Asianet Suvarna News Asianet Suvarna News

'ಕಟೀಲ್​ ಪಕ್ಷದ ಕಚೇರಿಗೆ ಭೇಟಿ ಕೊಡುವುದಕ್ಕಿಂತ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುವುದೇ ಹೆಚ್ಚು'

* ಕಾಂಗ್ರೆಸ್-ಬಿಜೆಪಿ ನಡುವೆ ಟ್ವಿಟ್ಟರ್ ವಾರ್
* ಬಿಜೆಪಿಯ ಟ್ವೀಟ್​ಗೆ ಪ್ರತ್ಯುತ್ತರ ನೀಡಿ ಟ್ವೀಟ್​ ಮಾಡಿರುವ ಕಾಂಗ್ರೆಸ್
* ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ತಿರುಗೇಟು

Karnataka Congress Hits back at BJP President Nalin Kumar Kateel rbj
Author
Bengaluru, First Published Oct 17, 2021, 8:43 PM IST

ಬೆಂಗಳೂರು, (ಅ.17): ಸಿಂದಗಿ ಹಾಗೂ ಹಾನಗಲ್​​ ಉಪಚುನಾವಣೆಯ (By Election) ಕಾವು ದಿನದಿದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರಚಾರದ ಮಧ್ಯೆ  ಮೂರು ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅದರಲ್ಲೂ ಬಿಜೆಪಿ(BJP) ಹಾಗೂ ಕಾಂಗ್ರೆಸ್9Congress) ನಡುವೆ ಟ್ವಿಟ್ಟರ್ (Twitter) ವಾರ್ ಶುರುವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ (Nalin Kumar Kateel) ಪಕ್ಷದ ಕಚೇರಿಗೆ ಭೇಟಿ ಕೊಡುವುದಕ್ಕಿಂತ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುವುದೇ ಹೆಚ್ಚು ಎಂದು ಆ ಬಾಗದ ಗುಸುಗುಸು, ನಿಜವೇ ಬಿಜೆಪಿ? ಎಂದು ಕಾಂಗ್ರೆಸ್​ ಪ್ರತ್ನಿಸಿದೆ.

ಸಿದ್ದರಾಮಯ್ಯ ವರ್ಸಸ್ ಬಿಜೆಪಿ ನಡುವೆ ಟ್ವೀಟ್ ವಾರ್

ಸಲೀಂ, ಉಗ್ರಪ್ಪ ನಡುವಿನ ವೈರಲ್​ ಸಂಭಾಷಣೆಯನ್ನು ಮುಂದಿಟ್ಟು ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ಟ್ವೀಟ್​ ಮಾಡಿದ್ದ ಬಿಜೆಪಿ, ಕೆಪಿಸಿಸಿ ರಾಜ್ಯಾಧ್ಯಕ್ಷರು ಈಗ ಭ್ರಷ್ಟಾಧ್ಯಕ್ಷ ಎಂದೇ ಕುಖ್ಯಾತರಾಗಿದ್ದಾರೆ. ಅಕ್ರಮ ಸಂಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​ ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡುವುದಕ್ಕಿಂತ ಡಿಕೆ ಶಿವಕುಮಾರ್ ಅವರು ಹೆಚ್ಚಾಗಿ ಕೋರ್ಟಿಗೆ ಅಲೆದಾಡುತ್ತಿದ್ದಾರೆ ಎಂದು ಟೀಕೆ ಮಾಡಿ ಟ್ವೀಟ್​ ಮಾಡಿತ್ತು.

ಇದಕ್ಕೆ ಬಿಜೆಪಿಯ ಟ್ವೀಟ್​ಗೆ ಪ್ರತ್ಯುತ್ತರ ನೀಡಿ ಟ್ವೀಟ್​ ಮಾಡಿರುವ ಕಾಂಗ್ರೆಸ್​​, ತಮ್ಮದೇ ಪಕ್ಷದ ಬಿಎಸ್​​​ ಯಡಯೂರಪ್ಪ ಅವರನ್ನು ಮತ್ತೊಮ್ಮೆ ಜೈಲಿಗೆ ಕಳಿಸಲು ಐಟಿ ಬಲೆ ಹೆಣೆದಿರುವ ಬಿಜೆಪಿ ಕರ್ನಾಟಕ ವಿಪಕ್ಷದವರನ್ನು ಸಿಲುಕಿಸಲು ಯತ್ನಿಸುವುದು ವಿಶೇಷವೇನಲ್ಲ ಬಿಡಿ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಪಕ್ಷದ ಕಚೇರಿಗೆ ಭೇಟಿ ಕೊಡುವುದಕ್ಕಿಂತ ಮಂಗಳೂರಿನ ಗೆಳತಿಯರ ಹಿಂದೆ ಅಲೆಯುವುದೇ ಹೆಚ್ಚು ಎಂದು ಆ ಬಾಗದ ಗುಸುಗುಸು, ನಿಜವೇ ಬಿಜೆಪಿ? ಎಂದು ಕಾಂಗ್ರೆಸ್​ ಪ್ರತ್ನಿಸಿದೆ.

Latest Videos
Follow Us:
Download App:
  • android
  • ios