ಬಿಜೆಪಿ ನಾಯಕರ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್, 4 ತಂಡಗಳಾಗಿ 4 ವಿಭಾಗಳಲ್ಲಿ 'ಜನಸ್ವರಾಜ್ ಯಾತ್ರೆ'

ನವೆಂಬರ್ 19 ರಿಂದ ಬಿಜೆಪಿ ನಾಯಕರು 'ಜನ ಸ್ವರಾಜ್ ಯಾತ್ರೆ'
ನಾಲ್ಕು ತಂಡಗಳಾಗಿ ನಾಲ್ಕು ವಿಭಾಗಳಲ್ಲಿ 'ಜನ ಸ್ವರಾಜ್ ಯಾತ್ರೆ'
ರಾಜ್ಯ ಪ್ರವಾಸ ಪ್ರಾರಂಭಿಸಲಿರುವ ಜನ ಸ್ವರಾಜ್ ಯಾತ್ರೆ'

Karnataka BJP Jan Swaraj yatra from november-19 to 21 rbj

ಬೆಂಗಳೂರು, (ನ.06): ಕರ್ನಾಟಕದಲ್ಲಿ (Karnataka) ರಾಜ್ಯದ ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ (Janashirvada Yatra) ನಡೆದಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ (BJP) ನಾಯಕರ ಯಾತ್ರೆ ಶುರುವಾಗಲಿದೆ.

ಹೌದು...ಇದೇ ನವೆಂಬರ್ 19 ರಿಂದ ಬಿಜೆಪಿ ನಾಯಕರು 'ಜನ ಸ್ವರಾಜ್ ಯಾತ್ರೆ' (Jan Swaraj Yatra) ಹೆಸರಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಯಡಿಯೂರಪ್ಪ ಸೇರಿ ನಾಲ್ವರು ನಾಯಕರ ನೇತೃತ್ವದ ತಂಡ ರಾಜ್ಯ ಪ್ರವಾಸ ಪ್ರಾರಂಭಿಸಲಿದೆ. 

ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ : ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜು

ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel)ನೇತೃತ್ವದ ನಾಲ್ಕು ತಂಡಗಳು ಪ್ರವಾಸ (Karnataka Tour) ಮಾಡಲಿವೆ. ಇನ್ನು ಈ ನಾಲ್ವರ ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ? ಎಲ್ಲೆಲ್ಲಿ ಪ್ರವಾಸ ಮಾಡಬೇಕು? ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.

4 ತಂಡ, ಯಾರು ಎಲ್ಲಿಗೆ ಪ್ರವಾಸ?
 ತಂಡ 1: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ನವೆಂಬರ್ 19ರಿಂದ ನ.21 ರವರೆಗೆ ಮೊದಲ‌ ಹಂತದ ಯಾತ್ರೆ ನಡೆಸಲಿದೆ. ಈ ತಂಡ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಕಟೀಲ್ ತಂಡದಲ್ಲಿ ಭಗವಂತ್ ಖೂಬಾ, ಆರಗ ಜ್ಞಾನೇಂದ್ರ, ವಿ. ಸೋಮಣ್ಣ, ನಿರಾಣಿ, ರಾಜುಗೌಡ, ಎನ್. ಮಹೇಶ್, ಮಾಲೀಕಯ್ಯ ಗುತ್ತೇದಾರ್, ಪ್ರತಾಪ್ ಸಿಂಹ ಇರಲಿದ್ದಾರೆ.

 ತಂಡ 2:  ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ತಂಡ ನವೆಂಬರ್ 19 - 21 ರವರೆಗೆ ಮೊದಲ ಹಂತದ ಯಾತ್ರೆ ನಡೆಸಲಿದೆ. ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಯಡಿಯೂರಪ್ಪ ತಂಡದಲ್ಲಿ ಪ್ರಹ್ಲಾದ್ ಜೋಷಿ, ತೇಜಸ್ವಿನಿ ಅನಂತ್ ಕುಮಾರ್, ಶ್ರೀರಾಮುಲು, ಗೋವಿಂದ ಕಾರಜೋಳ, ಎಂ.ಬಿ.ನಂದೀಶ್ ಇರಲಿದ್ದಾರೆ.

