ಬೆಂಗಳೂರು[ಜ.18] ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ.

ಸಂಜೆ 4.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಧ್ಯಾಹ್ನ 3.30ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿದ್ದು ಒಂದು ಗಂಟೆ   ತಡವಾಗಿ ಆರಂಭವಾಗಿದೆ.

ಬಿ.ಸಿ.ಪಾಟೀಲ್ ಪುತ್ರಿಯ ವಿವಾಹ ಸಮಾರಂಭ, ಎಚ್.ಕೆ.ಪಾಟೀಲ ಪದಗ್ರಹಣ ಸಮಾರಂಭದ ಕಾರಣದಿಂದಾಗಿ ಸಭೆ ವಿಳಂಬವಾಗಿದೆ.

ಕಾಂಗ್ರೆಸ್‌ ಸಭೆಗೆ ಬಾರದ ಶಾಸಕರು ಯಾರ‍್ಯಾರು?

ಗೈರಾದವರು ಯಾರು?
ಲೆಕ್ಕದಲ್ಲಿ ಇನ್ನೂ 7 ಶಾಸಕರು ಬಾಕಿ ಉಳಿದುಕೊಂಡಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಸಭೆಗೆ ಈವರೆಗೂ 73 ಶಾಸಕರು ಆಗಮಿಸಿದ್ದಾರೆ. ನಾಲ್ವರು ಅತೃಪ್ತ ಶಾಸಕರನ್ನು ಬಿಟ್ಟರೆ ಇನ್ನೂ 3 ಶಾಸಕರು ಇನ್ನೂ ಬಂದಿಲ್ಲ. ಸ್ಪೀಕರ್ ಆಗಿರುವುದರಿಂದ ಕೆ.ಆರ್.ರಮೇಶ್ ಕುಮಾರ್ ಅವರು ಆಗಮಿಸುವುದಿಲ್ಲ.

ಬಿ.ನಾರಾಯಣರಾವ್ ಮತ್ತು ರೂಪಾ ಶಶಿಧರ್ ಸೇರಿ ಗೋಕಾಕ್ ಶಾಸಕ,  ಶಾಸಕ ಮಹೇಶ್ ಕುಮಟಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಸೇರಿ ನಾಲ್ವರು ಅತೃಪ್ತ ಶಾಸಕರು ಶಾಸಕಾಂಗ ಸಭೆಗೆ ಆಗಮಿಸಿಲ್ಲ.