ಬೆಂಗಳೂರು, (ಜುಲೈ.21):ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು(ಮಂಗಳವಾರ) ಸಂಜೆ 5 ಗಂಟೆಗೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಲಿದ್ದಾರೆ.

ಯೂಟ್ಯೂಬ್ ಮತ್ತು ಫೇಸ್​ಬುಕ್ ಲೈವ್ ಮುಖಾಂತರ ಮಾತನಾಡಲಿರುವ ಸಿಎಂ, ಕೊರೋನಾ ನಿರ್ವಹಣೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡುವ ಸಾಧ್ಯೆತೆಗಳಿವೆ. 

ಸಂಡೇ ಲಾಕ್‌ಡೌನ್, ರಾತ್ರಿ ಕರ್ಫ್ಯೂ: ಇಂದು ಹೊಸ ಮಾರ್ಗಸೂಚಿ ಪ್ರಕಟ

ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರಿನಲ್ಲಿ ವಿಧಿಸಲಾಗಿರುವು ಲಾಕ್ ಡೌನ್ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನಲೆಯಲ್ಲಿ ಮಹತ್ವದ ವಿಚಾರಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಹೊಸ ಮಾರ್ಗಸೂಚಿ, ಮುಂದಿನ‌ ಹಂತಕ್ಕೆ ತಯಾರಿಗಳು, ಲಾಕ್​ಡೌನ್ ಮುಂದುವರಿಸುವ ಇಲ್ಲವೇ ಅಂತ್ಯವಾಗಿಸುವ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಇನ್ನು ಕೊರೋನಾ ನಿಯಂತ್ರಣಕ್ಕೆ ಜನರಿಂದ ಸಹಕಾರ ಕೋರಬಹುದು. ಸಂಕಷ್ಟಕಾಲದಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಎಂದಿರುವ ಪತಿಪಕ್ಷಗಳ ಆರೋಪಕ್ಕೆ ಸಿಎಂ ಉತ್ತರ ಕೊಡಬಹುದು. 

ಒಟ್ಟಿನಲ್ಲಿ  ಬಿಎಸ್ ಯಡಿಯೂರಪ್ಪ ಅವರ ಭಾಷಣೆ ತೀವ್ರ ಕುತೂಹಲ ಮೂಡಿಸಿದ್ದು, ಏನೆಲ್ಲಾ ಮಾತನಾಡಲಿದ್ದಾರೆ ಎನ್ನುವುದನ್ನು ಕಾದನೋಡಬೇಕಿದೆ.