 ತಂಡ 3: ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಈಶ್ವರಪ್ಪ ತಂಡದಲ್ಲಿ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಎಸ್.ಟಿ. ಸೋಮಶೇಖರ್, ಹಾಲಪ್ಪ ಆಚಾರ್, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಎಂ.ಶಂಕರಪ್ಪ ಇರಲಿದ್ದಾರೆ.
 
 ತಂಡ 4: ಜಗದೀಶ್ ಶೆಟ್ಟರ್ ನೇತೃತ್ವದ ತಂಡ ನವೆಂಬರ್ 19-22 ರವರೆಗೆ ಮೊದಲ‌ ಹಂತದ ಯಾತ್ರೆಯನ್ನು ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಡೆಸಲಿದೆ. ಶೆಟ್ಟರ್ ತಂಡದಲ್ಲಿ ಸಚಿವ ಅಶ್ವತ್ಥ್ ನಾರಾಯಣ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಬೈರತಿ ಬಸವರಾಜ್, ಗೋಪಾಲಯ್ಯ, ಬಿ. ವೈ. ವಿಜಯೇಂದ್ರ, ಎಂ.ರಾಜೇಂದ್ರ ಇದ್ದಾರೆ.

2023ರ ಚುನಾವಣೆಗೆ ತಯಾರಿ
ಹೌದು....ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ತಯಾರಿ ನಡೆಸಿದೆ. ಇದಕ್ಕೆ ಪೂರಕವೆಂಬಂತೆ ಈಗಿನಿಂದಲೇ ಯಾತ್ರೆಗಳನ್ನ ಶುರುಮಾಡಿಕೊಂಡಿದೆ.ಈಗಾಗಲೇ ರಾಜ್ಯದ ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಾಗಿತ್ತು. ಇದೀಗ 'ಜನ ಸ್ವರಾಜ್ ಯಾತ್ರೆ' ಹೊರಡಲಿವೆ.

ಇನ್ನು ಮುಖ್ಯವಾಗಿ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಣೆ ಮಾಡಿದ್ದರು. ಗಣೇಶ ಹಬ್ಬದ ನಂತರ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದರು. ಆದ್ರೆ, ಪಕ್ಷದಲ್ಲಿನ ಬೆಳವಣಿಗೆಗಳಿಂದಾಗಿ ಅದು ಸಾಧ್ಯವಾಗಿಲ್ಲ. ಪರ-ವಿರೋಧಗಳು ವ್ಯಕ್ತವಾಗಿದ್ದರು.

 ಇದೀಗ ಹೈಕಮಾಂಡ್ ಕೇವಲ ಯಡಿಯೂರಪ್ಪ ಅವರನ್ನ ಪ್ರವಾಸ ಮಾಡುವುದಕ್ಕೆ ಬಿಟ್ರೆ ಅವರ ವರ್ಚಸ್ಸು ಹೆಚ್ಚಾಗುತ್ತದೆ. ಅದು ಮುಂದೆ ಪಕ್ಷಕ್ಕೆ ಸಂಕಷ್ಟ ತಂದೊಡ್ಡಬಹುದು ಎಂದು ಅರಿತುಕೊಂಡಿದೆ. ಈ ಹಿನ್ನೆಲೆಯಲ್ಲಿ. 'ಜನ ಸ್ವರಾಜ್ ಯಾತ್ರೆ' ಮೂಲಕ ಎಲ್ಲಾ ಪ್ರಮುಖ ನಾಯಕರನ್ನು ಒಟ್ಟುಗೂಡಿಸಿ ರಾಜ್ಯ ಪ್ರವಾಸಕ್ಕೆ ಕಳುಹಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios