Asianet Suvarna News Asianet Suvarna News

'ರಾಮ ರಾಜ್ಯದಲ್ಲಿ ಮಹಿಳೆಯರು ಸಂಜೆ ನಂತರ ಪೊಲೀಸ್ ಸ್ಟೇಶನ್ ಗೆ ಹೋಗ್ಬಾರ್ದಾ?'

* ರಂಗೇರಿದ ಕರ್ನಾಟಕ ಉಪಚುನಾವಣಾ ಸಮರ
* ಬಿಜೆಪಿ ಸರ್ಕಾರದ ಮೇಲೆ ಡಿಕೆ ಶಿವಕುಮಾರ್ ವಾಗ್ದಾಳಿ
* ನಿಮ್ಮ ಕೈಯಿಂದ ಅಧಿಕಾರ ಹೋಗುವ ಕಾಲ ಬಂದಿದೆ
* ಲಸಿಕೆ ನೀಡಿಕೆಯಲ್ಲಿ ಸಾಧನೆ ಎನ್ನುತ್ತಿರುವುದು ಸರಿ ಅಲ್ಲ

Karnataka By poll KPCC President DK Shivakumar Slams BJP Govt mah
Author
Bengaluru, First Published Oct 24, 2021, 8:31 PM IST
  • Facebook
  • Twitter
  • Whatsapp

ಹಾವೇರಿ(ಅ. 23)   ಉಪಚುನಾವಣಾ (Karnataka By Poll) ಕಣದಲ್ಲಿರುವ  ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಬಿಜೆಪಿ (BJP)ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸಂಜೆ 5ರ ನಂತರ ಪೊಲೀಸ್ ಠಾಣೆಗೆ ಮಹಿಳೆಯರು ಹೋಗದೇ ಇರೋದು ಒಳ್ಳೆಯದು ಅಂತ ಅವರು ಹೇಳುತ್ತಾರೆ. ಪ್ರತಿಯೊಬ್ಬ ಮಹಿಳೆ(Woman) ಈ ದೇಶದ ಸಂಸ್ಕೃತಿ . ಮಹಿಳೆಗೆ ಯಾವ ರೀತಿ ರಕ್ಷಣೆ ಎಷ್ಟರಮಟ್ಟಿಗೆ ಇದೆ ಅನ್ನೋದು  ಇದರಿಂದಲೇ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರವಿರೋ ಕಡೆ ಎಂತಹ ಪರಿಸ್ಥಿತಿ ಇದೆ. ಅದನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರೇ ಹೇಳಿದ್ದಾರೆ. ರಾಮ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬಂದಿದೆ ಅಂದ್ರೆ ಹೆಣ್ಣುಮಕ್ಕಳ ಸುರಕ್ಷತೆ ಹೇಗೆ ಹೀಗಿರುವಾಗ ಮಹಿಳೆಯರು ಬಿಜೆಪಿಗೆ ಮತ ಹಾಕಬೇಕಾ? ಎಂದು  ಪ್ರಶ್ನೆ ಮಾಡಿದರು.

ಜಮೀರ್ ಬಿಚ್ಚಿಟ್ಟ HDK ಸದಾಶಿವನಗರ ಗೆಸ್ಟ್ ಹೌಸ ರಹಸ್ಯ

ಕೋವಿಡ್ ಸಂಕಷ್ಟಕ್ಕೆ ಗುರಿಯಾದ ಕುಟುಂಬಗಳು ಕಣ್ಣೀರಲ್ಲೇ ಕೈತೊಳೆಯುತ್ತಿವೆ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಸೆಲಬ್ರೇಷನ್? ಎಂದು ಡಿಕೆಶಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಎಸೆದರು.  ಕೋವಿಡ್ ವ್ಯಾಕ್ಸಿನ್ ಸೆಲಬ್ರೇಷನ್ ಖಂಡನೀಯ. ಮೊದಲು ನೊಂದ ಜನರಿಗೆ ಸಹಾಯ ಮಾಡಿ. ಅದು ಸೆಲಬ್ರೇಷನ್ ಆಗುತ್ತೆ. ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಕೊಡಿ ಆಗ ಸೆಲಬ್ರೇಷನ್ ಆಗುತ್ತದೆ ಎಂದರು.

ರೈತರು ರೇಷ್ಮೆ ಜುಬ್ಬ, ಜುರುಕಿ ಚಪ್ಪಲಿ ಹಾಕಿಕೊಳ್ಳಬೇಕೆಂದು ಸಿಎಂ ಬೊಮ್ಮಾಯಿ ಹೇಳಿಕೆಯನ್ನು ಡಿಕೆಶಿ ಖಂಡಿಸಿದರು. ಯಾವ ಪುರುಷಾರ್ಥಕ್ಕೆ ಈ ರೀತಿಯ ಹೇಳಿಕೆ ನೀಡ್ತಾರೆ. ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಚಾರ ಯಾರನ್ನು ಫೂಲ್ ಮಾಡೋಕೆ ಹೊರಟಿದ್ದೀರಿ? ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕ್ರಿಯಗೊಂಡಿದೆಯಂತೆ. ಆಶ್ರಯ ಮನೆ ಕಾಲಮಿತಿಯಲ್ಲಿ ನಿರ್ಮಿಸ್ತಾರಂತೆ. ಇವರ ಸರ್ಕಾರ ಇತ್ತಲ್ಲ. ಎರಡು ವರ್ಷ ಯಾರು ಮಾಡಬೇಡ ಅಂತ ತಡೆದೋರು ಯಾರು? ಎಂದು ಸವಾಲು ಹಾಕಿದರು.

ಶೌಚಾಲಯ ಕಟ್ಟಿಸೋದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಹಾಕಲಾಗಿದೆ ಎಲ್ಲವೂ ಪಟ್ಟಣದವರಿಗೆ ಕೊಡೋದಾದ್ರೆ ಹಳ್ಳಿಯವರು ಏನು ಮಾಡಬೇಕು? ಬಿಜೆಪಿ ಅಧಿಕಾರ ಹೋಗೋ ಅಂಚಿನಲ್ಲಿದೆ. ಹೀಗಿರಬೇಕಾದ್ರೆ ನೀವೇನು ಮಾಡ್ತೀರಿ ಎಂದು ವ್ಯಂಗ್ಯವಾಡಿದರು. 

 ಹಾನಗಲ್ (Hangal) ಹಾಗೂ ಸಿಂಧಗಿ (Sindhagi) ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ.

Follow Us:
Download App:
  • android
  • ios