ಕಾಂಗ್ರೆಸ್‌ ರಾಜ್ಯಗಳಲ್ಲೇಕೆ ಹಿಜಾಬ್‌ ಕಡ್ಡಾಯ ಮಾಡಿಲ್ಲ ರಾಹುಲ್‌ ಶಿಕ್ಷಣವನ್ನು ಕೋಮುವಾದ ಮಾಡುತ್ತಿದ್ದಾರೆ-ಟೀಕೆ ಹಿಜಾಬ್ ಬೆಂಬಲಿಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು  

ಬೆಂಗಳೂರು(ಫೆ.05): ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌(Hijab Row) ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ(Rahul Gandhi) ರಾಜ್ಯ ಬಿಜೆಪಿ(Karnataka BJP) ತಿರುಗೇಟು ನೀಡಿದ್ದು, ಭಾರತದ ಭವಿಷ್ಯಕ್ಕೆ ರಾಹುಲ್‌ಗಾಂಧಿ ಅಪಾಯಕಾರಿ ಎಂದು ತಿಳಿಸಿದೆ.

ಹಿಜಾಬ್‌ ವಿವಾದದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ(Students Education) ಅಡ್ಡಿಯಾಗುತ್ತಿದ್ದು, ದೇಶ ತನ್ನ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ರಾಹುಲ್‌ಗಾಂಧಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿ, ಶಿಕ್ಷಣವನ್ನು ಕೋಮುವಾದ(Communal) ಮಾಡುವ ಮೂಲಕ ಕಾಂಗ್ರೆಸ್‌ನ ಸಹ ಮಾಲೀಕ ರಾಹುಲ್‌ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಿದೆ.

Hijab Row ಕರ್ನಾಟಕದ 6 ಜಿಲ್ಲೆಗೆ ಹಬ್ಬಿದ ಹಿಜಾಬ್ ವಿವಾದ, ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ಬಲು ಜೋರು!

ಶಿಕ್ಷಣ ಪಡೆಯಲು ಹಿಜಾಬ್‌ ಅತ್ಯಗತ್ಯವಾಗಿದ್ದರೆ, ಕಾಂಗ್ರೆಸ್‌ ಆಡಳಿತ ಇರುವ ರಾಜ್ಯದಲ್ಲಿ ರಾಹುಲ್‌ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸಿಲ್ಲ ಎಂದು ಪ್ರಶ್ನೆ ಮಾಡಿದೆ.

ವಿದ್ಯಾರ್ಥಿನಿಯರ ಹಿಜಾಬ್‌ಗೆ ರಾಹುಲ್‌ ಬೆಂಬಲ
ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಾಬ್‌-ಕೇಸರಿ ಶಾಲು ವಿವಾದಕ್ಕೆ ಇದೀಗ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ ಮಧ್ಯಪ್ರವೇಶ ಮಾಡಿದ್ದು, ಹಿಜಾಬ್‌ ಸಹಿತ ತಮಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ಘೋಷಿಸಿದ್ದಾರೆ.

Hijab Row ಕರ್ನಾಟದ ಹಿಜಾಬ್ ವಿವಾದ, ರಾಜಕೀಯ ಉದ್ದೇಶಕ್ಕೆ ವಿದ್ಯಾರ್ಥಿಗಳು ಬಲಿಯಾದ್ರಾ

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಹಿಜಾಬ್‌ ವಿಷಯವನ್ನು ಶಿಕ್ಷಣದ ಮಾರ್ಗಕ್ಕೆ ತಂದು ಅಡ್ಡಿಪಡಿಸುವ ಮೂಲಕ ದೇಶವು ತನ್ನ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿಯುತ್ತಿದೆ. ದೇವಿ ಸರಸ್ವತಿ ಯಾರನ್ನೂ ತಾರತಮ್ಯ ಮಾಡಲ್ಲ ಮತ್ತು ಎಲ್ಲರಿಗೂ ಜ್ಞಾನವನ್ನು ಧಾರೆ ಎರೆಯುತ್ತಾಳೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮೂಲಕ ಉಡುಪಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯಕರಿಗೆ ಪ್ರವೇಶ ನಿರಾಕರಿಸಿದ್ದನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದೇ ವಿಷಯದ ಬಗ್ಗೆ ಎರಡು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್‌ ಅಬ್ದುಲ್ಲಾ ಕೂಡಾ ಪ್ರತಿಕ್ರಿಯೆ ನೀಡಿ, ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದರು. ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಕೂಡ ಹಿಜಾಬ್‌ ಧಾರಣೆ, ತಿಲಕ ಧಾರಣೆ ತಪ್ಪಲ್ಲ ಎಂದಿದ್ದರು.

