ಬೆಂಗಳೂರು[ಅ. 31]  ಉಪಚುನಾವಣೆ ಸಮರದಲ್ಲಿ ಒಂದು ಹೆಜ್ಜೆ ಮುಂದೆ ಇರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅಚ್ಚರಿ ರೀತಿ ಹೊಸ ಹೆಸರುಗಳು ಸೇರ್ಪಡೆಯಾಗಿದ್ದು ಇಲ್ಲಿಯೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ.

15 ಕ್ಷೇತ್ರಗಳ ಪೈಕಿ  8 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲು ಪಟ್ಟಿಯನ್ನು ಪ್ರಕಟಿಸಿದ್ದು ಹೊಸಕೋಟೆಯಿಂದ ಪದ್ಮಾವತಿ ಸುರೇಶ್ ಅವರಿಗೆ ಟಿಕೆಟ್ ದಯಪಾಲಿಸಿದೆ.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

ಇನ್ನುಳಿದ 7 ಪಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿಸುವುದು ಬಾಕಿ ಇದೆ. ಹೊಸಕೋಟೆಯಿಂದ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಶರತ್ ಬಚ್ಚೇಗೌಡ ಕಥೆ ಏನು?: ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಸಂಸದ ಹಿರಿಯ ರಾಜಕಾರಣಿ ಬಚ್ಚೇಗೌಡ ಅವರ ಪುತ್ರ ಶರತ್ ಮುಂದಿನ ಹಾದಿ ಏನು ಎಂಬುವ ಪ್ರಶ್ನೆಯೂ ಇದರೊಂದಿಗೆ ಉದ್ಭವವಾಗಿದೆ.

ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರೂ ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರದ ಪತನಕ್ಕೆ ಕಾರಣೀಕರ್ತರಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಮಣೆ ಹಾಕುವುದು ಬಹುತೇಕ ಪಕ್ಕಾ. ಇದೇ ಕಾರಣದಿಂದಲೇ ಶರತ್ ಬಚ್ಛೇಗೌಡ ಅವರಗಿಗೆ ರಾಜ್ಯ ಸರ್ಕಾರ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷಗಿರಿ ದಯಪಾಲಿಸಿತ್ತು. ಆದರೆ ಶರತ್ ಆ ಹುದ್ದೆ ಒಪ್ಪಿಕೊಳ್ಳಲಿಲ್ಲ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದವರಿವರು

ಸ್ವತಂತ್ರವಾಗಿ ಕಣಕ್ಕೆ ಇಳಿಯುತ್ತಾರಾ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎಂಟಿಬಿ ನಾಗರಾಜ್  ಬಿಜೆಪಿಯಿಂದ ಶರತ್ ಜಿದ್ದಾ ಜಿದ್ದಿ ನಡೆಸಿದ್ದರು. ಶರತ್ 6000 ಮತಗಳ ಅಂತರದ ಸೋಲು ಕಂಡಿದ್ದರು. ಆದರೆ ಈ ಬಾರಿ ಅವರಿಗೆ ಪಕ್ಷದ ಬೆಂಬಲ ಇರಲ್ಲ.. ಶರತ್ ಸ್ವತಂತ್ರವಾಗಿ ಕಣಕ್ಕೆ ಇಳಿಯುವ ಲೆಕ್ಕಾಚಾರ ಹಾಕಿಕೊಂಡರೆ ಅಚ್ಚರಿ ಏನಿಲ್ಲ.

ಲಾಭ ಯಾರಿಗೆ? ಶರತ್ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ಒಂದರ್ಥದಲ್ಲಿ ಇದು ಕಾಂಗ್ರೆಸ್ ಗೆ ಲಾಭ. ಮೊದಲಿನಿಂದಲೂ ಕಾಪಾಡಿಕೊಂಡು ಬಂದಿರುವ ಬೆಂಬಲಿಗರ ಮತ ಶರತ್ ಪಾಲಾದರೆ ಅದು ಬಿಜೆಪಿಗೆ ಹೊಡೆತ.

ಹೇಳಿಕೆ ತಂದ ಎಡವಟ್ಟು: ಕಾರ್ಯಕ್ರಮವೊಂದರಲ್ಲಿ ಮತನಾಡುತ್ತ ಶರತ್ ಟಿಪ್ಪು ಜಯಂತಿ ಪರವಾಗಿ ಮಾತನಾಡಿದ್ದರು. ನಾವು ಆಚರಣೆ ಮಾಡಲೇಬೇಕು ಎಂದಿದ್ದರು. ಈ ಸಂಗತಿ ಸಹ ರಾಜಕೀಯ ವಲಯದಲ್ಲಿ ದೊಡ್ಡ ಅಲ್ಲೋಲ-ಕಲ್ಲೋಲ ಸೃಷ್ಟಿ ಮಾಡಿತ್ತು.

ಲೆಕ್ಕಾಚಾರಗಳು ಏನೇ ಇದ್ದರೂ ಹೊಸಕೋಟೆ ಒಂದರ್ಥದಲ್ಲಿ ಎಂಟಿಬಿ ಕೋಟೆಯೇ ಆಗಿದೆ. ಡಿಕೆ ಶಿವಕುಮಾರ್ ಸಹ ಹೊಸಕೋಟೆ ಬಗ್ಗೆ ಪದೇ ಪದೇ ಮಾತನಾಡಿದ್ದು  ಉಳಿದ ಎಲ್ಲ ಉಪಚುನಾವಣಾ ಕಣಕ್ಕಿಂತ ಹೆಚ್ಚಿನ ಮಹತ್ವ ಈ ಕ್ಷೇತ್ರಕ್ಕೆ ಸಿಗುವುದು ಖಂಡಿತ.