* ನಾಯಕತ್ವ ಬದಲಾವಣೆ ವಿಚಾರ* ರಾಜ್ಯಕ್ಕೆ ಅರುಣ್ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮನ* ಅರುಣ್ ಸಿಂಗ್ ಆಗಮನವನ್ನು ಟೀಕಿಸಿದ ಕಾಂಗ್ರೆಸ್

ಬೆಂಗಳೂರು, (ಜೂನ್.16):  ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ಪ್ರವಾಸಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟೀಕಿಸಿದೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗುತ್ತಿರುವುದಿರಂದ ಅದರನ್ನ ನಿವಾರಿಸಲು ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ಇದಕ್ಕೆ ಟ್ವಟ್ಟರ್ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಜನರ ವಿಷಯಗಳಿಗೆ ಮೌನ ವಹಿಸುವ ಬಿಜೆಪಿ ರಾಷ್ಟ್ರ ನಾಯಕರು ಕುರ್ಚಿ ಕಲಹ ನಿರ್ವಹಿಸಲು ಮಾತ್ರ ಗಡಿಬಿಡಿಯಲ್ಲಿ ಓಡೋಡಿ ಬರುತ್ತಾರೆ ಎಂದು ಕಿಡಿಕಾರಿದೆ.

ಬೆಂಗಳೂರಿಗೆ ಬಂದಿಳಿದ ಬಿಜೆಪಿ ಉಸ್ತುವಾರಿ, ರಾಜ್ಯ ರಾಜಕೀಯದಲ್ಲಿ ಸಂಚಲನ

 ಕಾಂಗ್ರೆಸ್ ಮಾಡಿರುವ ಸರಣಿ ಟ್ವೀಟ್
ಅರುಣ್ ಸಿಂಗ್ ಅವರೇ, 'ಕಟ್ಟೆ ಪಂಚಾಯ್ತಿ' ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ? ಈ ಗತಿಗೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಆಂತರಿಕ ಕಿತ್ತಾಟಗಳೇ ಸುದ್ದಿ ಮಾಡುತ್ತಿವೆ ಹೊರತು ಸಾಧನೆಗಳಲ್ಲ. ಈ ದುರಾಡಳಿತದ ಬಗ್ಗೆ ತಮಗೆ ಕನಿಷ್ಠ ವಿಷಾದ, ನಾಚಿಕೆ ಯಾವುದೂ ಇಲ್ಲವೇ.

Scroll to load tweet…

ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ" ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಅಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ 'ಶಾಪ' ತಟ್ಟಿದಂತೆ!" ಎಂದಿದೆ.

Scroll to load tweet…

ರಾಜ್ಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಬೆಲೆ ಏರಿಕೆ, ನಿರುದ್ಯೋಗ, ಕರೋನಾ 3ನೇ ಅಲೆ, ಬ್ಲಾಕ್ ಫ‌ಂಗಸ್, ರೈತರ ಸಂಕಷ್ಟ, ಆರ್ಥಿಕ ಕುಸಿತಗಳ ಬಗ್ಗೆ ಚಿಂತಿಸಲು ಸಮಯವಿಲ್ಲದ #ಬೇಜವಾಬ್ದಾರಿಬಿಜೆಪಿ 
ಸರ್ಕಾರಕ್ಕೆ ಕುರ್ಚಿ ಕದನ ನಡೆಸಲು ಮಾತ್ರ ಭರಪೂರ ಸಮಯವಿದೆ ಎಂದು ವ್ಯಂಗ್ಯವಾಡಿದೆ.

Scroll to load tweet…