ಚಿಕ್ಕಬಳ್ಳಾಪುರ: ಇವರು ಯಾರಿಗೆ ಒಲಿತಾರೋ, ಜಯ ಅವರದ್ದೇ, ಡೌಟೇ ಬೇಡ!
ಚಿಕ್ಕಬಳ್ಳಾಪುರದಲ್ಲಿ ಉಪಸಮರದ ಜಿದ್ದಾಜಿದ್ದಿ/ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧ/ ಒಕ್ಕಲಿಗರ ಮತವೇ ನಿರ್ಣಾಯಕ/ ಕಲಮಕ್ಕೆ ಖಾತೆ ತೆರೆಯುವ ಅವಕಾಶ
* ರವಿಕುಮಾರ್ ವಿ
ಚಿಕ್ಕಬಳ್ಳಾಪುರ[ನ. 19] ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ, ಚಿಕ್ಕಬಳ್ಳಾಪುರದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ , ಜೆಡಿಎಸ್ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿತ್ತು..ಆದ್ರೆ ಈ ಬಾರಿ ಚಿಕ್ಕಬಳ್ಳಾಪುರ ಉಪ ಚುನಾವಣಾ ಕಣ ರಂಗೇರಿದ್ದು, ಸುಧಾಕರ್ ಅನರ್ಹರಾಗಿ ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.. ಹೀಗಾಗಿ ಈ ಬಾರಿಯ ಉಪಕದನ ಹೆಚ್ಚುಕೂತೂಹಲ ಮೂಡಿಸಿದ್ದು, ರಾಜ್ಯದ ಗಮನ ಸೆಳೆದಿದೆ..
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಗೆದ್ದೋರು ಮತ್ತೆ ಶಾಸಕರಾಗಿ ಆಯ್ಕೆಯಾಗಿರಲಿಲ್ಲಾ, ಆದ್ರೆ ಡಾ . ಕೆ ಸುಧಾಕರ್ ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು. . ಆದ್ರೆ ಇದೀಗ ಸುಧಾಕರ್ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು ಹ್ಯಾಟ್ರಿಕ್ ಕನಸ್ಸಿನಲ್ಲಿದ್ದಾರೆ. ಸುಧಾಕರ್ ಗೆ ಈ ಚುನಾವಣೆಯಲ್ಲಿ ಸವಾಲು ಎದುರಾಗಿದೆ.. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ತಳಮಟ್ಟದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆಯಿಲ್ಲ, ಹೀಗಾಗಿ ಸುಧಾಕರ್ ಗೆ ಸಹಜವಾಗಿಯೇ ಈ ಚುನಾವಣೆ ಸವಾಲಾಗಿದೆ.
ಜೆಡಿಎಸ್ ಅಭ್ಯರ್ಥಿ ಆಪರೇಶನ್ ಸಕ್ಸಸ್, ಮೊದಲ ಹಂತ ಗೆದ್ದ ಬಿಜೆಪಿ
ಅಭ್ಯರ್ಥಿಗಳ ಫ್ರೋಪೈಲ್ ಸಹ ನಮಗೆ ಅಷ್ಟೆ ಮುಖ್ಯವಾಗುತ್ತದೆ.
ಡಾ. ಕೆ ಸುಧಾಕರ್, ಬಿಜೆಪಿ ಅಭ್ಯರ್ಥಿ ವಿದ್ಯಾರ್ಹತೆ - MBBS
ಡಾ. ಕೆ ಸುಧಾಕರ್, ಚಿಕ್ಕಬಳ್ಳಾಪುರದಿಂದ 2 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಂಚಿತನಾಗಿ, ಕೊನೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ರು. ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.. ಬಳಿಕ ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.. ಅನರ್ಹ ಶಾಸಕರರಾದ ಬಳಿಕ ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದಕ್ಕೂ ಮೊದಲು ಸುಧಾಕರ್ ಆರ್.ವಿ .ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ದೇಶಪಾಂಡೆಗೆ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ರು.. ಬಳಿಕ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ವಿದೇಶಾಂಗ ಸಚಿವರಾಗಿದ್ದಾಗ ಶ್ರೀಲಂಕಾದ ವಾಣಿಜ್ಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ - ಎಂ ಆಂಜಿನಪ್ಪ ವಿದ್ಯಾರ್ಹತೆ - MA
ಎಂ ಆಂಜಿನಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.. ಆಂಜಿನಪ್ಪ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದು, 1980 ರಿಂದಲೂ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.. ದೇವರಾಜು ಅರಸು, ಬಂಗಾರಪ್ಪ ಅವರ ಶಿಷ್ಯವಲಯದಲ್ಲಿ ಗುರತಿಸಿಕೊಂಡಿದ್ರು.. ಎನ್ ಎಸ್ ಯುಐ ನಲ್ಲಿ ಗುರತಿಸಿಕೊಂಡಿದ್ದ ಆಂಜಿನಪ್ಪ 1989ರಲ್ಲಿ ಯುವ ಕಾಂಗ್ರೆಸ್ ನಲ್ಲಿ ಪ್ರದಾನ ಕಾರ್ಯದರ್ಶಿಯಾಗಿದ್ದರು. ಅಲ್ಲದೇ ಒಕ್ಕಲಿಗರ ಸಂಘಕ್ಕೆ ಮೂರು ಬಾರಿ ಅಂದರೆ 15 ವರ್ಷ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಇನ್ನೂ 2009 ರಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಆಂಜಿನಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ಬಳಿಕ 2013 ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಪಕ್ಷದಲ್ಲಿದ್ರು. ಆದ್ರೆ ಸುಧಾಕರ್ ಬಿಜೆಪಿಗೆ ಸೇರಿದ ಮೇಲೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ...
ಜೆಡಿಎಸ್ ಅಭ್ಯರ್ಥಿ - ರಾಧಕೃಷ್ಣ
ರಾಧಕೃಷ್ಣ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಸಹೋದರ ಸಂಬಂಧಿ, ಪತ್ನಿ ಅನಿತಾ ಕುಮಾರಸ್ವಾ ತಂಗಿಯ ಪತಿ.. ರಾಧಕೃಷ್ಣ ಅವರು ಮೂಲತಃ ರೈತ ಕುಟುಂಬದವರಾಗಿದ್ದರು, ಬಳಿಕ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದಾರೆ. ರಾಧಕೃಷ್ಣ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಾಗಮಂಗಲ ಗ್ರಾಮದವರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ರಾಧಕೃಷ್ಣ ಅವರು ಉಪಚುನಾವಣೆಗೆ ಮಾಜಿ ಶಾಸಕ ಕೆಪಿ ಬಚ್ಚೇಗೌಡರು ನಿರಾಸಕ್ತಿ ತೋರಿದ ಕಾರಣ ರಾಧಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ...
ಕ್ಷೆತ್ರದಲ್ಲಿ ಒಟ್ಟು 200622 ಮಂದಿ ಮತದಾರರಿದ್ದಾರೆ. ಅದರಲ್ಲಿ ಪುರುಷರು - 99825 ಇದ್ದರೆ ಮಹಿಳೆಯರು -100776 ಮತ್ತು ಇತರೆ - 21 ಮತಗಳಿವೆ. ಒಕ್ಕಲಿಗ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿವೆ.