್ಕಾರ ಇಂದು ಭದ್ರವಾಗಿದೆ. ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಇನ್ನು ಒಳಮೀಸಲಾತಿ ವಿಚಾರ ಸಂಬಂಧ ಮಾತನಾಡಿದ ಉಪಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ. ಕೆಲವೊಂದು ತಾಂತ್ರಿಕ ತೊಂದರೆಗಳಿವೆ. ಎಲ್ಲರಿಗೂ ನ್ಯಾಯ ಒದಗಿಸುವುದು ಪಕ್ಷದ ಗುರಿ ಧ್ಯೇಯವಾಗಿದೆ. ಈ ವಿಚಾರದಲ್ಲಿ ಬಿಜೆಪಿ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.