Asianet Suvarna News Asianet Suvarna News

ಬಜೆಟ್ ಬಗ್ಗೆ HDK  ದಿವ್ಯ ಮೌನ, ಅಧಿವೇಶನಕ್ಕೂ ಯಾಕೆ ಬರ್ಲಿಲ್ಲ?

ಕರ್ನಾಟಕ ಬಜೆಟ್ ಮಂಡನೆ/ ಸಮತೋಲಿತ ಬಜೆಟ್ ಎಂದ ಬಿಜೆಪಿ/ ದಿವಾಳಿ ಬಜೆಟ್ ಎಂದು ಕರೆದ ಕಾಂಗ್ರೆಸ್/ ಜೆಡಿಎಸ್ ದಿವ್ಯ ಮೌನ/ ಯಾವುದೆ ಪ್ರತಿಕ್ರಿಯೆ ನೀಡದ ಕುಮಾರಸ್ವಾಮಿ/ ಅಧಿವೇಶನಕಕ್ಕೂ ಎಚ್‌ಡಿಕೆ ಗೈರು

Karnataka Budget 2021 JDS Leader HD Kumaraswamy absent no reaction mah
Author
Bengaluru, First Published Mar 8, 2021, 8:25 PM IST

ಬೆಂಗಳೂರು (ಮಾ.  08)   ಹಣಕಾಸು ಖಾತೆಯನ್ನು ಹೊಂದಿರುವ ಬಿಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಿದ್ದಾರೆ. ಬಿಜೆಪಿಯವರು ಸಮತೋಲಿತ ಬಜೆಟ್ ಎಂದರೆ ಕಾಂಗ್ರೆಸ್ ನವರು ಇದು ದಿವಾಳಿ ಬಜೆಟ್ ಎಂದು ಟೀಕಿಸಿದ್ದಾರೆ. ಆದರೆ ಈ ನಡುವೆ ಜೆಡಿಎಸ್  ಮಾತ್ರ ಮೌನ ತಾಳಿದೆ.

ಬಜೆಟ್ ಅಧಿವೇಶನ ಆರಂಭವಾದಗಲೇ ಕಪ್ಪು ಪಟ್ಟಿ ಧರಿಸಿದ್ದ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗುಡುಗಿದ ಬಿಎಸ್ ಯಡಿಯೂರಪ್ಪ ಮುಂದಿನ ಸಾರಿಯೂ  135  ಸ್ಥಾನ ಗೆದ್ದು ಕಾಂಗ್ರೆಸ್ ನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದರು.

ಕರ್ನಾಟಕ ಬಜೆಟ್ ಸಮಗ್ರ ಅಂಕಿ ಅಂಶ

ಮಾಜಿ ಸಿಎಂ ಕುಮಾರಸ್ವಾಮಿ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದರು. ಅನಿತಾ ಕುಮಾರಸ್ವಾಮಿ ಮಾತ್ರ ಕಾಣಿಸಿಕೊಂಡರು.  ಸೋಶಿಯಲ್ ಮೀಡಿಯಾದಲ್ಲಿಯೂ ಕುಮಾರಸ್ವಾಮಿ ಬಜೆಟ್ ಗೆ ಸಂಬಂಧಿಸಿ ಯಾವುದೇ  ಹೇಳಿಕೆ ನೀಡಿಲ್ಲ. 

ಬಿಜೆಪಿ ಮತ್ತು ಜೆಡಿಎಸ್ ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಮೂಲಕ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಒಲಿದಿತ್ತು.  ಇನ್ನು  ಮೈಸೂರು  ಮಹಾನಗರ ಮೇಯರ್ ಚುನಾವಣೆ ವೇಳೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಮಾಡಿಕೊಂಡಿದ್ದವು .

ಒಟ್ಟಿನಲ್ಲಿ ಬಜೆಟ್ ಹೊರತುಪಡಿಸಿಯೂ ಬಜೆಟ್ ದಿನ ಒಂದಷ್ಟು ಹೊಸ ರಾಜಕಾರಣದ ಲೆಕ್ಕಾಚಾರಗಳು ನಡೆದವು. ಕುಮಾರಸ್ವಾಮಿ ಗೈರು, ಕಾಂಗ್ರೆಸ್ ಸಭಾತ್ಯಾಗ ಮತ್ತು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಯಡಿಯೂರಪ್ಪ...

"

Follow Us:
Download App:
  • android
  • ios