Asianet Suvarna News Asianet Suvarna News

ಡಿಕೆಶಿಗೆ ಬ್ರೇಕ್‌: ಸಿದ್ದು ಬಾಸ್‌!

‘ಉಪ’ಕದನ: ಡಿಕೆಶಿ ಸಭೆಗೆ ಶಾಸಕರು ಗೈರು, ಸಿದ್ದು ಸಭೆಗೆ ಹಾಜರ್‌
ಬೆಳಗಾವಿ ಬಳಿಕ ಬಳ್ಳಾರಿ ಕಗ್ಗಂಟನ್ನೂ ಬಗೆಹರಿಸಿದ ಸಿದ್ದರಾಮಯ್ಯ
ಮಾಜಿ ಆದರೂ, ತಮ್ಮ ಪ್ರಭಾವ ಕಡಿಮೆ ಮಾಡಿಕೊಳ್ಳದ ಸಿದ್ದರಾಮಯ್ಯ

Karnataka By Election Congress mlas boycott DK Shivakumar meeting
Author
Bengaluru, First Published Oct 13, 2018, 8:27 AM IST
  • Facebook
  • Twitter
  • Whatsapp

ಬೆಂಗ​ಳೂರು: ಸಮ್ಮಿಶ್ರ ಸರ್ಕಾರ ಅಧಿ​ಕಾ​ರಕ್ಕೆ ತಂದ ಶ್ರೇಯಸ್ಸು ಹೊತ್ತಿ​ರುವ ಪ್ರಭಾವಿ ಸಚಿವ ಡಿ.ಕೆ. ಶಿವ​ಕು​ಮಾರ್‌ ಅವ​ರು ಪಕ್ಷ​ದಲ್ಲೂ ಹತೋಟಿ ಸಾಧಿ​ಸುವ ಪ್ರಯ​ತ್ನಗಳಿಗೆ ಒಂದಾದ ಮೇಲೊಂದರಂತೆ ಹಿನ್ನಡೆ ಉಂಟಾ​ಗ​ತೊ​ಡ​ಗಿದೆ. ಜಾರ​ಕಿ​ಹೊಳಿ ಸಹೋ​ದ​ರರ ವಿರೋ​ಧ​ದಿಂದಾಗಿ ಬೆಳ​ಗಾ​ವಿಯ ವ್ಯವ​ಹಾ​ರ​ಗ​ಳಿಂದ ದೂರ​ವಿ​ರು​ವಂತಾಗಿತ್ತು. ಇದೀಗ ಬಳ್ಳಾರಿ ಲೋಕ​ಸಭಾ ಉಪ ಚುನಾ​ವಣೆ ಅಭ್ಯರ್ಥಿ ಆಯ್ಕೆಗೆ ನಾಯ​ಕತ್ವ ನೀಡಲು ಮುಂದಾ​ಗಿ​ದ್ದಕ್ಕೂ ಜಿಲ್ಲೆಯ ಶಾಸ​ಕರ ವಿರೋ​ಧ​ ತಡೆ​ಯೊ​ಡ್ಡಿದೆ.

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಈ ಎರಡು ಜಿಲ್ಲೆ​ಗ​ಳಲ್ಲೂ ಶಿವ​ಕು​ಮಾರ್‌ ವಿರೋ​ಧಿ​ಸಿದ ಶಾಸ​ಕರು ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಅವರ ಆಶ್ರ​ಯಕ್ಕೆ ಬರು​ತ್ತಿದ್ದು, ಸಿದ್ದ​ರಾ​ಮಯ್ಯ ಮಧ್ಯ​ಸ್ಥಿಕೆ ವಹಿ​ಸಿದ ನಂತರ ಪರಿ​ಸ್ಥಿತಿ ಹತೋ​ಟಿಗೆ ಬರು​ತ್ತಿದೆ. ತನ್ಮೂ​ಲಕ ರಾಜ್ಯ ಮಟ್ಟ​ದಲ್ಲಿ ಪಕ್ಷಕ್ಕೆ ನಾಯ​ಕತ್ವ ನೀಡುವ ಡಿ.ಕೆ. ಶಿವ​ಕು​ಮಾರ್‌ ಅವರ ಪ್ರಯ​ತ್ನ​ಗ​ಳಿಗೆ ಹಿನ್ನಡೆ ಉಂಟಾಗಿ ಸಿದ್ದ​ರಾ​ಮಯ್ಯ ಅವರೇ ‘ಬಾಸ್‌’ ಎಂಬ ಸಂದೇಶ ಸ್ಪಷ್ಟ​ವಾಗಿ ರವಾ​ನೆ​ಯಾಗಿ​ದೆ.

ಸತ​ತ​ವಾಗಿ ಡಿ.ಕೆ. ಶಿವ​ಕು​ಮಾರ್‌ ನಾಯ​ಕ​ತ್ವಕ್ಕೆ ಶಾಸಕರು ಈ ರೀತಿ ನೇರ ವಿರೋಧ ಸೃಷ್ಟಿಯ ಹಿಂದೆ ಸಿದ್ದ​ರಾ​ಮಯ್ಯ ಅವರ ಪಾತ್ರ​ವಿದೆ ಎಂದೇ ಶಿವ​ಕು​ಮಾರ್‌ ಆಪ್ತ ವಲಯ ಆರೋ​ಪಿ​ಸು​ತ್ತಿದೆ. ಸಮ್ಮಿಶ್ರ ಸರ್ಕಾರ ಅಸ್ತಿ​ತ್ವಕ್ಕೆ ತಂದು ಅದರ ಶ್ರೇಯಸ್ಸು ಪಡೆ​ದಿದ್ದು ಮತ್ತು ರಾಜ್ಯದ ಎಲ್ಲಾ ಜಿಲ್ಲೆ​ಗ​ಳಲ್ಲೂ ತಮ್ಮ ಬೆಂಬ​ಲಿ​ಗ​ರನ್ನು ಪ್ರಭಾ​ವ​ಶಾ​ಲಿ​ಯಾಗಿ ಮಾಡು​ವಲ್ಲಿ ತೊಡ​ಗಿ​ಕೊಂಡಿ​ರುವ ಶಿವ​ಕು​ಮಾರ್‌ ಅವರ ವೇಗಕ್ಕೆ ತಡೆ​ಯೊ​ಡ್ಡುವ ಉದ್ದೇ​ಶ​ದಿಂದಲೇ ಸಿದ್ದ​ರಾ​ಮಯ್ಯ ಹಾಗೂ ಅವರ ಆಪ್ತರು ಶಾಸ​ಕರ ವಿರೋ​ಧವನ್ನು ಸೃಷ್ಟಿಮಾಡು​ತ್ತಿ​ದ್ದಾರೆ ಎಂದು ಆರೋ​ಪಿ​ಸ​ಲಾ​ಗು​ತ್ತಿ​ದೆ.

ಸಮ್ಮಿಶ್ರ ಸರ್ಕಾರ ರೂಪು​ಗೊ​ಳ್ಳು​ವಲ್ಲಿ ಪ್ರಧಾನ ಪಾತ್ರ ವಹಿ​ಸಿದ ಶ್ರೇಯಸ್ಸು ಹೊಂದಿ​ದ್ದರೂ ಕಾಂಗ್ರೆಸ್‌ ಶಾಸ​ಕರು ಡಿ.ಕೆ. ಶಿವ​ಕು​ಮಾರ್‌ ನಾಯ​ಕ​ತ್ವ​ವನ್ನು ಒಪ್ಪಿ​ಕೊಂಡಿಲ್ಲ ಎಂಬ ಸಂದೇಶ ರವಾ​ನೆ​ಯಾ​ಗುವಂತೆ ಮಾಡ​ಲಾ​ಗು​ತ್ತಿದೆ. ಅದ​ರಲ್ಲೂ ವಿಶೇ​ಷ​ವಾಗಿ ಬಳ್ಳಾರಿ ಜಿಲ್ಲಾ ಉಸ್ತು​ವಾ​ರಿ​ಯಾ​ಗಿ​ರುವ ಡಿ.ಕೆ. ಶಿವ​ಕು​ಮಾರ್‌ ಅವ​ರಿಗೆ ಸಹ​ಜ​ವಾಗಿಯೇ ಬಳ್ಳಾರಿ ಲೋಕ​ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೊಣೆ​ ನೀಡ​ಲಾ​ಗಿ​ತ್ತು.

ಶಿವ​ಕು​ಮಾರ್‌ ಅವರು ಮೂರು ದಿನಗಳ ಶಾಸ​ಕರ ಸಭೆ​ಯನ್ನು ತಮ್ಮ ನಿವಾ​ಸ​ದಲ್ಲಿ ನಡೆಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣ​ಗೊ​ಳಿ​ಸಲು ಯತ್ನಿ​ಸಿ​ದರು. ಆದರೆ, ಬಳ್ಳಾ​ರಿಯ ಶಾಸ​ಕರು ನಿರಂತ​ರ​ವಾಗಿ ಅವರ ಸಭೆ​ಗ​ಳಿಗೆ ಗೈರು ಹಾಜ​ರಾ​ದರು. ಹೀಗಾಗಿ ಅನಿ​ವಾ​ರ್ಯ​ವಾಗಿ ಸಭೆಯು ಕೆಪಿ​ಸಿಸಿ ಕಚೇ​ರಿಗೆ ಸ್ಥಳಾಂತ​ರ​ವಾ​ಗ​ಬೇ​ಕಾ​ಯಿತು.