ರಾಹುಲ್‌ ವಿರುದ್ಧ ಮುಂದು​ವ​ರಿದ ಬಿಜೆಪಿ ವಾಗ್ದಾ​ಳಿ
ಕೇಂದ್ರ ಸರ್ಕಾ​ರದ ಕಾರ್ಯ​ವೈ​ಖರಿ ವಿರುದ್ಧ ಸಂಸ​ತ್ತಿನ ಕಲಾ​ಪ​ದಲ್ಲಿ ವಾಗ್ದಾಳಿ ನಡೆ​ಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರು​ದ್ಧದ ಟೀಕಾ​ಪ್ರ​ಹಾ​ರ​ವನ್ನು ಬಿಜೆಪಿ ಮುಂದು​ವ​ರಿ​ಸಿದೆ. ಈ ಹಿಂದೆ ಭಾರ​ತದ ಯುವ​ರಾ​ಜ​ನಂತೆ ವರ್ತಿ​ಸು​ತ್ತಿದ್ದ ರಾಹುಲ್‌ ಗಾಂಧಿ ಅವರು ಇದೀಗ ತಮ್ಮನ್ನು ತಾವು ಮಹಾ​ರಾಜ ಅಂದು​ಕೊಂಡಿ​ದ್ದಾರೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ​ಕಾ​ರಿ​ದ್ದಾರೆ. ಈ ಹಿಂದೆ ಕಾಮಿಡಿ ಕಿಂಗ್‌ ಆಗಿದ್ದ ರಾಹುಲ್‌ ಇದೀಗ ಅಂಧ​ಕಾ​ರದ ಯುವ​ರಾ​ಜ​ನಾ​ಗಿ​ದ್ದಾರೆ ಎಂದು ರಾಹುಲ್‌ ಬಗ್ಗೆ ವ್ಯಂಗ್ಯ​ವಾ​ಡಿ​ರುವ ಬಿಜೆಪಿ ಉಪಾ​ಧ್ಯಕ್ಷ ಬೈಜ​ಯಂತ್‌ ಜೈ ಪಾಂಡಾ, ಹೌದು ಭಾರ​ತ​ವನ್ನು ರಾಜ್ಯ​ಗಳ ಒಕ್ಕೂಟ ಎಂದು ಸಂವಿ​ಧಾನ ಗುರು​ತಿ​ಸು​ತ್ತದೆ. ಇದ​ರಲ್ಲಿ ಯಾವುದೇ ಸಮ​ಸ್ಯೆ​ಯಿಲ್ಲ. ಆದರೆ ಭಾರ​ತವು ಒಂದು ದೇಶ​ವಲ್ಲ ಎಂಬುದು ಕೇವಲ ಹಾಸ್ಯಾ​ಸ್ಪದವಷ್ಟೇ ಅಲ್ಲದೆ ದುಷ್ಟಹೇಳಿ​ಕೆ​ಯಾ​ಗಿದೆ ಎಂದರು.

ದೇವ​ಸ್ಥಾನ, ಚರ್ಚ್ ಬಳಿಕ ರಾಹುಲ್‌ ಸಮ್ಮು​ಖ​ದ​ಲ್ಲಿ ಪ್ರಮಾ​ಣ
ಶಾಸ​ನ​ಸಭೆ ಆಯ್ಕೆ​ಯಾದ ಬಳಿಕ ಅನ್ಯ ಪಕ್ಷ​ಗ​ಳಿಗೆ ಪಕ್ಷಾಂತರ ಮಾಡಲ್ಲ ಎಂದು ಇತ್ತೀಚೆಗೆ ದೇವ​ಸ್ಥಾನ, ಮಸೀದಿ, ಚಚ್‌ರ್‍ಗಳಲ್ಲಿ ಪ್ರಮಾಣ ಮಾಡಿದ್ದ ಗೋವಾ ಕಾಂಗ್ರೆಸ್‌ ಅಭ್ಯ​ರ್ಥಿ​ಗಳು, ಶುಕ್ರ​ವಾರ ಇದೇ ಪ್ರಮಾ​ಣ​ವನ್ನು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಸಮ್ಮು​ಖ​ದಲ್ಲಿ ಮಾಡ​ಲಿ​ದ್ದಾರೆ. ಪುಟ್ಟರಾಜ್ಯ​ವಾ​ಗಿ​ದ್ದಾಗ್ಯೂ ಶಾಸ​ಕರ ಪಕ್ಷಾಂತರ ದೇಶ​ದಲ್ಲೇ ಅತಿ​ಹೆಚ್ಚು ಎಂಬ ಕುಖ್ಯಾ​ತಿಗೆ ಗೋವಾ ಪಾತ್ರ​ವಾ​ಗಿತ್ತು.