* ಸಚಿವ ಎಂಟಿಬಿಯಿಂದ ಫುಡ್ ಕಿಟ್ ವಿತರಣೆ* ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡೆದಿದೆ* ಮುನಿರತ್ನ ಪರ ಬ್ಯಾಟ್ ಬೀಸಿದ ಎಂಟಿಬಿ

ಹೊಸಕೋಟೆ(ಜು. 15) ಮಳೆ ನಡುವೆ ಸಚಿವ ಎಂಟಿಬಿ ನಾಗರಾಜ್ ಆಟೋ ಚಾಲಕರಿಗೆ ಪುಡ್ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಮಿಕ ಇಲಾಖೆಯಿಂದ ಬಂದಿರುವ ಕಿಟ್ ಗಳ ವಿತರಣೆ ಮಾಡಿದ್ದಾರೆ. ನೂರಾರು ಆಟೋ ಚಾಲಕರು ಕಿಟ್ ಪಡೆದುಕೊಂಡಿದ್ದಾರೆ.

ಆಟೋಗಳ ಸಮೇತ ಕಿಟ್ ಪಡೆಯಲು ಆಗಮಿಸಿರೂ ಚಾಲಕರು ಆಗಮಿಸಿದ್ದರು. ಹೊಸಕೋಟೆ ಮತ್ತು ಕೆಆರ್ ಪುರಂ ಕಡೆಗಳಿಂದ ಆಗಮಿಸಿರೂ ಆಟೋ ಚಾಲಕರು ಕಿಟ್ ಪಡೆದುಕೊಂಡರು. ಕೊರೊನಾ ಸಂಕಷ್ಟದಲ್ಲಿರೂ ಚಾಲಕರಿಗೆ ಕಿಟ್ ನೀಡಲಾಗಿದೆ.

ದಿಲ್ಲಿಗೆ ಹೊರಟ ಸಿಎಂ ಯಡಿಯೂರಪ್ಪ

ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಅಂತ ಸಾಕಷ್ಟು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈಗ ಮಾಡಬೇಕು ಅಂತ ಏನೋ ನಡೆಯುತ್ತಿದೆ. 2 - 3 ದಿನಗಳಲ್ಲಿ ಸಿಎಂ ದೆಹಲಿಗೆ ಹೋಗೋ ಸಾಧ್ಯತೆಯಿದೆ. ಮುನಿರತ್ನ ಸಹ ಜನರಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಮಂತ್ರಿ ಮಾಡಬೇಕು ಅಂತ ಹತ್ತಾರು ಬಾರಿ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ ಎಂದು ನಾಗರಾಜ್ ತಿಳಿಸಿದರು.