ಬೆಳಗಾವಿ, (ಏ.12): ಪ್ರಾಬಲ್ಯ ಹೊಂದಿರುವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಜೀವನವನ್ನು ನಾಶ ಮಾಡಲು ಸಂಚು ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಮಹಾತ್ವಾಕಾಂಕ್ಷೆಗಳಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರ ರಾಜಕೀಯ ಜೀವನವನ್ನು ನಾಶ ಮಾಡಲು ಸಂಚು ರೂಪಿಸಿದ್ದಾರೆ ಎಂದು ಬಾಂಬ್ ಸಿಡಿಸಿದರು.

ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಯುವತಿ ಪರ ವಕೀಲರಿಂದ ಸ್ಫೋಟಕ ಮಾಹಿತಿ

ಕಾಂಗ್ರೆಸ್ ಮೂರು ಬಣಗಳಾಗಿ ವಿಭಜನೆಯಾಗಿದ್ದು ತಳ ಕಚ್ಚಿದೆ ಎಂದು ಟೀಕಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಹಿತಾಸಕ್ತಿಗಾಗಿ ಪಕ್ಷವನ್ನು ಅಳಿವಿನ ಅಂಚಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸದ್ಯ ಮುಳುಗುತ್ತಿರುವ ಹಡಗಿನಂತಾಗಿದೆ. ಇದೇ ವೇಳೆ ಪ್ರಧಾನಿ ನರೇಂದದ್ರ ಮೋದಿ ಅವರ ಜನಪ್ರಿಯತೆಯಿಂದಾಗಿ ದೇಶಾದ್ಯಂತ ಬಿಜೆಪಿ ಹೆಚ್ಚು ಪ್ರಾಬಲ್ಯವಾಗುತ್ತಿದೆ ಎಂದರು.

. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನತ್ತ ಮತ ಚಲಾಯಿಸುವ ಮೂಲಕ ಬೆಳಗಾವಿಯ ಜನರು ಮೋದಿಯಲ್ಲಿ ಹೆಚ್ಚಿನ ಶಕ್ತಿಯನ್ನು ತುಂಬಬೇಕು ಎಂದು ಮನವಿ ಮಾಡಿದರು.

ಕೇಂದ್ರ ರೈಲ್ವೆ ಮಾಜಿ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಹಠಾತ್ ನಿಧನವು ನಮ್ಮನ್ನು ಆಘಾತಕ್ಕೊಳಗಾಗಿಸಿದೆ ಎಂದು ಹೇಳಿದ ಕಟೀಲ್, ಸರಳ ಮತ್ತು ಸಮರ್ಥ ನಾಯಕನಾಗಿದ್ದು, ಕರ್ನಾಟಕದ ರೈಲು ಕ್ಷೇತ್ರದ ಅಭಿವೃದ್ಧಿಗೆ ಸಚಿವರಾಗಿ ಸಾಕಷ್ಟು ಹಣವನ್ನು ಅಂಗಡಿ ತಂದಿದ್ದರು ಎಂದು ತಿಳಿಸಿದರು.