ಸಿದ್ದು ಮಾತಿಗೆ ಸೈ ಎಂದ ಬಳ್ಳಾ​ರಿ ಶಾಸ​ಕರು:

ಅದ​ರಂತೆ ಶನಿ​ವಾರ ಕೆಪಿ​ಸಿಸಿ ಕಚೇ​ರಿ​ಯಲ್ಲಿ ನಡೆದ ಸಭೆ​ಯಲ್ಲಿ ಬಳ್ಳಾ​ರಿಯ ಎಲ್ಲಾ ಶಾಸ​ಕರು ಪಾಲ್ಗೊಂಡಿ​ದ್ದರು. ಈ ಸಭೆ​ಯಲ್ಲಿ ಸಿದ್ದ​ರಾ​ಮಯ್ಯ ಅವರ ನೇತೃ​ತ್ವ​ದಲ್ಲೇ ನಡೆ​ದಿದ್ದು ಆಕಾಂಕ್ಷಿ​ಗಳ ಬಗ್ಗೆ ಸವಿ​ವರ ಚರ್ಚೆ ನಡೆ​ಯಿತು.

ಶಾಸಕ ನಾಗೇಂದ್ರ ಅವರ ಸಹೋ​ದರ ವೆಂಕ​ಟೇಶ್‌ ಪ್ರಸಾದ್‌, ಹಿರಿಯ ಮುಖಂಡ ಉಗ್ರಪ್ಪ, ಶಿರ​ಗು​ಪ್ಪದ ಮಾಜಿ ಶಾಸಕ ಬಿ.ಎಂ. ನಾಗ​ರಾಜ್‌, ಸ್ಥಳೀಯ ಮುಖಂಡ ದೇವೇಂದ್ರಪ್ಪ ಅವರ ಹೆಸರು ಚರ್ಚೆಗೆ ಬಂದಿದೆ. ಅಂತಿ​ಮ​ವಾಗಿ ನಾಗೇಂದ್ರ ಸಹೋ​ದರ ವೆಂಕ​ಟೇಶ್‌ ಪ್ರಸಾದ್‌ ಅಥವಾ ದೇವೇಂದ್ರಪ್ಪ (ರಾಯ​ಚೂರು ಸಂಸದ ಬಿ.ವಿ. ನಾಯಕ ಮತ್ತು ಮಾಜಿ ಸಚಿವ ಸತೀಶ್‌ ಜಾರ​ಕಿ​ಹೊಳಿ ಅವರ ಸಂಬಂಧಿ​) ಅವರಿಬ್ಬರ ಪೈಕಿ ಒಬ್ಬ​ರಿಗೆ ಟಿಕೆಟ್‌ ನೀಡುವ ಕುರಿತು ತೀರ್ಮಾ​ನ​ವಾ​ಗಿದೆ ಎಂದು ಮೂಲಗಳು ತಿಳಿ​ಸಿ​ವೆ.

‘ಸಭೆ​ಯಲ್ಲಿ ಶಾಸ​ಕ​ರನ್ನು ಉದ್ದೇ​ಶಿಸಿ ಮಾತ​ನಾ​ಡಿದ ಸಿದ್ದ​ರಾ​ಮಯ್ಯ ಅವರು ಹೈಕ​ಮಾಂಡ್‌ ಯಾರನ್ನು ಅಭ್ಯ​ರ್ಥಿ​ಯ​ನ್ನಾಗಿ ಆಯ್ಕೆ ಮಾಡು​ತ್ತ​ದೆಯೋ ಅವ​ರನ್ನು ಎಲ್ಲಾ ಶಾಸ​ಕರು ಒಪ್ಪ​ಬೇಕು ಮತ್ತು ಪಕ್ಷದ ಅಭ್ಯ​ರ್ಥಿ​ಯನ್ನು ಗೆಲ್ಲಿ​ಸಲು ಪ್ರಯತ್ನ ನಡೆ​ಸ​ಬೇಕು’ ಎಂದು ತಾಕೀತು ಮಾಡಿದರು ಎನ್ನ​ಲಾ​ಗಿ​ದೆ.

ಸಭೆಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಡಿ. ಕೆ.ಶಿವ​ಕು​ಮಾರ್‌ ಹಾಗೂ ಬಳ್ಳಾ​ರಿಯ ಶಾಸ​ಕರು ಪಾಲ್ಗೊಂಡಿ​ದ್ದ​ರು.

Follow Us:
Download App:
  • android
  • ios